ನವದೆಹಲಿ: ಸಾಮಾನ್ಯವಾಗಿ ಕಚೇರಿಗಳಲ್ಲಿ ಮದ್ಯ ನಿಷೇಧವಿರುತ್ತದೆ. ಆದರೆ ಇಲ್ಲೊಂದು ಕಡೆ ಕಚೇರಿಗಳಲ್ಲೂ ಮದ್ಯ ಲಭಿಸಲಿದೆ. ಮಾತ್ರವಲ್ಲ, ಕಾರ್ಪೋರೇಟ್ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ಹಾಗೂ ಅತಿಥಿಗಳಿಗೆ ಮದ್ಯ ನೀಡಲು ಅಬಕಾರಿ ನೀತಿಯಲ್ಲೇ ಅವಕಾಶ ಕಲ್ಪಿಸಲಾಗಿದೆ.
ಹರಿಯಾಣದಲ್ಲಿ ಕಡಿಮೆ ಆಲ್ಕೋಹಾಲ್ ಇರುವಂಥ ಮದ್ಯ ಅಂದರೆ ಬಿಯರ್ ಮತ್ತು ವೈನ್ ಮುಂತಾದವುಗಳನ್ನು ಕಾರ್ಪೋರೇಟ್ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ಹಾಗೂ ಅತಿಥಿಗಳಿಗೆ ನೀಡಬಹುದಾಗಿದೆ. ಜೂ. 12ರ ಬಳಿಕ ಇಂಥ ಆತಿಥ್ಯಕ್ಕೆ ಅಲ್ಲಿ ಅವಕಾಶ ಲಭಿಸಲಿದೆ.
ಇದನ್ನೂ ಓದಿ: ಸೊಳ್ಳೆ ಕಡಿತದಿಂದ ಪುತ್ರನ ಸಾವು, ವಿಮೆ ಹಣಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ತಾಯಿ: ಆಮೇಲೇನಾಯ್ತು?
ಇಲ್ಲಿನ ನೂತನ ಅಬಕಾರಿ ನೀತಿ ಅನುಸಾರ, ಕನಿಷ್ಠ 5 ಸಾವಿರ ಉದ್ಯೋಗಿಗಳು ಹಾಗೂ ಒಂದೇ ಕ್ಯಾಂಪಸ್ನಲ್ಲಿ ಕನಿಷ್ಠ 1 ಲಕ್ಷ ಚದರಡಿ ಸ್ಥಳ ಇರುವಂಥ ಕಾರ್ಪೋರೇಟ್ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ಮತ್ತು ಅತಿಥಿಗಳಿಗೆ ಮದ್ಯ ನೀಡಬಹುದಾಗಿದೆ. ಅಲ್ಲದೆ ಇಂಥ ಕಾರ್ಪೋರೇಟ್ ಕಚೇರಿಗಳಲ್ಲಿ ಕ್ಯಾಂಟೀನ್ ಕನಿಷ್ಠ 2 ಸಾವಿರ ಚದರಡಿ ವಿಸ್ತೀರ್ಣ ಹೊಂದಿರಬೇಕು. ಇಲ್ಲಿ ಮದ್ಯವನ್ನು ನೀಡಲು ಬಾರ್ ಲೈಸೆನ್ಸ್ (ಎಲ್-10ಎಫ್) ನೀಡಲಾಗುವುದು ಎಂದು ನೂತನ ಅಬಕಾರಿ ನೀತಿಯಲ್ಲಿ ತಿಳಿಸಲಾಗಿದೆ.
ಹನ್ನೊಂದರ ಈ ಹುಡುಗಿ ಐನ್ಸ್ಟೀನ್-ಸ್ಟೀಫನ್ ಹಾಕಿಂಗ್ಗಿಂತಲೂ ಬುದ್ಧಿವಂತೆ!
ಈ ಮಗುವಿಗೆ ಮೂವರು ಪೇರೆಂಟ್ಸ್; ಇಲ್ಲಿ ಜನಿಸುತ್ತಿವೆ ‘ಡಿಸೈನರ್ ಬೇಬಿಸ್’!