More

    ಜೈ ಶ್ರೀರಾಮ್​ ಎಂದು ಘೋಷಣೆ ಕೂಗುವವರಿಗೆ ಪೊಲೀಸರು ಬೂಟಿನಲ್ಲಿ ಒದೆಯಬೇಕು; ಕಾಂಗ್ರೆಸ್​ ನಾಯಕನ ಹೇಳಿಕೆ ವೈರಲ್

    ರಾಯಚೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೇ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ತೊಡಗಿದ್ದಾರೆ. ಇನ್ನೂ ಈ ನಡುವೆ ಕಾಂಗ್ರೆಸ್​ ಮುಖಂಡನೋರ್ವ ನೀಡಿರುವ ಹೇಳಿಕೆ ವಿಚಾದಕ್ಕೀಡಾಗಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿದೆ.

    ಜಿ.ಪಂ. ಮಾಜಿ ಉಪಾಧ್ಯಕ್ಷ ಬಷೀರುದ್ದೀನ್ ಜೈ ಶ್ರೀರಾಮ್ ಎಂದು ಹೇಳಿದವರನ್ನು ಪೊಲೀಸರು ಬೂಟಿಗಾಲಲ್ಲಿ ಒದೆಯಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

    ಇದನ್ನೂ ಓದಿ: ದಿನಕ್ಕೆ ಮೂವರಂತೆ ಪ್ರಜ್ವಲ್ ಐದು ವರ್ಷ ಇದನ್ನೇ ಮಾಡಿದ್ದಾನೆ: ಬಿಜೆಪಿ ನಾಯಕ ಶಿವರಾಮೇಗೌಡ

    ರಾಯಚೂರು ನಗರಸಭೆ ಕಮಿಷನರ್ ಗುರುಸಿದ್ದಯ್ಯ ಹಿರೇಮಠ್​ ಅವರ ಸಮ್ಮುಖದಲ್ಲಿ ಬಷೀರುದ್ದೀನ್​ ಈ ಹೇಳಿಕೆ ನೀಡಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಕಾಂಗ್ರೆಸ್​ ಮುಖಂಡನ ಹೇಳಿಕೆ ಖಂಡಿಸಿ ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್​ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

    ಬಷೀರುದ್ದೀನ್​ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್​ ಡ್ಯಾಮೇಜ್ ಕಂಟ್ರೋಲ್ ಮಾಡಲು ವಿವಾದಾತ್ಮಕ ಹೇಳಿಕೆ ನೀಡಿದ ಬಷೀರುದ್ದೀನ್‌ನನ್ನು ಪಕ್ಷದಿಂದ ಉಚ್ಚಾಟಿಸಿದೆ. ಕಾಂಗ್ರೆಸ್​ ಶಿಸ್ತು ಪಾಲನಾ ಸಮಿತಿ ಈ ಬಗ್ಗೆ ಆದೇಶ ಹೊರಡಿಸಿದೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಚುನಾವಣೆಯಲ್ಲಿ ಇದು ಕಾಂಗ್ರೆಸ್​ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts