ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಆಗಾಗ್ಗೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಇರುವ ಈ ಜೋಡಿ, ರೀಲ್ಸ್ ವಿಡಿಯೋಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಚಂದನ್ ಶೆಟ್ಟಿ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಚಂದನ್ ಶೆಟ್ಟಿ ನೀರಿನಾಳದಲ್ಲಿ ಪತ್ನಿ ನಿವೇದಿತಾ ಗೌಡ ತುಟಿಗೆ ಚುಂಬಿಸುತ್ತಾ, ಹಾರ್ಟ್ ಸಿಂಬಲ್ ತೋರಿಸಿದ್ದಾರೆ. ಸದ್ಯ ಚಂದನ್ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ಕಮೆಂಟ್ಗಳು ಬರುತ್ತಿದ್ದು, ಮತ್ತೆ ಟ್ರೋಲ್ಗೆ ಆಗುತ್ತಿದ್ದಾರೆ.
ಇದನ್ನೂ ಓದಿ: ಟರ್ಕಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ ವಿಜಯ್ ದೇವರಕೊಂಡ; ರಶ್ಮಿಕಾ ಎಲ್ಲಿ ಎಂದ ನೆಟ್ಟಿಗರು!
ಇದನ್ನೂ ಓದಿ: ಉಜ್ಜಯಿನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಸಾರಾ ಅಲಿ ಖಾನ್; ಇಲ್ಲಿವೆ ನೋಡಿ ಫೋಟೋಗಳು…
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಟ್ರೋಲ್ಗೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ನೆಟ್ಟಿಗರು ಈ ಜೋಡಿ ವಿರುದ್ಧ ವ್ಯಂಗ್ಯವಾಡಿದ್ದರು. ಕೆಲ ತಿಂಗಳುಗಳ ಹಿಂದೆ ನಿವೇದಿತಾ ಗೌಡ, ಬಾಲಿ ಪ್ರವಾಸ ಕೈಗೊಂಡಿದ್ದಾಗ ಬಿಕಿನಿ ಧರಿಸಿ ರೀಲ್ಸ್ ಮಾಡಿದ್ದರು. ಇದು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಟ್ರೋಲ್ ಆಗಿದ್ದರು.
ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿಯ ಅಂಡರ್ ವಾಟರ್ ಕಿಸ್ಸಿಂಗ್ ವಿಡಿಯೋ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ ಹಾಗೂ 10 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಅನೇಕರು ಟ್ರೋಲ್ ಕಮೆಂಟ್ ಮಾಡುತ್ತಿದ್ದು, ಸಾರ್ವಜನಿಕವಾಗಿ ಈ ರೀತಿಯ ವಿಡಿಯೋ ಹಂಚಿಕೊಳ್ಳುವುದು ಒಳಿತಲ್ಲ ಎಂದಿದ್ದಾರೆ.