More

    ನಿಮ್ಮ ಮತದಾನವೇ ನಮಗೆ ಉಡುಗೊರೆ

    ತೇರದಾಳ: ಸುಡುಬಿಸಿಲಿನ ಪ್ರಕರತೆಯ ನಡುವೆ ಚುನಾವಣೆ ಅಖಾಡ್ ಕಾವೇರುತ್ತಿದೆ. ಹಾಗಾಗಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯು ಕೂಡ ಜೋರಾಗಿದೆ. ಏತನ್ಮಧ್ಯೆ ತಲೆಸುಡುವ ಬಿಸಿಲನ್ನೂ ಲೆಕ್ಕಿಸದೆ ಅಧಿಕಾರಿಗಳೂ ಮತದಾನ ಜಾಗೃತಿಗೆ ಬೀದಿಬೀದಿ ಸುತ್ತುತ್ತಿದ್ದಾರೆ. ಅವರ ಜಾಗೃತಿಯ ಹೆಜ್ಜೆ ಭಾನುವಾರ ಮದುವೆ ಮಂಟಪಕಕ್ಕೂ ತೆರಳಿ ವಧುವರರ ಮೂಲಕ ಮತದಾನ ಜಾಗೃತಿ ಮೂಡಿಸಿರುವುದು ವಿಶೇಷವಾಗಿದೆ.

    ಹೌದು, ಪುರಸಭೆ ವತಿಯಿಂದ ಭಾನುವಾರ ರಾಜ್ಯ ಮುಖ್ಯ ಚುನಾವಣೆ ಅಧಿಕಾರಿಗಳ ನಿರ್ದೇಶನದಂತೆ ಸ್ಥಳೀಯ ಪುರಸಭೆ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ, ಧ್ವಜಾರೋಹಣ ನೆರವೇರಿಸಿ, ಪ್ರಮಾಣ ವಚನ ಬೋಧನೆ ಮತ್ತು ಸ್ವೀಕಾರ ಕಾರ್ಯಕ್ರಮಗಳನ್ನು ಬೆಳಗ್ಗೆಯಿಂದಲೇ ಜಾಗೃತಿಯ ರಂಗು ಮೂಡಿಸಿದವು. ಮತಜಾಗೃತಿಗಳ ಧ್ವನಿಸುರುಳಿಯೊಂದಿಗೆ ಸಾಗಿದ ಜಾಗೃತಿ ಮೆರವಣಿಗೆಯು ಸ್ಥಳೀಯ ಆದನ್ನವರ ಕುಟುಂಬಸ್ಥರ ಮದುವೆ ಮಂಟಪಕಕ್ಕೂ ತೆರಳಿತು. ಅಲ್ಲಿ ವಧು-ವರರು ತಮ್ಮ ಕೈಯಲ್ಲಿ ಮೇ 7 ರಂದು ತಪ್ಪದೆ ಮತದಾನ ಮಾಡಿ’ ‘ನಿಮ್ಮ ಮತದಾನವೇ ನಮಗೆ ಉಡುಗೊರೆ’ ಎಂದು ಬರೆಯಲಾದ ಲಕಗಳನ್ನು ಹಿಡಿದುಕೊಂಡು ಜಾಗೃತಿ ಮೂಡಿಸಿದರು.

    ಇದೇ ಸಂದರ್ಭದಲ್ಲಿ ಮತದಾನ ಜಾಗೃತಿ ಭಿತ್ತಿ ಪತ್ರಗಳನ್ನು ಕೂಡ ವಿತರಿಸಲಾಯಿತು.

    ಸಿಬ್ಬಂದಿ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಮುಖ್ಯಾಧಿಕಾರಿ ಮಾಲಿನಿ, ಸಿಬ್ಬಂದಿ ಭರಮು ದನಗರ, ಗೌರಿ ಮಾಲಾಪೂರ, ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಸಾರ್ವಜನಿಕರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts