ಸಿನಿಮಾ

ಬಹುತೇಕ ಪೊಲೀಸ್ ಅಧಿಕಾರಿಗಳ ಮಕ್ಕಳು ಮಾದಕ ವ್ಯಸನಿಗಳಾಗಿದ್ದಾರೆ!

ಕೊಚ್ಚಿ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿಗಳ ಮಕ್ಕಳು ಡ್ರಗ್ಸ್ ವ್ಯಸನಿಗಳಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯೊಂದನ್ನು ಕೊಚ್ಚಿ ಪೊಲೀಸ್ ಕಮಿಷನರ್ ಕೆ.ಸೇತುರಾಮನ್ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಇಲಾಖೆಯನ್ನು ಹಸಿರೀಕರಣ ಮಾಡಲ್ಲ, ಸಂವಿಧಾನೀಕರಣ ಮಾಡುತ್ತೇವೆ; ಯತ್ನಾಳ್ ಹೇಳಿಕೆಗೆ ಟಾಂಗ್ ಕೊಟ್ಟ ಕಾಂಗ್ರೆಸ್

ಅಂಗಮಾಲಿಯಲ್ಲಿ ನಡೆದ ಕೇರಳ ಪೊಲೀಸ್ ಅಧಿಕಾರಿಗಳ ಸಂಘದ ರಾಜ್ಯ ಸಮ್ಮೇಳನದಲ್ಲಿ ಕಮಿಷನರ್ ಕೆ.ಸೇತುರಾಮನ್ ಮಾತನಾಡುತ್ತಾ, ಕೇರಳ ರಾಜ್ಯದಲ್ಲಿರುವ ಡ್ರಗ್ಸ್ ಹಾವಳಿಯ ತೀವ್ರತೆಯ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ತಮ್ಮ ಸಹೋದ್ಯೋಗಿ ಅಧಿಕಾರಿಯೊಬ್ಬರ ಮಗ ಮಾದಕ ವ್ಯಸನದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು.

ಇಲಾಖೆಯ ಎಲ್ಲಾ ಶ್ರೇಣಿಯ ಪೊಲೀಸ್ ಅಧಿಕಾರಿಗಳ ಮಕ್ಕಳು ಡ್ರಗ್ಸ್ ಚಟಕ್ಕೆ ದಾಸರಾಗುತ್ತಿದ್ದಾರೆ. ಐಪಿಎಸ್ ಅಧಿಕಾರಿಯೊಬ್ಬರ ಇಬ್ಬರು ಮಕ್ಕಳು ಕೂಡ ಮಾದಕ ವ್ಯಸನಿಗಳಾಗಿದ್ದು, ಅವರ ಕುಟುಂಬ ತಲೆತಗ್ಗಿಸುವಂತಾಗಿದೆ. ತಿರುವನಂತಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮಗ ಡ್ರಗ್ಸ್ ವ್ಯಸನದಿಂದ ಕೊಲೆಯಾಗಿ ಹೋಗಿದ್ದಾನೆ. ಪ್ರಸ್ತುತ ದಿನಗಳಲ್ಲಿ ಈ ಬೆಳವಣಿಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ಫ್ಯಾಷನ್ ಉದ್ಯಮಿಯೊಂದಿಗೆ ಎರಡನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ!

ಕೇರಳದಲ್ಲಿ ಮಾದಕ ದ್ರವ್ಯ ಸೇವನೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಮಾದಕ ದ್ರವ್ಯ ಸೇವನೆಯಿಂದ ಬಲಿಯಾದ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನರ ಬಗ್ಗೆ ಕೇರಳ ಪೊಲೀಸರು ಸಮೀಕ್ಷೆ ನಡೆಸಿದಾಗ ಆಘಾತಕಾರಿ ಮಾಹಿತಿಯೊಂದು ಲಭ್ಯವಾಗಿದೆ. ಜೀವ ಕಳೆದುಕೊಂಡವರಲ್ಲಿ 40%ದಷ್ಟು ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಕಮಿಷನರ್ ಕೆ.ಸೇತುರಾಮನ್ ಹೇಳಿದರು.

Latest Posts

ಲೈಫ್‌ಸ್ಟೈಲ್