More

  ನಟಿ ಸಂಧ್ಯಾ ರೆಸಾರ್ಟ್​ನಲ್ಲಿ ನೀಚ ಕೃತ್ಯ: ಕೋಣೆಗೆ ನುಗ್ಗಿದ ರೂಮ್​ ಬಾಯ್,​ ಭಯಾನಕ ಸಂಗತಿ ಬಯಲು

  ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟಿ ಸಂಧ್ಯಾ, ದಿವಂಗತ ನಟ ಡಾ. ವಿಷ್ಣುವರ್ಧನ್​ ಅಭಿನಯ ಕೊನೆಯ ಸಿನಿಮಾ “ಆಪ್ತರಕ್ಷಕ” ದಲ್ಲಿ ನಾಗವಲ್ಲಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸದ್ಯ ಸಂಧ್ಯಾ ಅವರು ಸಿನಿಮಾದಿಂದ ಅಂತರ ಕಾಯ್ದುಕೊಂಡು ವೈವಾಹಿಕ ಜೀವನ ಮತ್ತು ಬಿಜಿನೆಸ್​ನಲ್ಲಿ ಬಿಜಿಯಾಗಿದ್ದಾರೆ. ಇದೀಗ ಸಂಧ್ಯಾ ಒಡೆತನ ರೆಸಾರ್ಟ್​ ಒಂದು ಕಹಿ ಘಟನೆಗೆ ಸಾಕ್ಷಿಯಾಗಿದೆ.

  ಮದ್ಯಪಾನ ಮಾಡಿ ಮಲಗಿದ್ದರು

  ರೂಮ್​ ಬಾಯ್​ ಮಾಡಿದ ನೀಚತನದಿಂದ ಸಂಧ್ಯಾ ಅವರ ರೆಸಾರ್ಟ್​ಗೆ ಕೆಟ್ಟ ಹೆಸರು ಬಂದಿದೆ. ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಕೂವತ್ತೂತು ಪರಮಕುಡಿಯಲ್ಲಿ ಬೀಚ್​ ಪಕ್ಕದಲ್ಲಿ ಸಂಧ್ಯಾ ಮತ್ತು ಪತಿ ವೆಂಕಟೇಶ್​ ಮಾಲೀಕತ್ವದಲ್ಲಿ ಪರ್ಲ್​ ಬೀಚ್​ ಹೆಸರಿನ ರೆಸಾರ್ಟ್​ ಇದೆ. ಅತಿಥಿಗಳಾಗಿ ಬಂದಿದ್ದ ರಾಮಚಂದ್ರನ್​ ಮತ್ತು ಅವರ ಗರ್ಲ್​ಫ್ರೆಂಡ್​, ಪ್ರತ್ಯೇಕ ವಿಲ್ಲಾದಲ್ಲಿ ಉಳಿದುಕೊಂಡಿದ್ದರು. ರಾಮಚಂದ್ರನ್​ ಅವರು ಕೆಕೆ ನಗರ ಮೂಲದವರು. ಇಬ್ಬರು ಮದ್ಯಪಾನ ಮಾಡಿ ಮಲಗಿದ್ದರು.

  ಇದನ್ನೂ ಓದಿ: ಕರೊನಾ ಹೋಯ್ತಲ್ಲ ಅಂತ ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಎಚ್ಚರಿಕೆ ನೀಡಿದ ಡಬ್ಲ್ಯುಎಚ್​ಒ

  ಅಸಭ್ಯ ವರ್ತನೆ

  ಈ ವೇಳೆ ರೆಸಾರ್ಟ್​ನಲ್ಲಿದ್ದ ರೂಮ್​ ಬಾಯ್​ ಸುಭಾಷ್​​, ಸ್ಪೇರ್​ ಕೀ ಅನ್ನು ಬಳಸಿ ರೂಮ್​ ಒಳಗೆ ಪ್ರವೇಶಿಸಿದ್ದಾನೆ. ಇಬ್ಬರು ಕಂಠಪೂರ್ತಿ ಕುಡಿದು ಪ್ರಜ್ಞೆಯಿಲ್ಲದೆ ಬಿದ್ದಿರುವುದನ್ನು ಗಮನಿಸಿದ ಸುಭಾಷ್​​, ರಾಮಚಂದ್ರನ್​ ಗರ್ಲ್​ಫ್ರೆಂಡ್​ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಆದರೆ, ಆರಂಭದಲ್ಲಿ ಗರ್ಲ್​ಫ್ರೆಂಡ್​ಗೆ ಏನಾಗುತ್ತಿದೆ ಎಂಬ ಅರಿವೇ ಇರಲಿಲ್ಲ. ಇತ್ತ ಸುಭಾಷ್​ ತನ್ನ ಕೆಲಸವನ್ನು ದುರ್ಬಳಕೆ ಮಾಡಿಕೊಂಡು ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ರಾಮಚಂದ್ರನ್​ ಗರ್ಲ್​ಫ್ರೆಂಡ್​​ಗೆ ಎಚ್ಚರವಾದಗ ರೂಮ್​ ಬಾಯ್​ನನ್ನು ನೋಡಿ ಜೋರಾಗಿ ಕೂಗಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡ ಸುಭಾಷ್​ ಏನು ಮಾಡಬೇಕೆಂದು ತಿಳಿಯದೇ ಹಾಸಿಗೆ ಅಡಿಯಲ್ಲಿ ಅವಿತುಕೊಂಡನು.

  ವಿಚಾರಣೆಯಲ್ಲಿ ಭಯಾನಕ ಸಂಗತಿ ಬಯಲು

  ಬಳಿಕ ರಾಮಚಂದ್ರನ್​ ಮತ್ತು ಇತರರು ಸುಭಾಷ್​​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ವಿಚಾರಣೆ ವೇಳೆ ಸುಭಾಷ್​ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ರಾಮಚಂದ್ರನ್​ ಗರ್ಲ್​ಫ್ರೆಂಡ್​ ಸೇರಿದಂತೆ ಸುಮಾರು 50 ಮಹಿಳೆಯರ ಬೆತ್ತಲೆ ವಿಡಿಯೋಗಳನ್ನು ಸೆರೆಹಿಡಿದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಷ್ಟೇ ಅಲ್ಲದೆ, ಸ್ವಿಮ್ಮಿಂಗ್​ಪೂಲ್​ನಲ್ಲಿ ಮಹಿಳೆಯರು ಎಂಜಾಯ್​ ಮಾಡುತ್ತಿರುವ ವಿಡಿಯೋಗಳನ್ನು ಸುಭಾಷ್​​ ರೆಕಾರ್ಡ್​ ಮಾಡಿದ್ದಾನೆ. ಇದೀಗ ಈ ವಿಚಾರ ಕೋಲಾಹಲವನ್ನೇ ಎಬ್ಬಿಸಿದ್ದು, ಸಂಧ್ಯಾ ಅವರ ರೆಸಾರ್ಟ್​ ಮೇಲೆ ಕರಿನೆರಳು ಆವರಿಸಿದೆ.

  ಇದನ್ನೂ ಓದಿ: ಚುನಾವಣೆಯಲ್ಲಿ ಸತತ ಸೋಲುಗಳ ಬಳಿಕ ಮಹತ್ವದ ನಿರ್ಧಾರಕ್ಕೆ ಮುಂದಾದ ನಿಖಿಲ್​ ಕುಮಾರಸ್ವಾಮಿ!

  ಬಿಡುಗಡೆಗೆ ಪ್ರತಿಭಟನೆ

  ಇದೇ ಸಂದರ್ಭದಲ್ಲಿ ಸುಭಾಷ್ ಸಂಬಂಧಿಕರು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಸುಭಾಷ್ ಮೇಲೆ ಹಲ್ಲೆ ನಡೆಸಿದ ರಾಮಚಂದ್ರನ್ ಮತ್ತು ಇತರೆ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಏಕಕಾಲದಲ್ಲಿ ಸುಭಾಷ್ ವಿರುದ್ಧ ಅತ್ಯಾಚಾರ ಯತ್ನ ಮತ್ತು ಮಾಹಿತಿ ತಂತ್ರಜ್ಞಾನದ ದುರ್ಬಳಕೆ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ಸುಭಾಷ್​ನನ್ನು ಚಿಕಿತ್ಸೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಭಾಷ್​ನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. (ಏಜೆನ್ಸೀಸ್​)

  ಬಾಲಿವುಡ್​ ಚಿತ್ರರಂಗಕ್ಕೆ ಶಾಕ್​: ಒಂದೇ ದಿನ ಇಹಲೋಕ ತ್ಯಜಿಸಿದ ಖ್ಯಾತ ನಟ-ನಟಿ

  ಕರೊನಾ ಹೋಯ್ತಲ್ಲ ಅಂತ ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಎಚ್ಚರಿಕೆ ನೀಡಿದ ಡಬ್ಲ್ಯುಎಚ್​ಒ

  ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ!

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts