ತುಮಕೂರು | ಠಾಣೆಗೆ ದೇವರನ್ನು ಹೊತ್ತು ತಂದು ಪೊಲೀಸರಿಂದ ವಿಶೇಷ ಪೂಜೆ!

Tipatur Police
Published on

ತುಮಕೂರು: ಪೊಲೀಸ್ ಠಾಣೆಗೆ ದೇವರುಗಳನ್ನು ಕರೆಸಿ ವಿಶೇಷ ಪೂಜೆ ಸಲ್ಲಿಸಿರುವ ಕುತೂಹಲಕಾರಿ ಘಟನೆಯೊಂದು ಜಿಲ್ಲೆಯ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ದೇವರಿಗೆ ವಿಶೇಷ ಅಲಂಕಾರ ಮಾಡಿ ಇಡೀ ದಿನ ಪೊಲೀಸ್ ಠಾಣೆಯಲ್ಲಿ ಪೂಜೆ-ಪುನಸ್ಕಾರ ನೆರವೇರಿದೆ. ಈ ಅಪರೂಪದ ಘಟನೆ ಕಳೆದ ಶನಿವಾರ ನಡೆದಿದೆ.

ಸಮವಸ್ತ್ರ ಧರಿಸಿದ ಪೊಲೀಸರು ಠಾಣೆ ಎದುರಿನ‌ ಹಳ್ಳಿಕಟ್ಟೆಯಿಂದ ಕೆಂಪಮ್ಮ ದೇವಿ, ಚಿಕ್ಕಮ್ಮ ದೇವಿ, ಶ್ರೀ ಭೂತರಾಯ ದೇವರನ್ನು ಹೆಗಲ ಮೇಲೆ ಠಾಣೆಗೆ ಹೊತ್ತು ತಂದಿದ್ದಾರೆ. ಬಳಿಕೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿ, ಎಡೆ ಸೇವೆ ನೆರವೇರಿಸಿದ್ದಾರೆ.

ಠಾಣೆಯಲ್ಲಿ ವಿಶೇಷ ಪೂಜೆಯ ಬಳಿಕ ಸಾರ್ವಜನಿಕರಿಗೆ ಪಾನಕ, ಫಲಹಾರದ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: VIDEO | ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ 2ನೇ ಸ್ಥಾನ; ಗಂಡನ ಕೋಪಕ್ಕೆ ಪುಡಿಯಾಯ್ತು ನಂ.1 ಸ್ಪರ್ಧಿಯ ಮುಡಿಗೇರಬೇಕಿದ್ದ ವಜ್ರದ ಕಿರೀಟ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net