More

    ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಸೈಕಲ್ ಏರಿ ಹೊರಟ ಎಎಸ್​ಐ!

    ಚಂಡೀಗಢ: ಮಾದಕ ದ್ರವ್ಯ ಸೇವನೆಯ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಪೊಲೀಸರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಈ ನಡುವೆ ಪಂಜಾಬ್​ನ ಪೊಲೀಸ್ ಅಧಿಕಾರಿಯೊಬ್ಬರು ನಿಷೇಧಿತ ಪದಾರ್ಥ ಸೇವನೆ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸಲು ಸ್ವತಃ ತಾವೇ ಮುಂದಾಗಿದ್ದಾರೆ.

    ಇದನ್ನೂ ಓದಿ: ನೂತನ ಸಂಸತ್​ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ

    ಕಪುರ್ತಲಾ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಸಬ್​ಇನ್ಸ್​ಪೆಕ್ಟರ್ (ASI) ಗುರ್ಬಚನ್ ಸಿಂಗ್ ವಿಭಿನ್ನವಾಗಿ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿದ್ದಾರೆ. ಕರ್ತವ್ಯ ಮುಗಿಸಿ ಮನೆಗೆ ಬರುತ್ತಿದ್ದಂತೆ ಸೈಕಲ್ ಏರಿ ನಗರ, ಮಾರುಕಟ್ಟೆ, ಕಾಲೇಜು, ಶಾಲೆ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರಯಾಣ!

    56 ವರ್ಷದ ಎಎಸ್​ಐ ಗುರ್ಬಚನ್ ಸಿಂಗ್ 1994-95ರಲ್ಲಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 25,000 ಕಿ.ಮೀ ಪ್ರಯಾಣಿಸಿ ಶಾಂತಿಯ ಸಂದೇಶ ಸಾರಿದ್ದರು. ಇದೀಗ ತಮ್ಮ ಸೈಕಲ್​ಗೆ ಬೋರ್ಡ್​ ಒಂದನ್ನು ನೇತಾಡಿಸಿಕೊಂಡು ಜನರಲ್ಲಿ ಕಾಳಜಿ ಮೂಡಿಸುತ್ತಿದ್ದಾರೆ. ಬೋರ್ಡ್​ನಲ್ಲಿ ‘ಮಾದಕ ದ್ರವ್ಯ ಸೇವನೆ ಜೀವನವನ್ನು ಕೊನೆಗೊಳಿಸುತ್ತದೆ’ ಎಂಬರ್ಥ ವಾಕ್ಯ ಬರೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಸ್​ಐ ಗುರ್ಬಚನ್ ಸಿಂಗ್’ನಾನು ಕೆಲವು ಪದಗಳಲ್ಲಿ ದೊಡ್ಡ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆಯನ್ನು ‘ಪಟ್ಟಾಭಿಷೇಕ’ ಎಂದು ಪರಿಗಣಿಸಿದ ಪ್ರಧಾನಿ: ಕಿಡಿಕಾರಿದ ರಾಹುಲ್ ಗಾಂಧಿ

    ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಮೂಡಿಸುವುದು ನನ್ನ ಪ್ರಯತ್ನದ ಹಿಂದಿನ ಉದ್ದೇಶವಾಗಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರೆ ಅವರು ದಾರಿ ತಪ್ಪುವುದಿಲ್ಲ. ಕರ್ತವ್ಯದ ನಂತರ ಬಿಡುವಿನ ವೇಳೆಯಲ್ಲಿ ಜಾಗೃತಿ ಮೂಡಿಸುತ್ತಾ, ಜನರಿಗೆ ಉತ್ತಮ ಆರೋಗ್ಯದ ಪ್ರಾಮುಖ್ಯತೆಯ ತಿಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಎಎಸ್​ಐ ಗುರ್ಬಚನ್ ಸಿಂಗ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

    ನನಗೆ ಖುಷಿ ಕೊಡುತ್ತಿದೆ!

    ಧೂಮಪಾನ ಮಾಡುತ್ತಿರುವ ಕಾರ್ಮಿಕರು ಕಂಡು ಬಂದರೆ, ತಂಬಾಕಿನಿಂದ ದೇಹದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತೇನೆ. ಅಲ್ಲದೆ ನೀರಿನ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಕುರಿತು ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ವೇಳೆ ಜನರಿಗೆ ಉತ್ತಮ ರೀತಿಯ ಸ್ಪಂದನೆ ದೊರಕುತ್ತದೆ. ಸಾಮಾಜಿಕ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನನಗೆ ಖುಷಿ ಕೊಡುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts