More

    ಬಾಲ್ಯ ವಿವಾಹ ತಡೆದ ಅಧಿಕಾರಿಗಳು

    ಬಾದಾಮಿ: ಹದಿನೆಂಟು ವರ್ಷದೊಳಗಿನ ಬಾಲಕಿಯರಿಗೆ ಬಾಲ್ಯವಿವಾಹ ನಡೆಯುತ್ತಿದ್ದು, ಇದನ್ನ ತಡೆಯಬೇಕೆಂದು ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬಾಲ್ಯ ವಿವಾಹ ತಡೆದ ಘಟನೆ ತಾಲೂಕಿನ ಹೊಸಕೋಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಏ. 23ರಂದು ತಾಲೂಕಿನ ಹೊಸಕೋಟಿ ಗ್ರಾಮದ ಗೋಪಾ ನಿಂಗಪ್ಪ ನಾಯ್ಕರ್ ಅವರ ಮಕ್ಕಳಾದ ಮಹಾದೇವಿ, ಲಕ್ಷ್ಮೀಬಾಯಿ ಎಂಬುವವರಿಗೆ 18 ವರ್ಷ ಪೂರ್ಣಗೊಳ್ಳದೆ ಮನೆಯಲ್ಲಿ ಮದುವೆ ನಡೆಸಿದ್ದು, ಕೂಡಲೇ ಇದನ್ನು ತಡೆಯಬೇಕೆಂದು ಜಿಲ್ಲಾ ಘಟಕದ ಸಹಾಯವಾಣಿಗೆ ಕರೆ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಅಂದೇ ರಾತ್ರಿ 10 ಗಂಟೆಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪಿಡಿಒ ಸಹಿತ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಪಾಲಕರಿಗೆ ತಿಳಿವಳಿಕೆ ನೀಡಿ ಬಾಲ್ಯವಿವಾಹ ತಡೆದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಪಂಚನಾಮೆ ಮಾಡಿಕೊಂಡು ಪಾಲಕರು ತಮ್ಮ ಇಬ್ಬರು ಮಕ್ಕಳು ಏ.21 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವಡರೊಟ್ಟಿಗೆ ಹೋಗಿದ್ದಾರೆ. 18 ವರ್ಷ ಪೂರ್ಣಗೊಳ್ಳುವವರೆಗೂ ಮದುವೆ ಮಾಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಕೆರೂರ ಪಿಎಸ್‌ಐ ಆನಂದ ಆದಗೊಂಡ ಅವರು ಒಂದು ವೇಳೆ ಬಾಲ್ಯವಿವಾಹ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

    ನಂತರ ತೋಟದ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಹುಡುಗನಿಗೆ ಬಾಲ್ಯವಿವಾಹದ ಕುರಿತು ತಿಳುವಳಿಕೆ ನೀಡಿ ಮನವೊಲಿಸಿದ್ದಾರೆ. ಅಧಿಕಾರಿಗಳಾದ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎ. ಹದ್ಲಿ, ಕೈನಕಟ್ಟಿ, ಪಿಡಿಒ ಸದಾನಂದ ಪರಸನ್ನವರ, ಅಂಗನವಾಡಿ ಮೇಲ್ವಿಚಾರಕಿ ಯಲ್ಲಮ್ಮ ನಾಯ್ಕರ, ನರೆನೂರ ಸಮೂಹ ಸಂಪಪನ್ಮೂಲ ವ್ಯಕ್ತಿ ಎಚ್.ಬಿ. ಗುನ್ನನ್ನವರ, ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಬಿ.ಆರ್. ಹೆಳವರ, ಗ್ರಾಮ ಆಡಳಿತಾಧಿಕಾರಿ ಸುನಿತಾ ಹುಡೇದ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಸಾಲಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts