More

    ಕರೊನಾ ಹೋಯ್ತಲ್ಲ ಅಂತ ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಎಚ್ಚರಿಕೆ ನೀಡಿದ ಡಬ್ಲ್ಯುಎಚ್​ಒ

    ಜಿನೀವಾ: ಮಹಾಮಾರಿ ಕರೊನಾ ವೈರಸ್​ ದೂರವಾಯ್ತಲ್ಲ ಎಂದು ನಿಟ್ಟುಸಿರು ಬಿಡುವಾಗಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ)ಯ ಮುಖ್ಯಸ್ಥರಾದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ನೀಡಿರುವ ಎಚ್ಚರಿಕೆಯ ಸಂದೇಶ ಜಗತ್ತಿನ ಜನತೆಯನ್ನು ಮತ್ತೆ ಆತಂಕಕ್ಕೆ ದೂಡುವಂತಿದೆ.

    ವಿಶ್ವವು ಮುಂದಿನ ಸಾಂಕ್ರಾಮಿಕವನ್ನು ಎದುರಿಸಲು ಸನ್ನದ್ಧವಾಗಬೇಕಿದೆ. ಮುಂಬರುವ ಸಾಂಕ್ರಾಮಿಕವು ಕರೊನಾಗಿಂತಲೂ ತುಂಬಾ ಅಪಾಯಕಾರಿ ಆಗಿರಬಹುದು ಎಂದು ಎಚ್ಚರಿಸಿದ್ದಾರೆ. ಇಡೀ ಜಗತ್ತು ಕರೊನಾ ಮುಕ್ತವಾಗಿ ಸ್ಥಿರವಾಗುತ್ತಿರುವ ಈ ಸಂದರ್ಭದಲ್ಲಿ ಈ ಎಚ್ಚರಿಕೆ ಸಂದೇಶ ಚಿಂತಿಸುವಂತೆ ಮಾಡಿದೆ.

    ಇದನ್ನೂ ಓದಿ: 750 ರೂ ಕಟ್ಟಿದವರಿಗೆ 20 ಲಕ್ಷ ರೂ ಪರಿಹಾರ: ಸಂತ್ರಸ್ತರಿಗೆ ನೆರವಾದ ಬ್ಯಾಂಕ್ ಅಪಘಾತ ವಿಮೆ

    ಆರೋಗ್ಯ ಬೆದರಿಕೆ ಅಂತ್ಯವಾಗಿಲ್ಲ

    ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಸಿದ್ದ ಕೋವಿಡ್​-19ನ ಅಂತ್ಯವಾಗಿದೆ ಹೊರತು ಕೋವಿಡ್​ 19 ಸೃಷ್ಟಿಸಿರುವ ಜಾಗತಿಕ ಆರೋಗ್ಯ ಬೆದರಿಕೆ ಅಂತ್ಯವಾಗಿಲ್ಲ ಎಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅಭಿಪ್ರಾಯಪಟ್ಟಿದ್ದಾರೆ. ರೋಗ ಮತ್ತು ಸಾವಿನಂತಹ ಹೊಸ ಉಲ್ಬಣಗಳನ್ನು ಉಂಟುಮಾಡುವ ಮತ್ತೊಂದು ರೂಪಾಂತರವು ಬೆದರಿಕೆಯಾಗಿಯೇ ನಮ್ಮ ನಡುವೆ ಉಳಿದಿದೆ. ಹೊಸದಾಗಿ ಸಂಭವಿಸಬಹುದಾದ ಪಿಡುಗು ಇನ್ನೂ ಮಾರಣಾಂತಿಕವಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ.

    ಉತ್ತರ ನೀಡಲು ಸಿದ್ಧರಾಗಬೇಕಿದೆ

    WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ತಮ್ಮ ವರದಿಯನ್ನು 76ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಪ್ರಸ್ತುತಪಡಿಸಿದಾಗ ಈ ಎಚ್ಚರಿಕೆಯನ್ನು ವಿವರಿಸಿದರು. ಮುಂಬರುವ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸಲು ಜಗತ್ತು ಸನ್ನದ್ಧವಾಗಬೇಕಿದೆ. ಮುಂದಿನ ಪಿಡುಗು ಬಂದು ಬಾಗಿಲು ಬಡಿಯುವ ಮುನ್ನ ನಿರ್ಣಾಯಕವಾಗಿ, ಸಾಮೂಹಿಕವಾಗಿ ಮತ್ತು ಸಮಾನವಾಗಿ ಅದಕ್ಕೆ ಉತ್ತರ ನೀಡಲು ನಾವೆಲ್ಲ ಸಿದ್ಧರಾಗಬೇಕಿದೆ ಎಂದು ಸಲಹೆ ನೀಡಿದರು. (ಏಜೆನ್ಸೀಸ್​)

    ಕೊಪ್ಪಳದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಹೋದ ಲೈನ್​ಮ್ಯಾನ್​ಗೆ ಚಪ್ಪಲಿಯಿಂದ ಹಲ್ಲೆ

    ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ

    ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರು ಹೇಳ್ತಾನೆ 7ರ ಪೋರ! ಈತನ ನೆನಪಿನ ಶಕ್ತಿಗೆ ಒಂದು ಸಲಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts