More

    1991ರ ಲೋಕಸಭಾ ಚುನಾವಣೆ; ದೇವೇಗೌಡರಿಗೆ ರಾಜಕೀಯ ಪುನರ್ ಜನ್ಮ

    ಬೆಂಗಳೂರು:
    1989ರಲ್ಲಿ ನಡೆದ ಜನತಾದಳದಿಂದ ದೂರ ನಡೆದ ಎಚ್.ಡಿ.ದೇವೇಗೌಡರು ಸಮಾಜವಾದಿ ಜನತಾ ಪಕ್ಷ (ಸಜಾಪ)ಸ್ಥಾಪಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಮತ್ತು ಕನಕಪುರದಲ್ಲಿ ಎರಡೂ ಕಡೆ ಸ್ಪರ್ಧೆ ಮಾಡಿದ್ದ ದೇವೇಗೌಡರು ಸೋತರು. ಅವರ ಪಕ್ಷವೂ ಸೋತಿತು. ಅಲ್ಲಿಗೆ ಅವರ ರಾಜಕೀಯ ಭವಿಷ್ಯವೇ ಮುಗಿದು ಹೋಯಿತು ಎಂದು ಚರ್ಚೆಗಳು ನಡೆದವು.
    1991 ದೇವೇಗೌಡರಿಗೆ ರಾಜಕೀಯ ಮರುಜನ್ಮ ಸಿಕ್ಕ ವರ್ಷ. ಆಗ ೋಷಣೆಯಾದ ಲೋಕಸಭೆ ಚುನಾವಣೆಗೆ ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಅಭ್ಯರ್ಥಿಯಾದರು. ಅವರ ಎದುರು ಕಾಂಗ್ರೆಸ್‌ನಿಂದ ಎಚ್.ಸಿ.ಶ್ರೀಕಂಠಯ್ಯ ಅವರು ಅಭ್ಯರ್ಥಿ. ತೀವ್ರ ಕುತೂಹಲ ಕೆರಳಿದಿದ ಹಾಸನ ಕ್ಷೇತ್ರದಲ್ಲಿ ದೇವೇಗೌಡರು ಕೇವಲ 3 ಮತಗಳ ಅಂತರದಿಂದ ಜಯಗಳಿಸಿದರು. ಇದು ಅವರಿಗೆ ರಾಜಕೀಯ ಮರುಜನ್ಮವಾಯಿತು. ಆಗ ರಾಜ್ಯದಲ್ಲಿ ಎಲ್ಲಿಯೂ ಜನತಾ ಪರಿವಾರದ ಅಭ್ಯರ್ಥಿಗಳು ಗೆದ್ದಿರಲಿಲ್ಲ ಎನ್ನುವುದು ವಿಶೇಷ.

    ದಳಕ್ಕೆ ಶೇ.28 ಮತ ಗಳಿಸಿದರೂ ಗೆದ್ದಿದ್ದು 1 ಸ್ಥಾನ
    1989 ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶೇ.48.8 ಮತ ಪಡೆಯುವ ಮೂಲಕ 27 ಸ್ಥಾನಗಳನ್ನು ಗೆದ್ದು ತನ್ನದೇ ಆದ ಪಾರಪತ್ಯ ಮೆರೆದಿತ್ತು. ಆಗ ಶೇ.28.3 ಮತ ಪಡೆದ ಜನತಾದಳ ಪಡೆದಿದ್ದು ಕೇವಲ 1 ಸ್ಥಾನ ಮಾತ್ರ.

    ಮೊದಲ ಯತ್ನದಲ್ಲಿ ಶೇ.29 ಮತ ಪಡೆದ ಬಿಜೆಪಿ
    1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.42.1 ಮತ ಗಳಿಸಿದ ಕಾಂಗ್ರೆಸ್ 23 ಸ್ಥಾನ ಗೆದ್ದರೆ, ಶೇ.29.3 ಮತ ಗಳಿಸಿದ ಬಿಜೆಪಿ 4 ಸ್ಥಾನ ಗೆದ್ದಿತ್ತು. ಶೇ.3.8 ಮತ ಪಡೆದ ಜನತಾ ಪಕ್ಷದಿಂದ ಒಬ್ಬರು ಮಾತ್ರ ಆಯ್ಕೆಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts