ಸಿನಿಮಾ

ತೂಕ ಇಳಿಸಿಕೊಳ್ಳಲು ಮನೆಯಲ್ಲಿ ತಯಾರಿಸಿ 7 ಅತ್ಯುತ್ತಮ ಪ್ರೋಟೀನ್ ಶೇಕ್ಸ್

ಬೆಂಗಳೂರು: ಪ್ರೋಟೀನ್ ಭರಿತ ಶೇಕ್‌ಗಳು ವ್ಯಾಯಮದ ನಂತರ ದೇಹಕ್ಕೆ ಅತ್ಯಗತ್ಯ ಎಂದು ಹೇಳಲಾಗಿದೆ. ಜಿಮ್‌ಗೆ ಹೋಗುವವರು ಸ್ನಾಯುವಿನ ಚೇತರಿಕೆಯನ್ನು ಹೆಚ್ಚಿಸಲು ಮತ್ತು ವ್ಯಾಯಾಮದ ನಂತರದ ಸ್ನಾಯು ನೋವನ್ನು ನಿಯಂತ್ರಿಸಲು ಪ್ರೋಟೀನ್​ ಶೇಕ್​ಗಳನ್ನು ಸೇವಿಸುತ್ತಾರೆ. ಸ್ನಾಯುಗಳ ರಕ್ಷಣೆಗೆ ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಶೇಕ್‌ಗಳು ಅತ್ಯುತ್ತಮವಾಗಿದ್ದು, ಇವುಗಳು ಸುರಕ್ಷಿತವಾಗಿರುತ್ತವೆ. ಮನೆಯಲ್ಲಿಯೇ ಈ ಕೆಳಗಿನ ಪ್ರೋಟೀನ್​ ಶೇಕ್​ಗಳನ್ನು ತಯಾರಿಸಬಹುದಾಗಿದೆ.

ತೆಂಗಿನಕಾಯಿ-ಬಾದಾಮಿ ಶೇಕ್:
ಬಾದಾಮಿ ಮತ್ತು ಹಾಲು ಪ್ರೋಟೀನ್​ನಿಂದ ಸಮೃದ್ಧವಾಗಿದ್ದು ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಕೂಡಿವೆ. ಇವುಗಳು ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿವೆ.

ಫಿನಟ್ಸ್​​ ಬಟರ್​ ಶೇಕ್:
ಫಿನಟ್ಸ್​​ ಬಟರ್​ ದೇಹವನ್ನು ದೀರ್ಘಕಾಲದವರೆಗೆ ಸಂತೃಪ್ತವಾಗಿಡಲು ಸಹಾಯಕವಾಗಿದೆ. ಇದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದರಿಂದ ಒಂದು ಚಮಚ ಫಿನಟ್ಸ್ ಬಟರ್​, ಹಾಲು, ಕೆಲವು ಹಣ್ಣುಗಳನ್ನು ಬಳಸಿ ಪ್ರೋಟೀನ್ ಶೇಕ್ ಮಾಡಬಹುದು.

ಇದನ್ನೂ ಓದಿ: ಎಂಟು ಮಂದಿ ಶಾಸಕರಿಂದ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ವಾಲ್‌ ನಟ್ಸ್ ಶೇಕ್​:
ವಾಲ್‌ ನಟ್ಸ್ ಮತ್ತು ಫ್ಯಾಕ್ಸ್ ಸೀಡ್ಸ್ ಎರಡರಲ್ಲೂ ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪ್ರೋಟೀನ್​ಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ಪ್ರೋಟೀನ್ ಶೇಕ್ಕೆ ಪರಿಪೂರ್ಣ ಸಂಯೋಜನೆಯಾಗಿದೆ.

ಎಗ್ ಶೇಕ್:
ಹಸಿ ಮೊಟ್ಟೆಗಳನ್ನು ತಿನ್ನುವುದರಿಂದ ಸಾಲ್ಮನೆಲ್ಲಾ ಸೋಂಕಿನ ಅಪಾಯ ಉಂಟಾಗಬಹುದಾದರೂ, ಹಸಿಮೊಟ್ಟೆ, ಆವಕಾಡೊಗಳು, ಬಾಳೆಹಣ್ಣುಗಳು ಮತ್ತು ಜೇನುತುಪ್ಪದೊಂದಿಗೆ ಪ್ರೋಟೀನ್‌ ಶೇಕ್‌ ಮಾಡಬಹುದಾಗಿದೆ.

ಸ್ಟ್ರಾಬೆರಿ ಮತ್ತು ಸೋಯಾ ಶೇಕ್:
ವಿಟಮಿನ್ ಸಿ ಹಾಗೂ ಪ್ರೋಟೀನ್‌ಗಳಿಂದ ತುಂಬಿರುವ ಸ್ಟ್ರಾಬೆರಿಗಳು ಹಾಗೂ ಸೋಯಾ ಸೇರಿಸಿ ರುಚಿಕರವಾದ, ಪೌಷ್ಟಿಕಾಂಶಯುತ ಪ್ರೋಟೀನ್ ಶೇಕ್​ ಮಾಡಬಹುದು.

ಇದನ್ನೂ ಓದಿ: ಗಂಗಾಧರ ಅಜ್ಜನ ಹೆಸರಿನಲ್ಲಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್

ಪಾಲಕ್ ಮತ್ತು ಪನೀರ್ ಶೇಕ್:
ಪಾಲಕ್ ಮತ್ತು ಪನೀರ್ ಒಟ್ಟಿಗೆ ಬೆರೆಸಿದ ಪ್ರೋಟೀನ್ ಶೇಕ್ ದೇಹಕ್ಕೆ ಅಗತ್ಯವಾದ ಕಬ್ಬಿಣ, ಫೈಬರ್, ಕೊಬ್ಬು ಮತ್ತು ಕ್ಯಾಲ್ಸಿಯಂ ನೀಡುತ್ತದೆ.

ಬಾಳೆಹಣ್ಣು-ಬಾದಾಮಿ ಶೇಕ್:
ಬಾಳೆಹಣ್ಣುಗಳು ಪೊಟ್ಯಾಸಿಯಮ್​ ಭರಿತವಾಗಿದ್ದು, ಬಾದಾಮಿಯು ಉತ್ತಮ ಪ್ರೋಟೀನ್‌, ಮತ್ತು ಕೊಬ್ಬು ಹೊಂದಿದೆ. ಇವೆರಡನ್ನು ಹಾಲು ಮತ್ತು ಮೊಸರಿನೊಂದಿಗೆ ಸೇರಿಸಿ ಪ್ರೋಟೀನ್ ಶೇಕ್ ಮಾಡಬಹುದು.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್