ಸಿನಿಮಾ

ಬಾಯಿ ಹುಣ್ಣಿಗೆ ಮನೆಮದ್ದು ಹಾಗೂ ಆಯುರ್ವೇದ ಪರಿಹಾರಗಳು

ಬೆಂಗಳೂರು: ಬಾಯಿ ಹುಣ್ಣು ಒಂದು ಸಾಧಾರಣ ಸಮಸ್ಯೆಯಾಗಿದ್ದು, ಈ ಸಮಸ್ಯೆ ಹಲವರಿಗೆ ಮೇಲಿಂದ ಮೇಲೆ ಕಾಡುತ್ತದೆ. ಇನ್ನು ಕೆಲವರಿಗೆ 2-3 ತಿಂಗಳಿಗೊಮ್ಮೆ ಕಾಡುತ್ತದೆ. ಇದರಿಂದಾಗಿ ಕೆಲವೊಮ್ಮೆ ಮಾತನಾಡಲು ಸಹ ಕಷ್ಟವಾಗುತ್ತದೆ. ಈ ಹುಣ್ಣುಗಳು ಹೆಚ್ಚಾಗಿ ಒಸಡಿನ ಮೇಲೆ ಹಾಗೂ ನಾಲಿಗೆ ಬದಿಯಲ್ಲಿ ಕಂಡು ಬರುತ್ತವೆ. ಇವು ಅಲ್ಪಾವಧಿ ಹಾಗೂ ದೀರ್ಘಾವಧಿಯವರೆಗೆ ಕಾಡುತ್ತವೆ. ಇವುಗಳಿಂದ ಮುಕ್ತಿಯನ್ನು ಕಾಣಲು ಈ ಕೆಳಗಿನ ಮನೆಮದ್ದುಗಳನ್ನು ಪಾಲಿಸಬಹುದಾಗಿದೆ.

ಬೆಳಿಗ್ಗೆ ಹಲ್ಲುಜ್ಜಿದ ಬಳಿಕ ತಾಜಾ ಹಾಗೂ ಪರಿಶುದ್ಧ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು. ಇದು ಬಾಯಿಯಲ್ಲಿ ಆಗಿರುವಂತಹ ಹುಣ್ಣನ್ನು ಶಮನ ಮಾಡುವುದು. ಶಿಲೀಂಧ್ರ ವಿರೋಧಿ ಮತ್ತು ನಂಜುನಿರೋಧಕ ಗುಣವನ್ನು ಹೊಂದಿರುವ ತೆಂಗಿನ ಎಣ್ಣೆಯಿಂದ ಹಲ್ಲುಗಳು ಬಿಳಿ ಹಾಗೂ ಬಲಿಷ್ಠವಾಗುವುದು.

ಇದನ್ನೂ ಓದಿ: ಮಲ್ಟಿಪ್ಲೆಕ್ಸ್​ನಲ್ಲಿ 99 ರೂಪಾಯಿಗೇ ಕನ್ನಡ ಸಿನಿಮಾ!; ಎಷ್ಟು ದಿನ ಈ ವಿಶೇಷ ಕೊಡುಗೆ?

ಊಟದಲ್ಲಿ ಜಾಸ್ತಿ ತರಕಾರಿಗಳು ಹಾಗೂ ತಾಜಾ ಹಣ್ಣುಗಳನ್ನು ಸೇವಿಸಬೇಕು. ಅಲ್ಲದೇ, ಕಾಫಿ, ಆಲ್ಕೋಹಾಲ್ ಮತ್ತು ತಂಪು ಪಾನೀಯವನ್ನ ತ್ಯಜಿಸಬೇಕು. ಜಂಕ್​ಫುಡ್​ ತಿನ್ನಬೇಡಿ ಹಾಗೂ ಸರಿಯಾಗಿ ನೀರು ಕುಡಿಯಿರಿ. ಹೀಗೆ ಮಾಡಿದರೆ ಬಾಯಿಯ ಹುಣ್ಣು ದೂರವಾಗುವುದು.

ವಿಟಮಿನ್ B1 ಮತ್ತು B12, ಸತು ಮತ್ತು ಕಬ್ಬಿಣಾಂಶವನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. ಏಕೆಂದರೆ ಕೆಲವೊಮ್ಮೆ ವಿಟಮಿನ್ ಕೊರತೆಯಿಂದಾಗಿ ಬಾಯಿಯಲ್ಲಿ ಹುಣ್ಣು ಆಗಬಹುದು. ನಂಜುನಿರೋಧಕ ಮತ್ತು ಯಾವುದೇ ಸೋಂಕನ್ನು ಗುಣಪಡಿಸುವ ಪ್ರಚಂಡ ಶಕ್ತಿಯನ್ನು ಹೊಂದಿರುವ ಅರಿಶಿನವನ್ನು ಹುಣ್ಣಾಗಿರುವ ಜಾಗಕ್ಕೆ ಲೇಪಿಸುವುದರಿಂದ ಇದು ನೋವನ್ನು ಕಡಿಮೆ ಮಾಡುತ್ತದೆ.

ಒಂದು ಚಮಚ ಉಪ್ಪನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ, ಪ್ರತಿದಿನ 2-3 ಬಾರಿ ಮುಕ್ಕಳಿಸುವುದರಿಂದ ಬಾಯಿಹುಣ್ಣಿನ ನೋವು ಹಾಗೂ ಹುಣ್ಣು ವಾಸಿಯಾಗುತ್ತೆ. ಹೈಡ್ರೋಜನ್ ಪೆರಾಕ್ಸೈಡ್ ನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣಿನ ನೋವು ಕಡಿಮೆಯಾಗಿ, ಆ ಭಾಗದ ಸೋಂಕನ್ನು ನಾಶ ಮಾಡುವುದು. (ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್