ಹಾವೇರಿ: ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಿಲ್ಲ ಎಂದು ಬೇಸರಗೊಂಡು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ತಮಗೆ ಯಾವುದೇ ಅಧಿಕಾರದ ಆಸೆ ಇಲ್ಲ ಎಂದು ಹೇಳಿದ್ದಾರೆ. ಹಾವೇರಿಯ ಹಾನಗಲ್ನಲ್ಲಿ ಹಮ್ಮಿಕೊಳ್ಳಲಾಗಿರುವ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು.
ನಾನು ಈ ಸಮಾವೇಶಕ್ಕೆ ಬಂದಿದ್ದು ನಿಮಗೆ ಆಶ್ಚರ್ಯವಾಗಿರಬಹುದು. ನಮ್ಮ ಕುಟುಂಬ ಜನಸಂಘದಿಂದ ಹಿಡಿದು ಇಲ್ಲಿಯವರೆಗೂ ಬಿಜೆಪಿಯನ್ನು ಕಟ್ಟಿ ಬೆಳೆಸಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟುವಲ್ಲಿ ನನ್ನದೂ ಪಾತ್ರ ಇದೆ. ಆದರೆ ಇಂತಹ ಹಿರಿಯನನ್ನು ಪಕ್ಷದವರು ಹೇಗೆ ನಡೆಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ನೀವು ನೋಡಿದ್ದೀರಿ ಎಂದು ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಕೋವಿಡ್ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!
ಪಕ್ಷವನ್ನು ಕಟ್ಟಿ ಪ್ರತಿ ಚುನಾವಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲುವವನಿಗೆ ಪೋನ್ ಮಾಡಿ ಟಿಕೆಟ್ ಇಲ್ಲ ಎಂದು ಹೇಳುತ್ತಾರೆಂದರೆ ಹೇಗೆ? ಪೋನ್ ಮಾಡಿ, ‘ಜಗದೀಶ ಶೆಟ್ಟರ್ ಅವ್ರೇ, ನೀವು ನಿವೃತ್ತಿ ಘೋಷಣೆ ಮಾಡಿ’ ಎಂದು ಹೇಳುತ್ತಾರೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಇದೆಯಾ, ಸಿಡಿ ಏನಾದರೂ ಇದೆಯಾ? ಯಾರೇ ಕರೆ ಮಾಡಿದ್ದರೂ ಟಿಕೆಟ್ ನೀಡದ್ದಕ್ಕೆ ಕಾರಣ ಕೊಡಿ ಎಂದಷ್ಟೇ ಕೇಳಿದ್ದು. ಆಗ ಸ್ವಾಭಿಮಾನಕ್ಕೆ ಧಕ್ಕೆ ಬಂತು. ದೆಹಲಿಗೆ ಹೋಗಿದ್ದಾಗ ನಿಮಗೆ ಟಿಕೆಟ್ ಕೊಡಲ್ಲ, ನಿಮ್ಮ ಸೊಸೆಗೆ ಕೊಡುತ್ತೇವೆ ಎಂದರು ಅಂತ ಶೆಟ್ಟರ್ ಹೇಳಿದರು.
ಇದನ್ನೂ ಓದಿ: ದುಬೈನಲ್ಲಿ ಐಐಎಂಎಫ್ ಲೋಗೋ ಅನಾವರಣ; ನಿರ್ದೇಶಕ ಪವನ್ ಒಡೆಯರ್ಗೆ ದುಬೈ ಕನ್ನಡಿಗರಿಂದ ಸನ್ಮಾನ
ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾಗಲೇ ನಾನು ಸಚಿವ ಸ್ಥಾನ ಬೇಡ ಎಂದಿದ್ದೆ. ನನಗೆ ಅಧಿಕಾರ ಬೇಕಾಗಿಲ್ಲ, ಗೌರವಯುತವಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಬೆಂಬಲಿಗರ ಜೊತೆ ಕಾಂಗ್ರೆಸ್ಗೆ ಸೇರ್ಪಡೆಯಾದೆ. ಇವರು ನನಗೆ ಗೌರವ ಕೊಡುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ನನ್ನ ಬೆಂಬಲಿಗರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಶೆಟ್ಟರ್ ತಿಳಿಸಿದರು.
ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್ಡಿಕೆ ಪ್ರಶ್ನೆ
ಯಡಿಯೂರಪ್ಪ ನಂತರದ ಹಿರಿಯರು ಶೆಟ್ಟರ್ ಎಂದು ಗೊತ್ತಾಗಿದೆ. ಇವರನ್ನು ಸೈಡ್ಲೈನ್ ಮಾಡಿದರೆ ನಾಲ್ಕು ಜನರ ಕೈಯಲ್ಲಿ ಇರಬಹುದು ಎಂದುಕೊಂಡಿದ್ದಾರೆ. ವ್ಯವಸ್ಥಿತವಾಗಿ ಷ್ಯಡ್ಯಂತ್ರ ಮಾಡಿದ್ದಾರೆ. ಆದರೆ ನಾನು ಕಾಂಗ್ರೆಸ್ನಲ್ಲಿ ಗಟ್ಟಿಯಾಗಿ ನಿಲ್ಲುತ್ತೇನೆ. ನಾನು ಹಾನಗಲ್ ಉಪ ಚುನಾವಣೆಗೂ ಬಂದಿದ್ದೆ. ಆಗ ಶ್ರೀನಿವಾಸ್ ಮಾನೆಯವರ ಸಂಘಟನೆ ಬಗ್ಗೆ ಗೊತ್ತಾಗಿತ್ತು. ಮತ್ತೊಮ್ಮೆ ಅವರನ್ನು ಗೆಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇಲ್ಲಿ ಉದಾಸಿಯವರನ್ನು ಯಾವ ರೀತಿ ನಡೆಸಿಕೊಂಡರು ಎಂದು ಗೊತ್ತಿದೆ. ಹಾವೇರಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಅವರಿಂದ. ಆದರೆ ಅವರನ್ನೇ ಹೀನಾಯವಾಗಿ ನಡೆಸಿಕೊಂಡರು, ಬಿಜೆಪಿ ವಿನಾಶದ ಕಡೆಗೆ ಹೋಗುತ್ತಿದೆ ಎಂದು ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್.ಡಿ.ದೇವೇಗೌಡ