More

  ಟರ್ಕಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ ವಿಜಯ್ ದೇವರಕೊಂಡ; ರಶ್ಮಿಕಾ ಎಲ್ಲಿ ಎಂದ ನೆಟ್ಟಿಗರು!

  ನವದೆಹಲಿ: ನಟ ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರೀಯವಾಗಿದ್ದಾರೆ. ಆಗಾಗ್ಗೇ ತಮ್ಮ ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಖುಷಿ ಸಿನಿಮಾದ ಚಿತ್ರೀಕರಣಕ್ಕಾಗಿ ಟರ್ಕಿ ದೇಶಕ್ಕೆ ತೆರಳಿರುವ ನಟ ಅಲ್ಲಿನ ಸುತ್ತಾಟ ಫೋಟೋಗಳನ್ನು ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  ಚಿತ್ರೀಕರಣ ಬಿಡುವಿನ ವೇಳೆ ವಿಜಯ್ ದೇವರಕೊಂಡ ಟರ್ಕಿ ದೇಶ ಸುತ್ತಾಡುತ್ತಾ, ಅಲ್ಲಿನ ಪ್ರವಾಸಿ ತಾಣಗಳು, ರೆಸ್ಟೋರೆಂಟ್​ಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲೈಗರ್ ಸಿನಿಮಾದ ನಂತರ ವಿಜಯ್ ದೇವರಕೊಂಡ ಖುಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ.

  ವಿಜಯ್ ದೇವರಕೊಂಡ ತಮ್ಮ ಟರ್ಕಿ ದೇಶದಲ್ಲಿನ ಸುತ್ತಾಟದ ಫೋಟೋಗಳನ್ನು ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಂತೆ ನಟಿ ರಶ್ಮಿಕಾ ಎಲ್ಲಿ? ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಆಗಾಗ್ಗೇ ಸುದ್ದಿಯಾಗುತ್ತಿರುತ್ತಾರೆ. ಸಿನಿಮಾದ ಹೊರತಾಗಿ, ಇವರಿಬ್ಬರು ಡೇಟಿಂಗ್ ಮಾಡುತ್ತಾರೆ ಎಂದು ಹೆಚ್ಚು ಚರ್ಚೆಯಾಗುತ್ತದೆ.

  ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ರವಾಸ ಪ್ರಿಯರಾಗಿದ್ದು, ಚಿತ್ರೀಕರಣದ ಬಿಡುವಿನ ವೇಳೆ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ಕೆಲ ತಿಂಗಳುಗಳ ಹಿಂದೆ ಈ ಜೋಡಿ ಮಾಲ್ಡೀವ್ಸ್​ಗೆ ಒಟ್ಟಿಗೆ ತೆರಳಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts