More

  VIDEO | ಗಂಡನ ಮುಂದೆಯೇ ಗುಟ್ಕಾ ಸೇವಿಸಿದ ವಧು; ಈಕೆಗೆ ಬಾಲಿವುಡ್ ನಟರ ಜಾಹೀರಾತು ಸ್ಫೂರ್ತಿ ಎಂದ ನೆಟ್ಟಿಗರು!

  ರಾಜಸ್ಥಾನ: ಇತ್ತೀಚೆಗಷ್ಟೇ ಬರಾನ್ ಜಿಲ್ಲೆಯಲ್ಲಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಸಮ್ಮೇಳನ ವಿಶೇಷವಾದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ಮೇ 26ರಂದು ನಡೆದಿದ್ದ ಸಾಮಾಹಿಕ ವಿವಾಹದಲ್ಲಿ ಬರೋಬ್ಬರಿ 2222 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕೇವಲ 12 ಗಂಟೆಯಲ್ಲಿ 2222 ಜೋಡಿಗಳು ಮದುವೆಯಾಗಿರುವುದು ಗಿನ್ನೆಸ್ ದಾಖಲೆಗೆ ಕಾರಣವಾಗಿತ್ತು. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಬರಾನ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹದ ಸಂದರ್ಭದ್ದು ಎನ್ನಲಾಗಿದೆ.

  ಸಾಮೂಹಿಕ ವಿವಾಹ ಸಮಾರಂಭ ಮುಕ್ತಾಯವಾದ ಬಳಿಕ ಕುಟುಂಬಸ್ಥರು ವಧುವನ್ನು ಬೀಳ್ಕೊಡಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ವರ ಯಾರನ್ನೋ ಮಾತನಾಡಿಸಲು ಮುಂದಾಗಿದ್ದ ಸಂದರ್ಭದಲ್ಲಿ, ವಧು ಗುಟ್ಕಾ ತೆಗೆದುಕೊಂಡಿದ್ದಾಳೆ. ಬಳಿಕ ಕೈಯ್ಯಲ್ಲಿ ಉಜ್ಜುತ್ತಾ ಹದಗೊಳಿಸಿ ಗುಟ್ಕಾ ಸೇವಿಸಿದ್ದಾಳೆ. ನವ ವಿವಾಹಿತೆ ತನ್ನ ಗಂಡನ ಮುಂದೆಯೇ ಗುಟ್ಕಾ ತಿನ್ನುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

  ಇದನ್ನೂ ಓದಿ: ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!

  ಇದನ್ನೂ ಓದಿ: ಉಜ್ಜಯಿನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಸಾರಾ ಅಲಿ ಖಾನ್‌; ಇಲ್ಲಿವೆ ನೋಡಿ ಫೋಟೋಗಳು…

  ಇದೀಗ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಗಂಡನ ಮುಂದೆಯೇ ಗುಟ್ಕಾ ಜಗಿಯಲು ಮುಂದಾಗಿರುವ ಈಕೆಯ ಧೈರ್ಯವನ್ನು ಮೆಚ್ಚುಬೇಕು. ಪುರುಷರಂತೆ ಮಹಿಳೆಯರೂ ಗುಟ್ಕಾದ ರುಚಿ ಇಷ್ಟಪಡುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲಸವರು ಈಕೆ ಶಾರುಖ್ ಖಾನ್, ಅಜಯ್ ದೇವಗನ್ ಅವರಿಂದ ಸ್ಫೂರ್ತಿಗೊಂಡಿರಬಹುದು ಎಂದು ತಮಾಷೆ ಧಾಟಿಯಲ್ಲಿ ಕಮೆಂಟ್ ಮಾಡಿದ್ದಾರೆ.

  ಸಾಮೂಹಿಕ ವಿವಾಹಕ್ಕಾಗಿ 3.25 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ವಾಟರ್ ಪ್ರೂಫ್ ಪೆಂಡಾಲ್ ಹಾಕಲಾಗಿತ್ತು. ಸರ್ವಧರ್ಮ ವಿವಾಹ ಸಮ್ಮೇಳನದಲ್ಲಿ ನವ ದಂಪತಿಗಳಿಗೆ ಆಶೀರ್ವಾದ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸಂತರು ಆಗಮಿಸಿದ್ದರು ಎಂದು ವರದಿಯಾಗಿದೆ.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts