ಮಧುಗಿರಿ: ‘ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಮಧುಗಿರಿಯ ಜನತೆ ಕಣ್ಣೀರು ಹಾಕುವಂತೆ ಮಾಡಿದಾಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ’
– ಹೀಗೆಂದು ಹೇಳುವ ಮೂಲಕ ಚುನಾವಣೆಯ ಪ್ರಚಾರ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾವನಾತ್ಮಕ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: ದೇವೇಗೌಡರ ಸಾವನ್ನು ಬಯಸಿದ್ದವರಿಗೆ ಪಾಠ ಕಲಿಸಬೇಕು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಮಧುಗಿರಿ ಕೈಮರದಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿ ಎಂ.ವಿ. ವೀರಭದ್ರಯ್ಯ ಪರ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ ಅವರು, ನನ್ನನ್ನು ಮುಖ್ಯಮಂತ್ರಿ ಮಾಡಲು ಯಾವ ತುಮಕೂರಿನಲ್ಲಿ 11 ಸೀಟ್ ಗೆಲ್ಲಿಸಿಕೊಟ್ಟಿರೋ ಅಲ್ಲೇ ಮತ್ತೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಿ ಎಂದು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ವಿದೇಶಿ ನೆಲದಲ್ಲಿ ಗೂಢಚಾರಿ ಕಾರ್ಯಾಚರಣೆ, ಇಬ್ಬರ ಬಂಧನ: ನ್ಯೂಯಾರ್ಕ್ನಲ್ಲಿದೆ ಚೀನಾದ ‘ರಹಸ್ಯ ಪೊಲೀಸ್ ಠಾಣೆ!
ಯಾವ ದೇವೇಗೌಡ ಪಾರ್ಲಿಮೆಂಟ್ನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರೋ ಆ ನಾಯಕರ ಕಣ್ಣಲ್ಲಿ ನೀರು ಬರಿಸಬೇಕು. ಆವತ್ತು ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಭಾವುಕರಾಗಿ ನುಡಿದ ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಅವರನ್ನು ಸೋಲಿಸಲು ಪರೋಕ್ಷವಾಗಿ ಕರೆಕೊಟ್ಟರು.
ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!