More

    ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ

    ದೃಶ್ಯ-ಶ್ರಾವ್ಯಗಳ ನಡುವೆ ಬರೀ ಮಾತು ಸೊರಗತೊಡಗಿದೆ. ಅಂದರೆ ಫೇಸ್​ಬುಕ್- ಇನ್​ಸ್ಟಾಗ್ರಾಂನಂಥ ಪ್ರಭಾವಿ ದೃಶ್ಯ ಮಾಧ್ಯಮದ ಮಧ್ಯದಲ್ಲಿ ಸೋಷಿಯಲ್ ಆಡಿಯೋ ಸೆಳೆತ ಕಳೆದು ಹೋಗಲಾರಂಭಿಸಿದೆ. ಕೇವಲ ಆಡಿಯೋ ಮನಸ್ಸನ್ನು ಮುಟ್ಟುತ್ತಿಲ್ಲ, ವಿಡಿಯೋದಲ್ಲಿ ಆಡಿಯೋ ಕೂಡ ಬೇಕು. ಅಶರೀರವಾಣಿಗಿಂತ ಶರೀರ-ಶಾರೀರದ ಸಮ್ಮಿಳಿತವೇ ಜನರಿಗೆ ಆಪ್ತ ಎನಿಸಲಾರಂಭಿಸಿದೆ ಎಂಬಂತಾಗಿರುವ ಪರಿಸ್ಥಿತಿಯ ಬಗ್ಗೆ ಇದೊಂದು ಅವಲೋಕನ.

    | ಎನ್. ಗುರುನಾಗನಂದನ, ಬೆಂಗಳೂರು

    ಬಸ್​ನಲ್ಲಿ ಪ್ರಯಾಣ ಮಾಡುವಾಗ ಎಫ್​ಎಮ್ ಕೇಳುತ್ತಿದ್ದೆವು. ಆದರೆ ಈಗ ಶಾರ್ಟ್ಸ್-ರೀಲ್ಸ್ ನೋಡುತ್ತೇವೆ. ಕೆಲವರು ಸಿನಿಮಾ-ಸೀರಿಯಲ್ ವೀಕ್ಷಿಸುತ್ತಾರೆ. ಅದು ತಪ್ಪಲ್ಲ.. ಆದರೆ ಆಡಿಯೋಪ್ರಧಾನ ಮಾಧ್ಯಮಗಳು ಈಗ ಕಳೆದು ಹೋಗುತ್ತಿವೆ. ಧ್ವನಿಗೆ ಕಲ್ಪನಾ ಶಕ್ತಿ, ಸೃಜನಶೀಲತೆಯನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಇಷ್ಟವಾದ ಹಾಡು ಕೇಳಿಸಿಕೊಂಡರೆ ಮನಸ್ಸಿನಲ್ಲಿ ನಮ್ಮದೇ ಆದ ಕಲ್ಪನಾ ಲಹರಿ ಹುಟ್ಟುತ್ತದೆ. ಆದರೆ ಎಷ್ಟೋ ಜನ ಆ ಸುಂದರ ಕಲ್ಪನಾ ಲೋಕದ ಪರಿಕಲ್ಪನೆಯಿಂದ ವಂಚಿತರಾಗುತ್ತಿದ್ದಾರೆ. ಹಿಂದೆ ರೇಡಿಯೋದಲ್ಲಿ ಸಿನಿಮಾ ಪ್ರಸಾರವಾಗುತ್ತಿತ್ತು. ಅದನ್ನು ಕೇಳಿ ಆನಂದಿಸುತ್ತಿದ್ದೆವು. ಆದರೀಗ ದೃಶ್ಯವಿಲ್ಲದೆ ಕೇವಲ ಸಂಭಾಷಣೆ ಕೇಳಿಸಿಕೊಳ್ಳುವ ಆಸಕ್ತಿ ಕುಂದುತ್ತಿದೆ. ಬೇರೊಂದು ಕೆಲಸ ಮಾಡುವಾಗಲೂ ಕೇಳಿಸಿಕೊಳ್ಳುತ್ತ ಮಾಡಬಹುದು. ಆದರೆ ವಿಡಿಯೋ ವೀಕ್ಷಿಸುವಾಗ ಅದು ಸಾಧ್ಯವಿಲ್ಲ, ಅಲ್ಲಿ ಕಣ್ಣು-ಕೈಗೂ ಶ್ರಮವಾಗುತ್ತದೆ. ಇತ್ತೀಚೆಗೆ ಪಾಡ್​ಕ್ಯಾಸ್ಟ್ ಕೂಡ ದೃಶ್ಯದ ಮೂಲಕ ಜನರಿಗೆ ನೀಡಲಾಗುತ್ತಿದೆ. ಇದಕ್ಕೆ ಕಾರಣ ಬಹಳ ಸ್ಪಷ್ಟ. ಬರೀ ಕೇಳಿಸಿಕೊಳ್ಳುವ ಆಸಕ್ತಿ ಜನರಲ್ಲಿ ಕ್ಷೀಣಿಸಲಾರಂಭಿಸಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕ್ಲಬ್​ಹೌಸ್.

    ಮೊದಲು ಐಒಎಸ್​ನಲ್ಲಿ ಮಾತ್ರ ಸಿಗುತ್ತಿದ್ದ ಕ್ಲಬ್​ಹೌಸ್ ಎಂಬ ಸೋಷಿಯಲ್ ಆಡಿಯೋ ಆಪ್​ನ ಆಂಡ್ರಾಯ್್ಡ ವರ್ಷನ್ 2021ರ ಮೇ ತಿಂಗಳಲ್ಲಿ ಜಗತ್ತಿನಾದ್ಯಂತ ಲಭ್ಯವಾಯಿತು. ಹಾಗೆ ಸಿಕ್ಕ ಕ್ಲಬ್​ಹೌಸನ್ನು ಜನರು ಅಪ್ಪಿಕೊಂಡರು. ಅದೇ ಕಾರಣಕ್ಕೆ ಇನ್ನೂ ಹಲವು ಸೋಷಿಯಲ್ ಆಡಿಯೋ ಆಪ್​ಗಳೂ ಶುರುವಾದವು. ಈಗಾಗಲೇ ಇರುವ ಸೋಷಿಯಲ್ ಮೀಡಿಯಾ ಆಪ್​ಗಳು ಕೂಡ ಕ್ಲಬ್​ಹೌಸ್​ನ ಅಬ್ಬರ ಕಂಡು ಆಡಿಯೋಗೆ ಆದ್ಯತೆ ನೀಡಿದವು. ದೃಶ್ಯಗಳ ಸಹಾಯವಿಲ್ಲದೆ ಕೇವಲ ಧ್ವನಿಯ ಮೂಲಕ ವಿಷಯ ಹಂಚಿಕೊಳ್ಳುವ, ಮಾತುಕತೆಗಳು ಹೆಚ್ಚಾದವು.

    ಸರಿಯಾದ ಪ್ರವೇಶ: ಕ್ಲಬ್​ಹೌಸ್ ಪ್ರವೇಶ ಕೊಟ್ಟ ಸಂದರ್ಭ ಅದರ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಕರೊನಾದಿಂದ ಕಂಗೆಟ್ಟಿದ್ದ, ಲಾಕ್​ಡೌನ್​ನಿಂದ ಕಂಗಾಲಾಗಿದ್ದ ಜನರಿಗೆ, ಮನೆಯಲ್ಲೇ ಇದ್ದು ಬೋರಾಗಿದ್ದವರಿಗೆ ಏಕಾಂತ ಕಳೆಯಲು, ತಮ್ಮ ಅನಿಸಿಕೆ ಹೇಳಿಕೊಳ್ಳಲು, ಭಾವನೆಗಳನ್ನು ಹಂಚಿಕೊಳ್ಳಲು ಕ್ಲಬ್​ಹೌಸ್ ಉತ್ತಮ ವೇದಿಕೆ ಆಯಿತು. ಆಧುನಿಕ ಟಚ್ ಇರುವ ಕ್ಲಬ್​ಹೌಸ್​ನಿಂದಾಗಿ ಸುಲಭದಲ್ಲಿ ಅಪರಿಚಿತರೊಂದಿಗೆ ಫೋನ್ ನಂಬರ್ ಇಲ್ಲದೆ, ಕುಳಿತಲ್ಲಿಯೇ ನೇರವಾಗಿ ಮಾತನಾಡಿ ನೆಟ್​ವರ್ಕ್ ಬೆಳೆಸಿಕೊಳ್ಳಲು ಸದವಕಾಶ ಸಿಕ್ಕಿತು. ಕೇವಲ ಕೇಳಿಸಿಕೊಳ್ಳುವ ಆಯ್ಕೆ ಕೂಡ ಇತ್ತು. ಅದರೊಂದಿಗೆ ಪ್ರಭಾವಿ ವ್ಯಕ್ತಿಗಳ ಬಳಿಯೂ ಸಲೀಸಾಗಿ ಮಾತಾಡಬಹುದಾಗಿದ್ದರಿಂದ ಹೆಚ್ಚು ಜನರಿಗೆ ಬಹಳ ಬೇಗನೆ ಕ್ಲಬ್​ಹೌಸ್ ಹತ್ತಿರವಾಯಿತು. ಇನ್ನು ಕರೊನಾ ಸಮಯದಲ್ಲಿ ಯಾರೂ ಕ್ಲಬ್-ಪಾರ್ಟಿಗಳಿಗೆ ಹೋಗುವಂತಿರಲಿಲ್ಲ. ಆದರೆ ಕ್ಲಬ್​ಬೌಸ್​ನಲ್ಲಿ ಪಾರ್ಟಿ ಮಾಡುತ್ತಿದ್ದರು. ಗೂಗಲ್ ಮೀಟ್, ಜೂಮ್ಂಥ ಆಪ್​ಗಳ ಮೂಲಕ ನಡೆಯುತ್ತಿದ್ದ ಆಫೀಸ್ ಮೀಟಿಂಗ್, ಆನ್​ಲೈನ್ ಕ್ಲಾಸ್​ಗಳಲ್ಲಿ ಗಂಭೀರವಾಗಿ, ಅಳೆದು ತೂಗಿ ಮಾತನಾಡಬೇಕಿತ್ತು. ಹಾಕಿರುವ ಬಟ್ಟೆ, ಬ್ಯಾಕ್​ಗ್ರೌಂಡ್ ಸರಿಯಾಗಿದೆಯೇ ಎಂಬ ಎಲ್ಲ ಅಂಶಗಳನ್ನು ಯೋಚಿಸಿ ಕ್ಯಾಮೆರಾ ಆನ್ ಮಾಡಿ ಸಂಭಾಷಣೆ ನಡೆಸಬೇಕಿತ್ತು. ಅದೇ ಕಾರಣಕ್ಕೆ ಬಹಳಷ್ಟು ಮಂದಿ ಜೂಮ್ ಫ್ಯಾಟಿಗ್​ನಿಂದ ಬಳಲುತ್ತಿದ್ದರು. ಅಂತಹ ಸಂದರ್ಭದಲ್ಲಿ ಬಂದ ಕ್ಲಬ್​ಹೌಸ್ ವಿಶೇಷ ಅನಿಸಿದ್ದಲ್ಲದೆ, ಜನರನ್ನು ಸೆಳೆದು ಬಿಟ್ಟಿತು. ರಾಜಕೀಯ, ಸಿನಿಮಾ, ಇತಿಹಾಸ, ಪುರಾಣಗಳೇ ಮೊದಲಾದ ಹಲವಾರು ವಿಷಯಗಳ ಬಗ್ಗೆ ಗಂಟೆಗಟ್ಟಲೆ ಕ್ಲಬ್​ಹೌಸ್​ನಲ್ಲಿ ಚರ್ಚೆಯಾಗುತ್ತಿತ್ತು. ಎಫ್​ಎಮ್ಲ್ಲಿ ಇದ್ದಹಾಗೆ ಹಾಡುಗಳು ಕೂಡ ಬರುತ್ತಿದ್ದವು. ಅದರೊಂದಿಗೆ ಕೇವಲ ಧ್ವನಿಯ ಮೂಲಕ ನಾಟಕಗಳ ಪ್ರದರ್ಶನ ಕೂಡ ನಡೆಯುತ್ತಿತ್ತು. ಕ್ಯಾಲಿಫೋರ್ನಿಯಾದ ಕಾಲೇಜ್ ಆಫ್ ಅಲ್ಮೆಡ ನಡೆಸಿದ ಅಧ್ಯಯನದ ಪ್ರಕಾರ 2020ರ ಮಾರ್ಚ್​ನಲ್ಲಿ ಕ್ಲಬ್​ಹೌಸ್ ಬಳಕೆದಾರರ ಸಂಖ್ಯೆ 5,000 ಇತ್ತು. ಅಂತಾರಾಷ್ಟ್ರೀಯ, ರಾಷ್ಟ್ರ, ರಾಜ್ಯಮಟ್ಟದ ಸೆಲೆಬ್ರಿಟಿಗಳನ್ನು ಸುಲಭವಾಗಿ ಮಾತನಾಡಿಸುವ ಅವಕಾಶ ಸಾಮಾನ್ಯ ಜನರಿಗೆ ಕ್ಲಬ್​ಹೌಸ್​ನಲ್ಲಿ ದೊರಕಿತು. ಇದರ ಪರಿಣಾಮ 2021ರ ಫೆಬ್ರವರಿ ಸುಮಾರಿಗೆ ಕ್ಲಬ್​ಹೌಸ್ ಡೌನ್​ಲೋಡ್ ಸಂಖ್ಯೆ 1 ಕೋಟಿಯನ್ನು ದಾಟಿತು. ಮಾತ್ರವಲ್ಲ, 30ಕ್ಕೂ ಹೆಚ್ಚು ದೇಶಗಳಲ್ಲಿ ನಂಬರ್ ಒನ್ ಆಪ್ ಸ್ಥಾನ ಪಡೆಯಿತು.

    ಹೊಸ ಆಡಿಯೋ ನೆಟ್​ವರ್ಕ್​ಗಳಿಗೆ ಕ್ಲಬ್​ಹೌಸ್ ನಾಂದಿ

    ಕ್ಲಬ್​ಹೌಸ್ ಯಶಸ್ಸನ್ನು ಕಂಡು ಅದನ್ನು ಹಿಂದಿಕ್ಕಲು ಮೊದಲೇ ಪ್ರಚಲಿತದಲ್ಲಿದ್ದ ಸೋಷಿಯಲ್ ಮೀಡಿಯಾ ಆಪ್​ಗಳು ತಮ್ಮದೇ ಆದ ಆಡಿಯೋ ನೆಟ್​ವರ್ಕಿಂಗ್ ಪ್ಲಾ್ಯಟ್​ಫಾಮ್ರ್ ತೆರೆಯಲು ಆರಂಭಿಸಿದರು. ಟ್ವಿಟರ್​ನಲ್ಲಿ ‘ಟ್ವಿಟರ್ ಸ್ಪೇಸ್’, ಫೇಸ್​ಬುಕ್ ಲೈವ್ ಆಡಿಯೋ ರೂಮ್ ಸ್ಪಾಟಿಫೈನ ‘ಗ್ರೀನ್ ರೂಮ್ ಮೊದಲಾದ ಹಲವಾರು ಆಡಿಯೋ ಪ್ಲಾ್ಯಟ್​ಫಾಮರ್್​ಗಳೂ ಕ್ಲಬ್​ಹೌಸ್​ಗೆ ಪೈಪೋಟಿ ಕೊಡುವಂತೆ ಹುಟ್ಟಿಕೊಂಡವು. ಮಾರ್ಚ್ 2020ರಲ್ಲಿ ಟ್ವಿಟರ್ ‘ಟ್ವಿಟರ್ ಸ್ಪೇಸ್’ ಎಂಬ ಆಡಿಯೋ ಸೋಷಿಯಲ್ ತಾಣ ತೆರೆಯಿತು.

    ದೃಶ್ಯಗಳ ನಡುವೆ ಕಳೆದು ಹೋದ ಧ್ವನಿ…

    ಕ್ಲಬ್​ಹೌಸ್ ಬಳಕೆದಾರರ ಸಂಖ್ಯೆ ತಗ್ಗಿರುವುದಷ್ಟೇ ಅಲ್ಲ, ಟ್ವಿಟರ್ ಸ್ಪೇಸ್ ಹಾಗೂ ಫೇಸ್​ಬುಕ್ ಲೈವ್ ಆಡಿಯೋ ರೂಮ್ೆ ಜನರಲ್ಲಿ ಅಂಥ ಸೆಳೆತ ಉಂಟಾಗದಿರುವುದು ಕೂಡ ಸೋಷಿಯಲ್ ಆಪ್​ಗಳಲ್ಲಿ ಬರೀ ಕೇಳುವುದರಲ್ಲಿ ಆಸಕ್ತಿ ಕುಂದಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಕ್ಲಬ್​ಹೌಸ್​ನಂತೆ ಫೇಸ್​ಬುಕ್ ಲೈವ್ ಆಡಿಯೋ ರೂಮ್ ಟ್ವಿಟರ್-ಸ್ಪೇಸ್ ಕೇಳುಗರನ್ನು ಆಕರ್ಷಿಸುವಲ್ಲಿ ಬಹುತೇಕ ವಿಫಲವಾಗಿವೆ. ಎಷ್ಟೋ ಮಂದಿಗೆ ಫೇಸ್​ಬುಕ್ ಒಂದು ಲೈವ್ ಆಡಿಯೋ ರೂಮ್ ಎಂಬ ಆಯ್ಕೆ ನೀಡಿದೆ ಎಂಬುದೇ ತಿಳಿಯದೆ ಹೋಯಿತು. ಇದಕ್ಕೆ ಹಲವು ಕಾರಣಗಳಿವೆ. ಪ್ರಧಾನವಾಗಿ ಫೇಸ್​ಬುಕ್, ಟ್ವಿಟರ್, ರೆಡಿಟ್​ನ ಜನಪ್ರಿಯತೆಯೇ ಅವುಗಳಿಗೆ ಮುಳ್ಳಾಯಿತು. ಇವು ದೃಶ್ಯ ಮಾಧ್ಯಮವಾಗಿ ಬೆಳೆದಿರುವ ಸಾಮಾಜಿಕ ಜಾಲತಾಣಗಳು. ಇದರಲ್ಲಿ ಕೇವಲ ಧ್ವನಿಯ ಮೂಲಕ ಸಂಭಾಷಿಸಲು ಜನರು ಇಷ್ಟ ಪಡಲಿಲ್ಲ ಎಂಬುದು ಸೋಷಿಯಲ್ ಮೀಡಿಯಾ ತಜ್ಞರ ಅಭಿಪ್ರಾಯ. ಕ್ಲಬ್​ಹೌಸ್​ಗೆ ಯಾವುದೇ ರೀತಿಯ ಹಿನ್ನೆಲೆ ಇರಲಿಲ್ಲ. ನೇರವಾಗಿ ಆಡಿಯೋ ಸೋಷಿಯಲ್ ಮೀಡಿಯಾ ಎಂದು ಗುರುತಿಸಿಕೊಂಡಿತು. ಟ್ವಿಟರ್ ಕೂಡ ಸ್ಪೇಸ್​ಅನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಯಿತು. ಬಹಳಷ್ಟು ಜನರಿಗೆ ಇದನ್ನು ಬಳಸುವುದು ಹೇಗೆಂದು ತಿಳಿಸುವಲ್ಲಿ ಅದು ಎಡವಿತು. ಇದರೊಂದಿಗೆ ಮತ್ತೊಂದು ಕಾರಣವೆಂದರೆ ತಮ್ಮ ಆಲೋಚನೆಗಳನ್ನು ಬರೆದು, ಚಿತ್ರಗಳ ಮೂಲಕ ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿದ್ದವರಿಗೆ ಆಡಿಯೋ ಮೂಲಕ ಹಂಚಿಕೊಳ್ಳಬೇಕು ಎಂಬ ಮನಸ್ಸಾಗಲಿಲ್ಲ. ದೃಶ್ಯ ಜಾತ್ರೆಯಲ್ಲಿ ಜನರು ಕಳೆದು ಹೋಗಿದ್ದರು. ಈ ಕಾರಣಗಳಿಗೆ ಟ್ವಿಟರ್-ಸ್ಪೇಸ್ ಜನರ ಮನಸ್ಸಿನಲ್ಲಿ ಅಂಥ ಜಾಗ ಪಡೆಯಲು ಆಗಲಿಲ್ಲ.

    ಕಲ್ಪನೆಯ ಅಭಾವದಿಂದ ಮಾತು ಮರೆಯಾಗುತ್ತಿದೆಯೇ?

    ಬರೀ ಮಾತನ್ನು ಕೇಳುವಲ್ಲಿ ಜನರಿಗೆ ಕ್ರಮೇಣ ಆಸಕ್ತಿ ಕಡಿಮೆ ಆಗತೊಡಗಿತು ಎಂಬುದಕ್ಕೂ ಕ್ಲಬ್​ಹೌಸ್ ಉತ್ತಮ ಉದಾಹರಣೆ. ಸಮಯ ಕಳೆದಂತೆ ಜನರಲ್ಲಿ ಕ್ಲಬ್​ಹೌಸ್ ಸೆಳೆತ ತಗ್ಗಿದೆ. ಕೇವಲ ಮಾತನಾಡುವುದು, ಬರೀ ಕೇಳಿಸಿಕೊಳ್ಳುವುದು ಬೋರ್ ಆಗತೊಡಗಿದೆ. ಕ್ಯಾಲಿಫೋರ್ನಿಯಾದ ಕಾಲೇಜ್ ಆಫ್ ಅಲ್ಮೆಡದ ಅಧ್ಯಯನ ಪ್ರಕಾರ 1 ಕೋಟಿ ಇದ್ದ ಕ್ಲಬ್​ಹೌಸ್ ಬಳಕೆದಾರರ ಸಂಖ್ಯೆ 2021ರ ಸೆಪ್ಟೆಂಬರ್ ಸುಮಾರಿಗೆ 35 ಲಕ್ಷಕ್ಕೆ ಇಳಿದು ಹೋಯಿತು. ಈ ಸ್ಥಿತಿಗೆ ಹಲವಾರು ಕಾರಣಗಳಿವೆ. ಕ್ಲಬ್​ಹೌಸ್​ನ ಶೇ.56 ಬಳಕೆದಾರರು 18-34 ವರ್ಷದವರಾಗಿದ್ದರು. ಅದರಲ್ಲೂ ಬಹುಪಾಲು ಜೆನರೇಷನ್ ಝೆಡ್​ಗೆ ಸೇರಿದವರೇ ಇದ್ದರು. ಇವರು ತಾಂತ್ರಿಕ ಯುಗದಲ್ಲಿ ಹುಟ್ಟಿದವರು. ತಜ್ಞರ ಪ್ರಕಾರ ಜೆನ್ ಝೆಡ್​ನವರ ಮೆದುಳು ದೃಶ್ಯ ಚಿತ್ರಣಗಳ ಕಡೆಗೆ ಹೆಚ್ಚು ಆಕರ್ಷಿತಗೊಳ್ಳುತ್ತದೆ ಮತ್ತು ಅವರ ಗಮನ ಒಂದು ವಿಷಯದ ಬಗ್ಗೆ 8 ಸೆಕೆಂಡ್​ಗಳು ಮಾತ್ರ ಇರುತ್ತದೆ. ಅವರಿಗೆ ಬೇಗನೆ ಬೇಸರವಾಗುತ್ತದೆ. ಈ ಕಾರಣಕ್ಕಾಗಿಯೆ ರೀಲ್ಸ್-ಶಾರ್ಟ್ಸ್ ವಿಡಿಯೋಗಳು ಈ ಕಾಲದಲ್ಲಿ ಹೆಚ್ಚಾಗಿ ಜನಪ್ರಿಯತೆ ಹೊಂದಿವೆ. ಅವರಿಗೆ ಒಂದು ವಿಷಯಕ್ಕೆ ಹೆಚ್ಚು ಸಮಯ ನೀಡಲಾಗುವುದಿಲ್ಲ. ದೃಶ್ಯಗಳಿಲ್ಲದೆ ಕೇವಲ ಮಾತನಾಡುವುದು ಬೇಸರವನ್ನುಂಟು ಮಾಡಿತು. ಪಾಡ್​ಕ್ಯಾಸ್ಟ್ ಕೇಳಲು ಮನಸ್ಸಾಗುವುದಿಲ್ಲ. ಆದರೆ ಅದೇ ಸಂಭಾಷಣೆಯನ್ನು ಯೂಟ್ಯೂಬ್​ನಲ್ಲಿ ಸಂದರ್ಶನದಂತೆ ನೋಡಲು ಇಷ್ಟ ಪಡುತ್ತಾರೆ. ಕೇವಲ ಧ್ವನಿ ಮನಸ್ಸಿಗೆ ನಾಟುವುದಿಲ್ಲ. ಕೇಳಿಸಿಕೊಳ್ಳುವುದರ ಜತೆಗೆ ನೋಟವೂ ಬೇಕು. ಇದಕ್ಕೆ ಮುಖ್ಯ ಕಾರಣವೆಂದರೆ ಕಲ್ಪನಾ ಶಕ್ತಿಯ ಕೊರತೆ. ಕೇವಲ ವಿಷಯವನ್ನು ಕೇಳಿಸಿಕೊಂಡು ಅದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಚ್ಚುಕಟ್ಟಾಗಿ ತಯಾರಾದ ವಿಷಯ ಸುಲಭವಾಗಿ ಸಿಗುತ್ತಿದೆ. ಅದಕ್ಕೆ ಉದಾಹರಣೆ ಎಂದರೆ ಹಿಂದೆ ಅಜ್ಜಿ ಹೇಳುತ್ತಿದ್ದ ಕಥೆಯಲ್ಲಿ ಬರುತ್ತಿದ್ದ ಪಾತ್ರಗಳನ್ನು ನಾವು ಮನಸ್ಸಿನಲ್ಲಿ ಆ ಪಾತ್ರಗಳನ್ನು ಚಿತ್ರಿಸಿಕೊಳ್ಳುತ್ತಿದ್ದೆವು. ಆದರೆ ಈಗ ವಿಡಿಯೋದಲ್ಲಿ ಚಿತ್ರಿಸಿ ನೀಡಲಾಗುತ್ತಿದೆ. ಅದರಿಂದ ಹೆಚ್ಚು ಸಂತೋಷ ದೊರೆಯಬಹುದು, ಆದರೆ ಕಲ್ಪನಾ ಶಕ್ತಿ ಕುಂಠಿತವಾಗುತ್ತಿದೆ.

    22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

    ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts