ಸಿನಿಮಾ

7 ವರ್ಷದ ಬಾಲಕಿಯನ್ನು ಖರೀದಿಸಿ ಮದುವೆಯಾದ 38 ವರ್ಷದ ವ್ಯಕ್ತಿ!

ಜೈಪುರ: ಹಣದ ಆಸೆಗಾಗಿ ಪಾಲಕರು ತಮ್ಮ ಏಳು ವರ್ಷದ ಮಗಳನ್ನು 4.5 ಲಕ್ಷ ರೂಪಾಯಿಗೆ 38 ಹರೆಯದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾರೆ. ಆತ ಬಾಲಕಿಯನ್ನು ಮದುವೆಯಾಗಿದ್ದಾನೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಘಟನೆ ರಾಜಸ್ಥಾನದ ಧೋಲ್​ಪುರ ಜಿಲ್ಲೆಯ ಮೇನಿಯಾ ಎಂಬಲ್ಲಿ ನಡೆದಿದೆ. ಇದನ್ನೂ ಓದಿ: ತಾಳಿ ಕಟ್ಟದೆ ಓಡಿ ಹೋಗುತ್ತಿದ್ದ ವರನನ್ನು 20 ಕಿ.ಮೀ. ಬೆನ್ನಟ್ಟಿ ಮಂಟಪಕ್ಕೆ ಎಳೆದು ತಂದ ವಧು!

38ರ ವರ್ಷದ ಭೂಪಾಲ್ ಸಿಂಗ್ 4.50 ಲಕ್ಷ ರೂ. ನೀಡಿ ಬಾಲಕಿಯನ್ನು ಆಕೆಯ ತಂದೆಯಿಂದ ಖರೀದಿ ಮಾಡಿದ್ದು, ಕಳೆದ ಮೇ 21 ರಂದು ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಭೂಪಾಲ್ ಸಿಂಗ್ ಮನೆಗೆ ದಾಳಿ ಮಾಡಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಬೇರೆ ಜಾತಿಯವರನ್ನು ಮದುವೆಯಾದರೆ ಆಸ್ತಿ ಹಕ್ಕು ಕಳೆದುಹೋಗುತ್ತದೆಯೇ? ಇಲ್ಲಿದೆ ಮಾಹಿತಿ…

ಹಣದ ಆಮೀಷವೊಡ್ಡಿ ಬಾಲಕಿಯನ್ನು ಕರೆತಂದಿರುವುದಾಗಿ ಆರೋಪಿ ಭೂಪಾಲ್ ಸಿಂಗ್ ಒಪ್ಪಿಕೊಂಡಿದ್ದಾನೆ. ಮಧ್ಯಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ ನಂತರ ಆರೋಪಿಯ ಕುಟುಂಬ ಮೇನಿಯಾ ಗ್ರಾಮದಲ್ಲಿ ಬಂದು ನೆಲೆಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಖಂಡೇಲ್ವಾಲ್ ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್