More

    ಲೋಕಸಭಾ ಚುನಾವಣೆ 2024; ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ ಗಣ್ಯರು

    ಬೆಂಗಳೂರು: 18ನೇ ಸಾರ್ವತಿಕ ಚುನಾವಣೆಗೆ ದೇಶಾದ್ಯಂತ ಇಂದು (ಏಪ್ರಿಲ್ 26) ಎರಡನೇ ಹಂತದ ಮತದಾನ ನಡೆಯುತ್ತಿದ್ದು, 13 ರಾಜ್ಯಗಳ 88 ಕ್ಷೇತ್ರಗಳಿಗೆ ವೊಟಿಂಗ್​ ನಡೆಯುತ್ತಿದೆ. ಕಣದಲ್ಲಿ 1200 ಅಭ್ಯರ್ಥಿಗಳಿದ್ದು, ಇವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಮನವಿ ಮಾಡಿದ್ದಾರೆ.

    ಈ ಕುರಿತು ಕನ್ನಡದಲ್ಲಿ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ ಕೋರುತ್ತೇನೆ. ನಿಮ್ಮ ಮತ ನಿಮ್ಮ ಧ್ವನಿ ಎಂದು ಬರೆದುಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಮತ ಚಲಾಯಿಸಿ ಮಾತನಾಡಿದ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​,  ಮತದಾನ ಮಾಡಲು ಎಲ್ಲ ಬನ್ನಿ. ಇದೊಂದು ಒಳ್ಳೆಯ ಅವಕಾಶ, ಪ್ರಜಾಪ್ರಭುತ್ವ‌ ಮುಂದೆ ತರುವ ಅವಕಾಶ ಇದು. ವೋಟ್ ಮಾಡಲು ಹೊರಗೆ ಬನ್ನಿ, ಬೆಂಗಳೂರಲ್ಲಿ ಜಾಸ್ತಿ ಜನ ಬರಬೇಕು. ಚುನಾವಣಾ ಆಯೋಗ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಮತದಾನ ಮಾಡಲು ಮುಂದೆ ಬನ್ನಿ ಎಂದು ಕರೆ ನೀಡಿದ್ದಾರೆ.

    ಇದನ್ನೂ ಓದಿ: ಎಸ್​ಆರ್​ಎಚ್​ ವಿರುದ್ಧ 35 ರನ್​ಗಳ ಜಯ; ಆರ್​ಸಿಬಿ ನಾಯಕ ಫಾಫ್​ ಹೇಳಿದ್ದಿಷ್ಟು

    ರಾಜರಾಜೇಶ್ವರಿನಗರದಲ್ಲಿ ಮತ ಚಲಾಯಿಸಿ ಮಾತನಾಡಿದ ಗೋಲ್ಡನ್​ ಸ್ಟಾರ್​ ಗಣೇಶ್​ ದಂಪತಿ, ಮತ ಹಾಕೋದು ನನ್ನ ಜವಾಬ್ದಾರಿ. ನನ್ನ ಹಕ್ಕನ್ನು ಚಲಾಯಿಸಿದ್ದೀನಿ. ನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿ. ಎಲ್ಲರೂ ವೋಟ್ ಹಾಕಿ. ಯಾವುದಾದರೂ ಕೆಲಸ ಆಗಿಲ್ಲವೆಂದರೆ ಅದನ್ನು ಕೇಳಬೇಕು ಎಂದರೆ ವೋಟ್​ ಮಾಡಿ. ವೋಟ್ ಹಾಕಿ ಕೇಳಿದರೆ ಅದರ ಬೆಲೆ ಜಾಸ್ತಿ ಇರುತ್ತದೆ ಎಂದು ಹೇಳಿದ್ದಾರೆ.

    ಜಯನಗರದ ಬಿ.ಇ‌ಎಸ್ ಕಾಲೇಜಿಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತದಾನದ ಮಾಡಿದರು. ಜನ ಭಾರತ ಅಭಿವೃದ್ಧಿ ಹೊಂದಲು ಇಚ್ಛೆ ಪಡುತ್ತಿದ್ದಾರೆ. ಹೀಗಾಗಿ ಜನ ಪೋಲಿಂಗ್ ಬೂತ್ ಗಳ ಕಡೆಗೆ ಬರುತ್ತಿದ್ದಾರೆ. ಚುನಾವಣಾ ಆಯೋಗ ಸಹ ಉತ್ತಮ ವ್ಯವಸ್ಥೆ ಮಾಡಿದೆ. ಮೊದಲ ಬಾರಿ ವೋಟ್ ಮಾಡಿದ ಮಂದಿಯನ್ನು ನೀಡಿ ಸಹ ಖುಷಿ ಆಯಿತು. ಬೆಂಗಳೂರು ದಕ್ಷಿಣ ಸಹ ಮತದಾನದಲ್ಲಿ ದಾಖಲೆ ಮಾಡಲಿ, ಜನ ಯಾವುದೇ ರೀತಿ ಬೇಜಾರು ಮಾಡಿಕೊಳ್ಳದೆ ಸರತಿಯಲ್ಲಿ ನಿಂತು ವೋಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮತ ಚಲಾಯಿಸಿ ಮಾತನಾಡಿದ ಇನ್ಫೋಸಿಸ್​ ಸಹ ಸಂಸ್ಥಾಪಕಾರ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ, ವೈಯಕ್ತಿಕ ಕೆಲಸ ಇರುವ ಕಾರಣ ಬೆಳಗ್ಗೆಯೇ ಮತದಾನ ಮಾಡುತ್ತಿದ್ದೇವೆ. ವಯಸ್ಸಾದವರು ಮತದಾನ ಮಾಡುತ್ತಾರೆ. ಆದರೆ ಯುವಕರು ಆಸಕ್ತಿ ತೋರಿಸುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದು ಮತದಾನ ಮಾಡಬೇಕು  ಎಂದು ಕರೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts