More

    ಹೊಸ ಮನೆ ಪ್ರವೇಶಿಸಿದ ಪ್ರೇಮ್-ರಕ್ಷಿತಾ ದಂಪತಿ; ಇಲ್ಲಿವೆ ನೋಡಿ ಗೃಹಪ್ರವೇಶದ ಫೋಟೋಗಳು…

    ಬೆಂಗಳೂರು: ನಿರ್ದೇಶಕ ಪ್ರೇಮ್-ನಟಿ ರಕ್ಷಿತಾ ದಂಪತಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದ್ದು, ರಕ್ಷಿತಾ ತಾಯಿ, ಪುತ್ರ ಸೂರ್ಯ, ಸಹೋದರ ನಟ ರಾಣಾ ಸೇರಿದಂತೆ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ರಕ್ಷಿತಾ ಇನ್ಸ್​ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ನಟನೆಯಿಂದ ದೂರ ಉಳಿದಿರುವ ರಕ್ಷಿತಾ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸದ್ಯ ತೊಡಗಿಸಿಕೊಂಡಿದ್ದಾರೆ. ಜತೆಗೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಮನೆ ಖರೀದಿಸಿರುವ ಪ್ರೇಮ್-ರಕ್ಷಿತಾ ದಂಪತಿಗೆ, ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ.

    ಮನೆಯ ಗೃಹ ಪ್ರವೇಶದ ಸಂದರ್ಭದ ಜತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ರಕ್ಷಿತಾ, ಇದು ಫ್ಯಾಮಿಲಿ ಟೈಮ್ ಎಂದು ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts