ನವದೆಹಲಿ: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ಕೊಲ್ಕತಾ ಕ್ಲಬ್ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಆಶಿಶ್ ಹಾಗೂ ರೂಪಾಲಿ ತಮ್ಮ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾದರು. ಆಶಿಶ್ ವಿದ್ಯಾರ್ಥಿ ಈ ಹಿಂದೆ ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಖಾಸಗಿ ಮಾಹಿತಿ ಸೋರಿಕೆ; ಕಿರುಕುಳ ಅನುಭವಿಸುತ್ತಿದ್ದಾರಂತೆ ನಟಿ ಅದಾ ಶರ್ಮಾ!
ಇಬ್ಬರಿಗೂ ಸರಳವಾಗಿ ಮದುವೆ ಆಗಬೇಕು ಎಂಬ ಬಯಕೆ ಇತ್ತು. ಅದರಂತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಇಂದು ಬೆಳಗ್ಗೆ ರಿಜಿಸ್ಟರ್ ಮದುವೆಯಾಗಿದ್ದು, ಸಂಜೆ ಸಣ್ಣ ಗೆಟ್ ಟು ಗೆದರ್ ನಡೆಯಲಿದೆ ಎಂದು ಆಶಿಶ್ ವಿದ್ಯಾರ್ಥಿ ಸ್ಪಷ್ಟನೆ ಕೊಟ್ಟಿದ್ದಾರೆ. ನೀವಿಬ್ಬರು ಎಲ್ಲಿ ಮೊದಲು ಭೇಟಿಯಾದಿರು ಎಂದು ಕೇಳಿದಾಗ, ಓಹ್… ಅದೊಂದು ದೊಡ್ಡ ಕಥೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 7 ವರ್ಷದ ಬಾಲಕಿಯನ್ನು ಖರೀದಿಸಿ ಮದುವೆಯಾದ 38 ವರ್ಷದ ವ್ಯಕ್ತಿ!
11 ಭಾಷೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆಶಿಶ್ ವಿದ್ಯಾರ್ಥಿ ನಟಿಸಿದ್ದಾರೆ. ಗುವಾಹಟಿ ಮೂಲದ ರೂಪಾಲಿ, ಕೊಲ್ಕತಾದಲ್ಲಿ ದೊಡ್ಡಮಟ್ಟದಲ್ಲಿ ಫ್ಯಾಷನ್ ಅಂಗಡಿ ಹೊಂದಿದ್ದಾರೆ.