ಸಿನಿಮಾ

ಹಾಲಿವುಡ್‌ಗೆ ರಾಮ್‌ಚರಣ್? ಜಿ20 ಶೃಂಗ ಸಭೆಯಲ್ಲಿ ಕುತೂಹಲ ಮೂಡಿಸಿದ ಮಾತು

ನವದೆಹಲಿ: ‘ಆರ್‌ಆರ್‌ಆರ್’ ಯಶಸ್ಸಿನ ಬಳಿಕ ರಾಮಚರಣ್ ತೇಜ ಹಾಲಿವುಡ್‌ಗೆ ಹೋಗುವ ಬಗ್ಗೆ ಆಗಾಗ ವರದಿಯಾಗುತ್ತಿದೆ. ಖುದ್ದು ರಾಮಚರಣ್ ಕೂಡ ‘ಹಾಲಿವುಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕರೆ, ಖಂಡಿತ ನಟಿಸುತ್ತೇನೆ’ ಎಂದು ಅಮೆರಿಕದಲ್ಲಿ ಹೇಳಿಕೊಂಡಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರ ಹಾಲಿವುಡ್ ಪ್ರಾಜೆಕ್ಟ್ ಲಾಂಚ್ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ರಾಮ್ ಮತ್ತೊಮ್ಮೆ ಹಾಲಿವುಡ್ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗಷ್ಟೆ ಕಾಶ್ಮೀರದಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯಲ್ಲಿ ಭಾಗಿಯಾಗಿರುವ ಅವರು, ‘ನನಗೆ ಭಾರತವನ್ನು ಇನ್ನಷ್ಟು ಹೆಚ್ಚು ಶೋಧಿಸುವ ಆಸೆಯಿದೆ. ಭಾರತದ ಮಣ್ಣಿನಲ್ಲಿರುವ ಕಥೆಗಳಲ್ಲಿ ಒಂದು ಘನತೆ ಇದೆ. ನಮ್ಮ ಶ್ರೀಮಂತ ಸಂಸ್ಕೃತಿ, ಇಲ್ಲಿನ ಭಾವನೆಗಳ ಕುರಿತು ಜನರಿಗೆ ತಲುಪಿಸುವ ಆಸೆಯಿದೆ. ಆದರೆ, ಹಾಲಿವುಡ್‌ನಿಂದ ಆರ್ ಬರುವವರೆಗೂ ನಾನು ಅಲ್ಲಿಗೆ ಹೋಗುವ ಬಗ್ಗೆ ಯೋಚಿಸುವುದಿಲ್ಲ’ ಎಂದಿದ್ದಾರೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹಾಗಾದರೆ ರಾಮ್ ಹಾಲಿವುಡ್‌ಗೆ ಯಾವಾಗ ಹೋಗಬಹುದು ಎಂಬ ಪ್ರಶ್ನೆಗೆ ಕಾರಣವಾಗಿದೆ.

ಇದನ್ನೂ ಓದಿ: ಇದು ಡಬಲ್ ಸ್ಟೇರಿಂಗ್ ಸರ್ಕಾರ; ಬಸ್ಸು ಯಾವ ಕಡೆ ಹೋಗುತ್ತೋ ಗೊತ್ತಿಲ್ಲ: ವಿಜಯೇಂದ್ರ

ಅಲ್ಲದೆ, ‘ಒಂದು ಚಿತ್ರವನ್ನು ಶೂಟ್ ಮಾಡಲು ಅದ್ಭುತ ಜಾಗವೆಂದರೆ ಅದು ಕಾಶ್ಮೀರ. ನನ್ನ ತಂದೆ ಚಿರಂಜೀವಿ ಕೂಡ ಇಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದರು. ಸುಮಾರು 95 ವರ್ಷಗಳಿಂದ ಚಿತ್ರರಂಗ ಈ ಜಾಗದಲ್ಲಿ ಚಿತ್ರೀಕರಣ ಮಾಡುತ್ತಿದೆ. ಬಹುಶಃ ಕಾಶ್ಮೀರವನ್ನು ಶೋಧಿಸಲು ಇನ್ನೂ 95 ವರ್ಷಗಳು ಸಾಲದು’ ಎಂದು ಕಾಶ್ಮೀರದ ಸೌಂದರ್ಯವನ್ನು ರಾಮ್ ವರ್ಣಿಸಿದ್ದಾರೆ.

ಸದ್ಯ ರಾಮಚರಣ್ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬರಲಿರುವ ಕಿಯಾರಾ ಅಡ್ವಾಣಿ ನಾಯಕಿಯಾಗಿರುವ ‘ಗೇಮ್ ಚೇಂಜರ್’ ಹಾಗೂ ಬುಚಿ ಬಾಬು ಸಾನ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್