ಸಿನಿಮಾ

ಚುನಾವಣೆಯಲ್ಲಿ ಸತತ ಸೋಲುಗಳ ಬಳಿಕ ಮಹತ್ವದ ನಿರ್ಧಾರಕ್ಕೆ ಮುಂದಾದ ನಿಖಿಲ್​ ಕುಮಾರಸ್ವಾಮಿ!

ಬೆಂಗಳೂರು: ಚುನಾವಣೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ನಿಖಿಲ್​ ಕುಮಾರಸ್ವಾಮಿ ಅವರು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಮಂಡ್ಯ, ರಾಮನಗರ ಸೋಲು

2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದ ನಿಖಿಲ್​, ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್​ ವಿರುದ್ಧ ಸೋಲುಂಡಿದ್ದರು. ಇದರ ನೋವಿನಿಂದ ಹೊರಬರಲು ನಿಖಿಲ್​ಗೆ ಹಲವು ದಿನಗಳು ಬೇಕಾಯಿತು. ಇದೀಗ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಹಾಗೂ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್​ನ ಇಕ್ಬಾಲ್​ ಹುಸೇನ್​ ವಿರುದ್ಧ ಹೀನಾಯ ಸೋಲು ಅನುಭಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರು ಹೇಳ್ತಾನೆ 7ರ ಪೋರ! ಈತನ ನೆನಪಿನ ಶಕ್ತಿಗೆ ಒಂದು ಸಲಾಂ

ರಾಜೀನಾಮೆಗೆ ನಿರ್ಧಾರ

ಸತತ ಎರಡು ಸೋಲುಗಳಿಂದ ಕಂಗಾಲಾಗಿರುವ ನಿಖಿಲ್​ ಕುಮಾರಸ್ವಾಮಿ ಇದೀಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಚಿಂತನೆಯಲ್ಲಿದ್ದಾರೆ. ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದು, ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಗಂಭೀರ ಚಿಂತನೆ ನಡೆಸಿದ್ದಾರೆ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಸಹ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ.

ನೂತನ ಯುವ ಅಧ್ಯಕ್ಷರ ನೇಮಕ

ನಿಖಿಲ್​ ರಾಜೀನಾಮೆ ನೀಡಿದ ಬಳಿಕ ತೆರವಾಗುವ ಪಕ್ಷದ ಯುವಘಟಕದ ಅಧ್ಯಕ್ಷ ಸ್ಥಾನವನ್ನು ಬೇರೊಬ್ಬರಿಗೆ ವಹಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ನಾಳೆ ಜೆಡಿಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನೂತನ ಯುವ ಅಧ್ಯಕ್ಷರ ನೇಮಕ ಸಾಧ್ಯತೆಯಾಗಲಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನ ವಹಿಸುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಇದಕ್ಕೆ ಕುಮಾರಸ್ವಾಮಿ ಒಪ್ಪುತ್ತಾರಾ ಎಂಬ ಪ್ರಶ್ನೆ ಮೂಡಿದೆ. ನೂತನ ಶಾಸಕ ಶರಣಗೌಡ ಕಂದಕೂರ್ ಬಗ್ಗೆ ಕುಮಾರಸ್ವಾಮಿಗೆ ಒಲವು ಇದೆ. ಯುವ ಘಟಕದ ಜೊತೆಗೆ ರಾಜ್ಯ ಪದಾಧಿಕಾರಿಗಳ ಬದಲಾವಣೆಯು ಸಹ ನಡೆಯಲಿದೆ. (ದಿಗ್ವಿಜಯ ನ್ಯೂಸ್​)

ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ

ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

Latest Posts

ಲೈಫ್‌ಸ್ಟೈಲ್