ಚಾಮರಾಜನಗರ: ರಾಜಕೀಯ ಅಸ್ತ್ರವಾಗಿ ಹೊರಹೊಮ್ಮಿದ್ದ ನಂದಿನಿ ಹಾಲಿನ ವಿಚಾರ ಇತರ ಕೆಲವು ವಿಚಾರಗಳ ಮಧ್ಯಪ್ರವೇಶದಿಂದ ಕಳೆದ ಕೆಲವು ದಿನಗಳಿಂದ ಹಿನ್ನೆಲೆಗೆ ಸರಿದಿತ್ತು. ಆದರೆ ಇದೀಗ ನಂದಿನಿ ಪರ ಪ್ರಿಯಾಂಕ ಗಾಂಧಿ ಬ್ಯಾಟಿಂಗ್ ಮಾಡಿದ್ದು, ಅದು ಮತ್ತೆ ಮುನ್ನೆಲೆಗೆ ಬಂದಿದೆ.
ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ನಂದಿನಿ ನಮ್ಮ ಹೆಮ್ಮೆ ಎಂದು ನಂದಿನಿ ಪಾರ್ಲರ್ ಒಂದರ ಮುಂದೆ ತಮ್ಮೊಂದಿಗೆ ಕಾಂಗ್ರೆಸ್ ನಾಯಕರು ನಿಂತಿದ್ದ ಫೋಟೋ ಟ್ವೀಟ್ ಮಾಡಿದ್ದರು. ಈಗ ಅವರ ಸಹೋದರಿ ಕೂಡ ನಂದಿನಿ ನಮ್ಮ ಹೆಮ್ಮೆ ಎನ್ನುವ ಮೂಲಕ ಅದನ್ನು ರಾಜಕೀಯ ಅಸ್ತ್ರವಾಗಿ ಮತ್ತೆ ಚಾಲ್ತಿಯಲ್ಲಿ ಇರಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಮಗಳ ಮೃತದೇಹದ ಜತೆಗೆ ಐದು ದಿನಗಳನ್ನು ಕಳೆದ ತಾಯಿ!
ಕರ್ನಾಟಕದ ನಂದಿನಿ ನಮ್ಮದು, ಆದರೆ ಬಿಜೆಪಿಯವರು ಗುಜರಾತ್ನ ಅಮುಲ್ ಹಾಲು ತರಲು ಹೊರಟಿದ್ದಾರೆ. ಯಾಕೆ ಎಂದು ಕೇಳಿದರೆ ಕರ್ನಾಟಕದಲ್ಲಿ ಹಾಲು ಕಡಿಮೆಯಾಗಿದೆ ಎನ್ನುತ್ತಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಹಾಲು ಹೆಚ್ಚಾಗಿ ಸರ್ಕಾರಿ ಶಾಲಾ ಮಕ್ಕಳಿಗೂ ಬಿಸಿಹಾಲು ಕೊಟ್ಟಿದ್ದೆವು. ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಟ್ಟಿದ್ದೆವು. ಆದರೆ ಈಗ ಗುಜರಾತಿ ಅಮುಲ್ ಹಾಲು ತಂದು ನಂದಿನಿಯನ್ನು ಮುಗಿಸಲು ಹೊರಟಿದ್ದಾರೆ ಎಂದು ಪ್ರಿಯಾಂಕ ಆರೋಪಿಸಿದರು. ಅಲ್ಲದೆ ನಾವು ಅಧಿಕಾರಕ್ಕೆ ಬಂದರೆ ನಂದಿನಿ ಸಂಸ್ಥೆ ಇನ್ನು ಗಟ್ಟಿಯಾಗಿ ಮಾಡುತ್ತೇವೆ ಎಂದರು.
Karnataka’s Pride – NANDINI is the best! pic.twitter.com/Ndez8finup
— Rahul Gandhi (@RahulGandhi) April 16, 2023
ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್.ಡಿ.ದೇವೇಗೌಡ