More

    ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರು ಹೇಳ್ತಾನೆ 7ರ ಪೋರ! ಈತನ ನೆನಪಿನ ಶಕ್ತಿಗೆ ಒಂದು ಸಲಾಂ

    ಚಿತ್ರದುರ್ಗ: ನೆನಪಿನ ಶಕ್ತಿ ಒಲಿಯುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಬೇಕಾಗುತ್ತದೆ ಮತ್ತು ಕಲಿಯಬೇಕೆಂಬ ಆಸಕ್ತಿಯು ಇರಬೇಕು. ಕೆಲವರಿಗೆ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದು ಕೇಳಿದರೆ ಹೇಳಲು ತಡಬಡಾಯಿಸುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಪುಟ್ಟ ಪೋರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ಹರಳು ಹುರಿದಂತೆ ಪಟಪಟನೇ ಹೇಳುವುದನ್ನು ನೋಡಿದರೆ ಆತನ ನೆನಪಿನ ಶಕ್ತಿಗೆ ಒಂದು ಸಲಾಂ ಹೇಳಲೇಬೇಕು.

    7ರ ಪ್ರಾಯದಲ್ಲೇ ಚಿತ್ರದುರ್ಗದ ಮದಕರಿಪುರದ ಅಯಾನ್, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ನಿರರ್ಗಳವಾಗಿ ಹೇಳುತ್ತಾನೆ. ಈತ ಸಯ್ಯದ್ ಮೋಹಿನಿದ್ದೀನ್ ಹಾಗೂ ತಬ್ರೇಜ್ ದಂಪತಿಯ ಪುತ್ರ. ಮದಕರಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

    ಇದನ್ನೂ ಓದಿ: ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಮನೆಯೇ ಮೊದಲ ಪಾಠಶಾಲೆ

    ತಂದೆಯಿಂದ ಒಂದೊಂದೇ ಕ್ಷೇತ್ರದ ಹೆಸರನ್ನು ಹೇಳಿಸಿಕೊಂಡು ಅದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾನೆ. ಯಾವಾಗ ಕೇಳಿದರೂ ಸ್ವಲ್ಪವೂ ಯೋಚಿಸದೆ ಪಟಪಟ ಅಂತ ಹೇಳುತ್ತಾನೆ. ಕಲಿಕೆಯ ಮೇಲಿರುವ ಈತನ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಅಯಾನ್​ಗೆ ಮನೆಯೇ ಮೊದಲ ಪಾಠಶಾಲೆಯಾಗಿದೆ ಮತ್ತು ತಂದೆಯೇ ಮೊದಲ ಗುರುವಾಗಿದ್ದಾರೆ.

    ನಿರರ್ಗಳವಾಗಿ ಓದುತ್ತಾನೆ

    ಪೇಂಟಿಂಗ್, ದಿನಪತ್ರಿಕೆಗಳನ್ನು ಓದುವುದು ಈತನ ಹವ್ಯಾಸಗಳಾಗಿವೆ. ಈಗಲೇ ದಿನಪತ್ರಿಕೆಯನ್ನು ನಿರರ್ಗಳವಾಗಿ ಓದುತ್ತಾನೆ. ಮೆಮೊರಿ ಪವರ್​ನಲ್ಲಿ ಜೀನಿಯಸ್ ಅಯಾನ್​, ಶಾಲೆಯಲ್ಲೂ ಶಿಕ್ಷಕರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ. ಈತನ ಜ್ಞಾಪಕ ಶಕ್ತಿಯನ್ನು ಕಂಡು ಅಚ್ಚರಿಗೀಡಾಗಿರುವ ಶಿಕ್ಷಕರು ಮತ್ತು ಗ್ರಾಮಸ್ಥರು ಆತನಿಗೆ ಬೆನ್ನು ತಟ್ಟಿದ್ದಾರೆ. ಈ ಅಯಾನ್​ ಬೌದ್ಧಿಕವಾಗಿ ಇನ್ನಷ್ಟು ಬೆಳೆಯಲಿ ಎಂಬುದು ಎಲ್ಲ ಆಶಯವಾಗಿದೆ. (ದಿಗ್ವಿಜಯ ನ್ಯೂಸ್​)

    ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ

    ಹಿಂದಿನ ಸರ್ಕಾರದ ಎಲ್ಲ ಹಗರಣಗಳ ತನಿಖೆ: ಸಿದ್ದರಾಮಯ್ಯ ಸರ್ಕಾರ ಗಂಭೀರ ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts