More

    ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

    ಬೆಂಗಳೂರು: ಗುಜರಾತ್​ನ ಅಮುಲ್​ ಹಾಲು ಕರ್ನಾಟಕಕ್ಕೆ ಪ್ರವೇಶಿಸಲಿದೆ ಎಂಬ ಹಿನ್ನೆಲೆಯಲ್ಲಿ ರಾಜ್ಯದ ಕೆಎಂಎಫ್​ನ ನಂದಿನಿ ಹಾಲು ಮಾರುಕಟ್ಟೆಗೆ ಆತಂಕ ಉಂಟಾಗಿತ್ತು. ಇದೀಗ ಹಾಲಿನ ಇನ್ನೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ ಎದುರಾಗಿದೆ.

    ಅಮುಲ್ ಹಾಲು ಕರ್ನಾಟಕದಲ್ಲಿ ಮಾರಾಟವಾದರೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್​) ಅಧೀನದ ನಂದಿನಿ ಹಾಲು ಮಾರುಕಟ್ಟೆಗೆ ಅಡ್ಡಿಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಕನ್ನಡಿಗರನೇಕರು ವಿರೋಧ ವ್ಯಕ್ತಪಡಿಸಿದ್ದರು. ಇದು ಬಳಿಕ ರಾಜಕೀಯ ವಿವಾದವಾಗಿ ಪರಿಣಮಿಸಿದ್ದು, ಈ ವಿಚಾರ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡಂತಿದೆ.

    ಇದನ್ನೂ ಓದಿ: ಈ ಸಲ ನಡೆಯಲ್ವಾ ಟಿಪ್ಪು ಜಯಂತಿ?: ಕುತೂಹಲ ಕೆರಳಿಸಿದೆ ಜಯಂತಿಗಳ ಪಟ್ಟಿ

    ಈ ನಡುವೆ ತಮಿಳುನಾಡಿಗೂ ಅಮುಲ್ ಹಾಲು ಪ್ರವೇಶ ಮಾಡಿರುವುದು ಅಲ್ಲಿನ ಸ್ಥಳೀಯ ಹಾಲಿನ ಮಾರುಕಟ್ಟೆಗೆ ಆತಂಕವೊಡ್ಡಿದೆ. ತಮಿಳುನಾಡು ಕೋಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್​ ಯೂನಿಯನ್​ನ ಆವಿನ್ ಬ್ರ್ಯಾಂಡ್​ನ ಹಾಲಿನ ಮಾರುಕಟ್ಟೆಗೆ ಆತಂಕ ಎದುರಾಗಿದೆ. ಅಮುಲ್ ಈಗಾಗಲೇ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಘಟಕವನ್ನು ಸ್ಥಾಪಿಸಿದ್ದು, ವೆಲ್ಲೂರಿನಿಂದ ಸಂಗ್ರಹಿಸಿದ ಹಾಲನ್ನು ಈ ಘಟಕಕ್ಕೆ ಸಾಗಿಸಲಾಗುತ್ತಿದೆ.

    22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

    2000 ರೂ. ನೋಟು ಬದಲಾವಣೆ: ಬದಲಿಸಿಕೊಳ್ಳಲು ಐಡಿ ಬೇಕಾ, ಖಾತೆ ಇರಲೇಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts