More

  ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

  ಹಾವೇರಿ: ಸ್ಮಶಾನದಲ್ಲಿ ಸುಂದರ ಹುಡುಗಿಯರ ಫೋಟೋ ಜತೆಗೆ ತಲೆಬುರುಡೆ ಇರಿಸಿ ಮಾಟ-ಮಾತ್ರ ಮಾಡಿರುವ ಪ್ರಕರಣವೊಂದು ಕಂಡುಬಂದಿದೆ. ಮಾತ್ರವಲ್ಲ, ಮಹಿಳೆ ಸೇರಿ ನಾಲ್ವರ ತಂಡ ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚರ ನಡೆಸುತ್ತಿರುವುದು ಕೂಡ ಬೆಳಕಿಗೆ ಬಂದಿದೆ.

  ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚೋಗಚಿಕೊಪ್ಪ ತಾಂಡಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸ್ಮಶಾನದಲ್ಲಿ ಮೂವರು ಸುಂದರ ಹುಡುಗಿಯರ ಫೋಟೋಗಳನ್ನು ಇಟ್ಟು, ಅದರ ಜೊತೆಗೆ ಮನುಷ್ಯರ ತಲೆಬುರುಡೆ ಇರಿಸಿ, ಅದರ ಮೇಲೆ ಮನೆಮುಂದೆ ಇರುವ ವ್ಯಕ್ತಿಯ ಹೆಸರು ಬರೆದು, ನಿನ್ನೆ ಮಧ್ಯರಾತ್ರಿ ಸುಮಾರಿಗೆ ಬೆತ್ತಲೆಯಾಗಿ ಸ್ಮಶಾನದಲ್ಲಿ ಮಾಟಮಂತ್ರ ಮಾಡುತ್ತಿದ್ದುದು ಸ್ಥಳೀಯರ ಗಮನಕ್ಕೆ ಬಂದಿದೆ.

  ಇದನ್ನೂ ಓದಿ: ಸಹೋದರನ ಬಳಿಕ ಸಹೋದರಿಯೂ ನಂದಿನಿ ಪರ ಬ್ಯಾಟಿಂಗ್; ನಂದಿನಿ ನಮ್ಮದು ಎಂದ ಪ್ರಿಯಾಂಕ

  ಸ್ಮಶಾನದಲ್ಲಿ ಹುಡುಗಿಯ ಫೋಟೋ ಸುತ್ತಲೂ ನೂರಕ್ಕೂ ಹೆಚ್ಚು ನಿಂಬೆಹಣ್ಣುಗಳನ್ನು ಇಡಲಾಗಿದ್ದು, ಮನುಷ್ಯನ ತಲೆಬುರುಡೆಗೆ ಕೋಳಿಯ ರಕ್ತದಲ್ಲಿ ಪೂಜೆ ಮಾಡಿದ್ದಾರೆ. ನಿಂಬೆ ಹಣ್ಣಿನ ಮೇಲೆ 19 ಲವಂಗವನ್ನು ಚುಚ್ಚಿದ್ದು ಸ್ಮಶಾನದ ಸುತ್ತಲೂ ಇಟ್ಟಿದ್ದಾರೆ. ಅಮಾವಾಸ್ಯೆ ರಾತ್ರಿಯಿಂದ ಈ ವಾಮಾಚಾರ ನಡೆಯುತ್ತಿದೆ. ಮೊದಲ ದಿನವೇ ಕೇಳಿದಾಗ ಮೀನು ಹಿಡಿಯಲು ಬಂದಿದ್ದೇವೆ ಎಂದು ಹೇಳಿದ್ದರು. ನಿನ್ನೆ ರಾತ್ರಿ ಪೂಜೆ ನಡೆಯುತ್ತಿರುವುದು ಕಂಡು ಸ್ಥಳಕ್ಕೆ ಹೋದಾಗ ವಿಚಿತ್ರ ವಸ್ತುಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು. ಈ ವೇಳೆ ಮೂವರು ಓಡಿ ಹೋಗಿದ್ದು ಒಬ್ಬ ಬಂದು ಕೋಳಿರಕ್ತದಲ್ಲಿ ಪೂಜೆ ಮಾಡಿದ್ದಾನೆ. ಆತ ಮಾತ್ರ ಸಿಕ್ಕಿದ್ದು, ಈ ಬಗ್ಗೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
  ಸ್ಮಶಾನದಲ್ಲಿನ ದೃಶ್ಯ

  ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

  ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ: ಕಾಂಗ್ರೆಸ್ ಸಮಾವೇಶದಲ್ಲಿ ಜಗದೀಶ ಶೆಟ್ಟರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts