More

    ಸಿಬಿಎಸ್​ಇ ಫಲಿತಾಂಶ: ಕರ್ನಾಟಕಕ್ಕೆ ಆರನೇ ಸ್ಥಾನ, ಬೆಂಗಳೂರು ಪ್ರಾದೇಶಿಕ ವಿಭಾಗಕ್ಕೆ ಎರಡನೇ ಸ್ಥಾನ

    ಬೆಂಗಳೂರು: ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶಗಳು ಶುಕ್ರವಾರ ಪ್ರಕಟಗೊಂಡಿದ್ದು, ಬೆಂಗಳೂರು ಪ್ರಾದೇಶಿಕ ವಿಭಾಗವು ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಮತ್ತೊಂದೆಡೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕ 6ನೇ ಸ್ಥಾನ ಪಡೆದುಕೊಂಡಿದೆ.

    ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ನ್ಯಾಷನಲ್ ಪಬ್ಲಿಕ್ ಶಾಲೆಯ (ಎನ್‌ಪಿಎಸ್) ಆದಿತ್ಯ ವಿವೇಕ್ ಗುಲವಾನಿ 12ನೇ ತರಗತಿಯ ವಾಣಿಜ್ಯ ವಿಭಾಗದಲ್ಲಿ ಶೇ.99.2, ವಿಜ್ಞಾನ ವಿಭಾಗದಲ್ಲಿ ಅನಂತರಾಮನ್ ಸುಬ್ರಹ್ಮಣಿಯನ್ ಅಯ್ಯರ್ ಶೇ.98.4 ಮತ್ತು ಕಲಾ ವಿಭಾಗದಲ್ಲಿ ದಿಯಾ ಶ್ರೀನಿವಾಸನ್ ಶೇ.98 ಫಲಿತಾಂಶ ಪಡೆದು ಟಾಪರ್ ಎನಿಸಿದ್ದಾರೆ. ಬೆಂಗಳೂರಿನ ಹಲವಾರು ಶಾಲೆಗಳಲ್ಲಿ ಎಲ್ಲ ಮಕ್ಕಳೂ ಉತ್ತೀರ್ಣವಾಗುವ ಮೂಲಕ ಶೇ.100 ಫಲಿತಾಂಶದ ಸಾಧನೆ ಮಾಡಿದ್ದಾರೆ.

    ಇದನ್ನೂ ಓದಿ: ವಾಟ್ಸ್ಆ್ಯಪ್ ಮೂಲಕ ವಂಚನೆ; ಸುರಕ್ಷತೆಗಾಗಿ ನೀವು ಮಾಡಬೇಕಾದ್ದೇನು?

    ಎಚ್‌ಆರ್‌ಬಿಆರ್ ಲೇಔಟ್‌ನ ಸಿಎಂಆರ್‌ಎನ್‌ಪಿಎಸ್ ಶಾಲೆಯಲ್ಲಿ ವಾಣಿಜ್ಯ ವಿಭಾಗದ ನಿಮಿಷಕವಿ ಕೃಷ್ಣ ಅನ್ವಿತಾ ಶೇ.97, ಆರ್ಯನ್ ಅನ್ನ ಶೇ.95.6, ಲಯ ಶ್ರೀಕಾಂತ್ ಶೇ.95.4 ಫಲಿತಾಂಶ ಪಡೆದಿದ್ದಾರೆ. ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ನಿಖಿಲ್ ಪ್ರಸಾದ್ ಶೇ.96, ಪರಿಕ್ಷಿತ್ ಮೋಲಿಕ್ಯಾರ್ ಶೇ.95.2, ಎಲ್.ರಿತಿಕಾ ಮತ್ತು ಎರಿನ್ ದಿಯಾ ಸಿಕ್ವೆರಾ ತಲಾ ಶೇ.94.8 ಫಲಿತಾಂಶ ಪಡೆದಿದ್ದಾರೆ.

    ಇದನ್ನೂ ಓದಿ: ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ಶ್ರೀಚೈತನ್ಯ ಶಾಲೆಯ ಮೂವರು ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ 500ಕ್ಕೆ ತಲಾ 497 (ಶೇ.99.4) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೆ, ಇನ್ನೂ ಐವರು 495 ಅಂಕಗಳನ್ನು ಪಡೆದಿದ್ದಾರೆ. ಶ್ರೀಚೈತನ್ಯ ಸಮೂಹದ ಶೇ.89 ಶಾಲೆಗಳಲ್ಲಿ ಶೇ.100 ಫಲಿತಾಂಶದ ಸಾಧನೆ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.

    ಎರಡನೇ ಸ್ಥಾನ ಪಡೆದ ಬೆಂಗಳೂರು

    ಪ್ರಾದೇಶಿಕವಾರು ತಿರುವನಂತಪುರ ದೇಶದಲ್ಲೇ ಅತಿ ಹೆಚ್ಚು ಫಲಿತಾಂಶ ಪಡೆದಿದೆ. ನಂತರದ ಸ್ಥಾನದಲ್ಲಿ ಬೆಂಗಳೂರು ಪ್ರದೇಶವಿದೆ. ಬೆಂಗಳೂರು ಪ್ರಾದೇಶಿಕದ ಶಾಲಾ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಶೇ.98.64 ಉತ್ತೀರ್ಣರಾಗಿದ್ದರೆ, ಹತ್ತನೇ ತರಗತಿಯಲ್ಲಿ ಶೇ.99.18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತನ್ಮೂಲಕ 12ನೇ ತರಗತಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ. 0.48ರಷ್ಟು ಫಲಿತಾಂಶ ಹೆಚ್ಚಾಗಿದ್ದರೆ, ಹತ್ತನೇ ತರಗತಿಯಲ್ಲಿ ಶೇ. 0.04ರಷ್ಟು ಕಡಿಮೆಯಾಗಿದೆ.
    ಇನ್ನು ರಾಜ್ಯವಾರು 12ನೇ ತರಗತಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದ್ದರೆ, 10ನೇ ತರಗತಿಯಲ್ಲಿ ಆರನೇ ಸ್ಥಾನ ಪಡೆದಿದೆ. ಹತ್ತನೇ ತರಗತಿಯಲ್ಲಿ ನೆರೆಯ ರಾಜ್ಯಗಳಾದ ಕೇರಳ ಶೇ.99.91, ತಮಿಳುನಾಡು ಶೇ.99.73, ತೆಲಂಗಾಣ ಶೇ.99.67, ಆಂಧ್ರಪ್ರದೇಶ ಶೇ.99.73 ಮತ್ತು ಪುದುಚರಿ ಶೇ.99.54ರಷ್ಟು ಫಲಿತಾಂಶ ಪಡೆದಿದ್ದು ಕರ್ನಾಟಕಲ್ಲಿ ಪರೀಕ್ಷೆ ಬರೆದಿದ್ದ 74,841 ವಿದ್ಯಾರ್ಥಿಗಳಲ್ಲಿ 74,230 ಮಂದಿ (99.18) ಉತ್ತಿರ್ಣರಾಗುವ ಮೂಲಕ ಆರನೇ ಸ್ಥಾನ ಪಡೆದಿದೆ.

    ಇದನ್ನೂ ಓದಿ: ಮತ ಚಲಾಯಿಸಿದ ಬೆನ್ನಿಗೇ ‘ಕರೆಂಟ್ ಶಾಕ್​’: ಏ. 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ!

    ಅದೇ ರೀತಿ 12ನೇ ತರಗತಿಯಲ್ಲಿ ಲಕ್ಷದೀಪ ಶೇ.100, ಕೇರಳ ಶೇ.99.91, ಮಿಜೋರಾಮ್ 99.49 ಫಲಿತಾಂಶ ಪಡೆದಿದ್ದರೆ ಕರ್ನಾಟಕದ 19,468 ವಿದ್ಯಾರ್ಥಿಗಳಲ್ಲಿ 19,203 ಮಂದಿ (ಶೇ.98.63) ಉತ್ತಿರ್ಣರಾಗುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಪ್ರಸ್ತುತ 12ನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಕೋವಿಡ್‌ನಿಂದಾಗಿ 10ನೇ ತರಗತಿ ಮಂಡಳಿ ಪರೀಕ್ಷೆ ಎದುರಿಸಿರಲಿಲ್ಲ. ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲಾಗಿತ್ತು.

    ಯಾವ ಶಾಲೆ ಎಷ್ಟು ಫಲಿತಾಂಶ?

    ರಾಜ್ಯದಲ್ಲಿ ಹತ್ತನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಸ್ವತಂತ್ರ ಶಾಲೆಗಳಲ್ಲಿ ಶೇ.99.12, ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ.99.55 ಫಲಿತಾಂಶ ಬಂದಿದೆ. ಇನ್ನು 12ನೇ ತರಗತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೇ. 96.43, ಅನುದಾನಿತ ಶಾಲೆಗಳಲ್ಲಿ ಶೇ.97.44, ಸ್ವತಂತ್ರ ಶಾಲೆಗಳಲ್ಲಿ ಶೇ.99.09 ಮತ್ತು ಜೆಎನ್‌ವಿಗಳಲ್ಲಿ ಶೇ.100, ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ.95.61 ಫಲಿತಾಂಶ ಬಂದಿದೆ.

    ವಿದ್ಯಾರ್ಥಿಗಳಿಗೆ ಶುಭ ಕೋರಿದ ಮೋದಿ

    ಸಿಬಿಎಸ್‌ಇ 12ನೇ ತರಗತಿಯಲ್ಲಿ ಉತ್ತೀರ್ಣರಾದ ಎಲ್ಲಾ ಪರೀಕ್ಷಾ ಯೋಧರಿಗೆ ಅಭಿನಂದಿಸುವೆ. ನನಗೆ ಈ ಯುವಕರ ಕಠಿಣ ಪರಿಶ್ರಮ, ದೃಢ ಸಂಕಲ್ಪದ ಬಗ್ಗೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
    ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬಹುದಿತ್ತು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಮೋದಿ, ಭವಿಷ್ಯದಲ್ಲಿ ನೀವು ಮುಂದೆ ನೋಡಬೇಕಾಗಿರುವುದು ಬಹಳಷ್ಟಿದೆ. ನೀವು ಹೆಚ್ಚು ತೊಡಗಿಸಿಕೊಂಡಿರುವ ಕ್ಷೇತ್ರಗಳಲ್ಲಿ ನಿಮ್ಮ ಪ್ರತಿಭೆಯನ್ನು ಬಳಸಿದರೆ ಒಂದಿಲ್ಲೊಂದು ದಿನ ಯಶಸ್ಸು ಸಿಗುವುದು ಖಚಿತ ಎಂದಿದ್ದಾರೆ.

    ಈ ಮಗುವಿಗೆ ಮೂವರು ಪೇರೆಂಟ್ಸ್; ಇಲ್ಲಿ ಜನಿಸುತ್ತಿವೆ ‘ಡಿಸೈನರ್ ಬೇಬಿಸ್’!

    ಇನ್ನು ಕಾರ್ಪೋರೇಟ್ ಕಚೇರಿಗಳಲ್ಲೂ ಬಾರ್!; ಅಬಕಾರಿ ನೀತಿಯಲ್ಲೇ ಅವಕಾಶ: ಎಲ್ಲಿ, ಷರತ್ತುಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts