More

    ಸೊಳ್ಳೆ ಕಡಿತದಿಂದ ಪುತ್ರನ ಸಾವು, ವಿಮೆ ಹಣಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ತಾಯಿ: ಆಮೇಲೇನಾಯ್ತು?

    ನವದೆಹಲಿ: ಸೊಳ್ಳೆ ಕಡಿತದಿಂದ ಸಾವಿಗೀಡಾದ ಪುತ್ರನ ತಾಯಿ ವಿಮೆ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಪ್ರಕರಣವೊಂದು ನಡೆದಿದೆ. ಭಾರತೀಯ ಸೇನೆಯಲ್ಲಿದ್ದ ಛಾಯನ್ ಮುಖರ್ಜಿ ಎಂಬವರು ಸಾವಿಗೀಡಾಗಿದ್ದು, ಈ ಸಂಬಂಧ ವಿಮೆ ನೀಡಲಾಗದು ಎಂದ ಕಂಪನಿ ವಿರುದ್ಧ ಸೈನಿಕರ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಕೋಲ್ಕತದ ಕಮಾಂಡ್ ಆಸ್ಪತ್ರೆಯಲ್ಲಿ 2021ರ ಡಿ.20ರಂದು ಸೈನಿಕ ಛಾಯನ್ ಮುಖರ್ಜಿ ಸಾವಿಗೀಡಾಗಿದ್ದರು. ಅಪಘಾತದಿಂದ ಸಂಭವಿಸಿದ್ದ ಮೊಣಕಾಲಿನ ಗಾಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಬಳಿಕ ಉಂಟಾದ ಸಮಸ್ಯೆ ಹಾಗೂ ಅಂತಿಮ ಹಂತದ ಮೂತ್ರಪಿಂಡದ ಸಮಸ್ಯೆಯಿಂದಾಗಿ ಛಾಯನ್ 2021ರ ನ. 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಡಿ. 12ರಂದು ವಿಪರೀತ ಜ್ವರ ಬಂದಿದ್ದು, ಪರೀಕ್ಷೆಗೆ ಒಳಪಡಿಸಿದಾಗ ಡೆಂಘೀ ಸೋಂಕಿಗೆ ಒಳಗಾಗಿರುವುದು ಕಂಡುಬಂದಿತ್ತು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಮಗನ ಸಾವಿನ ಬಳಿಕ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯವರಲ್ಲಿ ವಿಮೆ ಹಣಕ್ಕಾಗಿ ತಾಯಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಸಾವು ಅಪಘಾತದ ಸಾವಿನಡಿ ಬರುವುದಿಲ್ಲ ಎಂದು ಹೇಳಿ ಕಂಪನಿಯವರು ವಿಮೆ ಕ್ಲೇಮನ್ನು ನಿರಾಕರಿಸಿ 2022ರ ಸೆ. 9ರಂದು ಪತ್ರ ಬರೆದಿದ್ದರು. ಕಂಪನಿಯ ಈ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ತಾಯಿ, ವಿಮೆ ಸಂಬಂಧ ಕಲ್ಕತ್ತ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಮೌಸಮಿ ಭಟ್ಟಾಚಾರ್ಯ ನೇತೃತ್ವದ ಏಕಸದಸ್ಯ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಿತ್ತು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇದು ಸೈನಿಕರಿಗೆಂದೇ ರೂಪಿಸಿದ ವಿಶೇಷ ಯೋಜನೆಯಡಿ ಬರಲಿರುವುದರಿಂದ ಸಾಮಾನ್ಯ ನಾಗರಿಕರ ವಿಮೆಯಂತೆ ಪರಿಗಣಿಸಬಾರದು ಎಂದು ಸೈನಿಕರ ತಾಯಿಯ ವಕೀಲರು ವಾದ ಮಂಡಿಸಿದ್ದರು. ಅಲ್ಲದೆ ಸಾವಿಗೆ ಪ್ರಾಥಮಿಕ ಕಾರಣ ಪೂರ್ಣವಾಗಿ ಅಪಘಾತಕ್ಕೆ ಸಂಬಂಧಿಸಿದ್ದೇ ಆಗಿರುವುದರಿಂದ ಮತ್ತು ಈ ಚಿಕಿತ್ಸೆ ವೇಳೆ ಸೊಳ್ಳೆ ಕಚ್ಚಿ ಡೆಂಘೀ ಬಂದಿರುವುದು ಅನಿರೀಕ್ಷಿತ ಎಂದು ವಾದಿಸಿದ್ದರು.

    ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

    ಸಾವು ಅಥವಾ ಅಂಗವೈಕಲ್ಯ ನೇರವಾಗಿ ಹಾಗೂ ಬಹಿರಂಗವಾಗಿ ಕಾಣಿಸುವಂಥ ಗಂಭೀರ ಕಾರಣಗಳಿಂದ ಸಂಬಂಧಿಸಿದ್ದರೆ ಮಾತ್ರ ಅದನ್ನು ಆ್ಯಕ್ಸಿಡೆಂಟ್ ಸಾವು ಎಂದು ವಿಮೆಗೆ ಪರಿಗಣಿಸಲಾಗುವುದು. ಆದರೆ ಇಲ್ಲಿ ಸಾವು ಸಂಭವಿಸಿದ್ದು ಸೊಳ್ಳೆ ಕಚ್ಚಿ ಡೆಂಘೀ ಬಂದಿದ್ದರಿಂದ ಎಂದು ಕಂಪನಿಯ ವಕೀಲರು ವಾದ ಮಂಡಿಸಿದ್ದರು. ಅಲ್ಲದೆ ವೈದ್ಯಕೀಯ ಪ್ರಮಾಣಪತ್ರದಲ್ಲೂ ಡೆಂಘೀಯಿಂದ ಸಾವು ಸಂಭವಿಸಿತ್ತು ಎಂಬುದು ದಾಖಲಾಗಿದೆ ಎಂದು ಕಂಪನಿ ವಾದಿಸಿತ್ತು.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಹಾವು ಕಡಿತ, ಹೈ ಅಲ್ಟಿಟ್ಯೂಡ್ ಇಲ್​ನೆಸ್​, ಹೈ ಅಲ್ಟಿಟ್ಯೂಡ್ ಪಲ್ಮನರಿ ಎಡಿಮಾ ಮುಂತಾದವರು ಈ ಅಪಘಾತ ವಿಮೆಯಲ್ಲಿ ಬರುತ್ತದೆಯಾದರೂ ಇತರ ಕೀಟಗಳ ಕಡಿತದಿಂದ ಉಂಟಾಗುವ ಸಾವು ಈ ವರ್ಗದಡಿ ಬರುವುದಿಲ್ಲ ಎಂದು ಕಂಪನಿ ತನ್ನ ಷರತ್ತುಗಳ ಕುರಿತು ನ್ಯಾಯಾಲಯದ ಗಮನ ಸೆಳೆದಿತ್ತು. ಅಂತಿಮವಾಗಿ ಎಲ್ಲ ವಾದ-ವಿವಾದಗಳನ್ನು ಆಲಿಸಿದ ಪೀಠವು ಈ ಪ್ರಕರಣದಲ್ಲಿ ಸೊಳ್ಳೆ ಕಡಿತದಿಂದ ಉಂಟಾದ ಸಾವನ್ನು ಅಪಘಾತದ ಸಾವು ಎಂದು ಪರಿಗಣಿಸಲಾಗದು ಎಂದು ಹೇಳಿ ಪ್ರಕರಣ ಇತ್ಯರ್ಥಗೊಳಿಸಿದೆ.

    ಈ ಮಗುವಿಗೆ ಮೂವರು ಪೇರೆಂಟ್ಸ್; ಇಲ್ಲಿ ಜನಿಸುತ್ತಿವೆ ‘ಡಿಸೈನರ್ ಬೇಬಿಸ್’!

    ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts