More

    ಬೇರೆ ಜಾತಿಯವರನ್ನು ಮದುವೆಯಾದರೆ ಆಸ್ತಿ ಹಕ್ಕು ಕಳೆದುಹೋಗುತ್ತದೆಯೇ? ಇಲ್ಲಿದೆ ಮಾಹಿತಿ…

    ಬೇರೆ ಜಾತಿಯವರನ್ನು ಮದುವೆಯಾದರೆ ಆಸ್ತಿ ಹಕ್ಕು ಕಳೆದುಹೋಗುತ್ತದೆಯೇ? ಇಲ್ಲಿದೆ ಮಾಹಿತಿ…ಪ್ರಶ್ನೆ: ನಮ್ಮ ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ನಾನು ಹಿಂದೂ. ಆದರೆ ಕ್ರಿಶ್ಚಿಯನ್ ಜನಾಂಗದವರನ್ನು ಮದುವೆಯಾದೆ. ಆ ಮತಕ್ಕೆ ಮತಾಂತರವೂ ಆಗಿದ್ದೇನೆ. ಹತ್ತು ವರ್ಷಗಳಿಂದ ನಮ್ಮ ತಂದೆ ತಾಯಿಯ ಸಂಪರ್ಕದಲ್ಲಿ ಇಲ್ಲ. ಈಗ ನಮ್ಮ ತಂದೆ ತೀರಿಕೊಂಡಿದ್ದಾರೆ. ನಮ್ಮ ತಾಯಿ ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ನನಗೆ ಏನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ತಂದೆಯ ಎಲ್ಲ ಆಸ್ತಿಯನ್ನೂ ಅವರ ತಂಗಿಯ ಮಗನಿಗೇ ದಾನ ಮಾಡುತ್ತೇನೆ ಎನ್ನುತ್ತಿದ್ದಾರೆ. ನನಗೆ ಭಾಗ ಬರುವುದಿಲ್ಲವೇ?

    ಉತ್ತರ: ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ನಿಮಗೂ ನಿಮ್ಮ ತಾಯಿಗೂ ಸಮಭಾಗ ಇರುತ್ತದೆ. ಅಂತರ್ಜಾತೀಯ ವಿವಾಹ ಮಾಡಿಕೊಂಡರೆ ನಿಮ್ಮ ಹಕ್ಕು ಕುಂಠಿತವಾಗುವುದಿಲ್ಲ. ನೀವು ಧೈರ್ಯವಾಗಿ ವಿಭಾಗದ ಕೇಸು ಹಾಕಬಹುದು. ಹಿಂದೂ ವಾರಸಾ ಕಾಯ್ದೆಯ ಸೆಕ್ಷನ್ 26ರಂತೆ ನಿಮ್ಮ ಮಕ್ಕಳಿಗೆ ನಿಮ್ಮ ತಂದೆಯ ಆಸ್ತಿಯಲ್ಲಿ ಹಕ್ಕು ಕೇಳಲು ಬರುವುದಿಲ್ಲ. ನೀವು ಕೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts