More

    ಖಾಸಗಿ ಮಾಹಿತಿ ಸೋರಿಕೆ; ಕಿರುಕುಳ ಅನುಭವಿಸುತ್ತಿದ್ದಾರಂತೆ ನಟಿ ಅದಾ ಶರ್ಮಾ!

    ನವದೆಹಲಿ: ಬಿಡುಗಡೆಯಾದ ದಿನದಿಂದ ‘ದಿ ಕೇರಳ ಸ್ಟೋರಿ’ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಇದೀಗ ಸಿನಿಮಾದ ನಟಿ ಅದಾ ಶರ್ಮಾ ಅವರ ಖಾಸಗಿ ಮಾಹಿತಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾದ ಅದೊಂದು ದೃಶ್ಯದ ಬಗ್ಗೆ ಅಜ್ಜಿಯ ಪ್ರತಿಕ್ರಿಯೆಗೆ ಹೆದರುತ್ತಿದ್ದೆ: ಅದಾ ಶರ್ಮಾ

    ಖಾಸಗಿ ಮಾಹಿತಿಗಳು ಆನ್​ಲೈನ್​ನಲ್ಲಿ ಸೋರಿಕೆಯಾದ ನಂತರ ಅದಾ ಶರ್ಮಾ ಸಾಕಷ್ಟು ಕಿರುಕುಳ ಅನುಭವಿಸಿದ್ದಾರೆ. ಹೊಸ ಮೊಬೈಲ್ ಸಂಖ್ಯೆಯನ್ನೂ ಜಾಲತಾಣಗಳಲ್ಲಿ ಹರಿಬಿಡುವುದಾಗಿ ‘jhamunda_bolte’ ಹೆಸರಿನ ಇನ್ಸ್​ಟಾಗ್ರಾಂ ಖಾತೆಯಿಂದ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ನಟಿ ಸೈಬರ್ ಠಾಣೆಗೆ ಮಾಹಿತಿ ನೀಡಿದ್ದು, ಬೆದರಿಕೆ ಬಂದಿರುವ ಇನ್ಸ್​ಟಾಗ್ರಾಂ ಖಾತೆ ಸದ್ಯ ನಿಷ್ಕ್ರೀಯಗೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

    ಮೇ 5 ರಂದು ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾ ಕೇರಳದ ಹಿಂದು ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್)ಗೆ ಸಾಗಿಸುವ ಕಥೆಗಳ ಸುತ್ತ ಚಿತ್ರಕಥೆ ಸುತ್ತುತ್ತದೆ. ಬಿಡುಗಡೆಯಾದಾಗಿನಿಂದಲೂ ಈ ಸಿನಿಮಾದ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಯಾಗುತ್ತಿದೆ.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡುವಂತೆ ನೋಟಿಸ್ ನೀಡಿದ ಪ್ರಿನ್ಸಿಪಾಲ್!

    ಸಿನಿಮಾ ಬಿಡುಗಡೆಯಾದ ದಿನದಿಂದಲೂ ಚಿತ್ರದಲ್ಲಿ ನಟಿಸಿರುವ ನಟಿಯರಿಗೆ ಹಾಗೂ ತಂಡದ ಸದಸ್ಯರಿಗೆ ಬೆದರಿಕೆ ಸಂದೇಶಗಳು ನಿರಂತರವಾಗಿ ಬರುತ್ತಿವೆ. ಆರಂಭದಲ್ಲಿ, ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಬೆದರಿಕೆ ಕರೆ ಬಂದಿತ್ತು. ಸಾಕಷ್ಟು ವಿರೋಧಗಳ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದೆ. ಈಗಾಗಲೇ 200 ಕೋಟಿ ರೂ. ಕ್ಲಬ್​ಗೂ ಸೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts