More

    ಕಾಂಗ್ರೆಸ್ ಆಮಿಷಗಳಿಗೆ ಬಲಿಯಾಗದಿರಿ

    ಹುಬ್ಬಳ್ಳಿ : ಲೋಕಸಭಾ ಚುನಾವಣಾ ವೇಳೆ ಮತದಾರರು ಚಿಕ್ಕ ಚಿಕ್ಕ ಆಮಿಷಗಳಿಗೆ ಬಲಿಯಾಗದಂತೆ ಹಾಗೂ ಬಿಟ್ಟಿ ಭಾಗ್ಯಗಳಿಗೆ ಮನಸೋಲದಂತೆ ಮತದಾರರ ಹತ್ತಿರ ರ್ಚಚಿಸಿ ಕಾರ್ಯಕರ್ತರು ತಿಳಿಹೇಳಬೇಕು. ನರೇಂದ್ರ ಮೋದಿ ಅವರು ನೀಡಿರುವ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜ್ಯೋತಿ ಪ್ರಲ್ಹಾದ ಜೋಶಿ ಹೇಳಿದರು.

    ಕಲಘಟಗಿ ತಾಲೂಕು ಕಾಡನಕೊಪ್ಪ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಮತ ಯಾಚಿಸಿದರು.

    ಕಾಂಗ್ರೆಸ್ ಒಂದು ವರ್ಷದಿಂದ ಮಹಿಳೆಯರಿಗೆ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳುತ್ತಿದ್ದು, ರಾಜ್ಯದ ಮಹಿಳೆಯರ ಜೀವಕ್ಕೆ ಗ್ಯಾರಂಟಿ ಇಲ್ಲದ ದುಸ್ಥಿತಿಗೆ ತಂದಿರುವುದು ಆಘಾತಕಾರಿ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಬಂದ ಪ್ರತಿ ಸಂದರ್ಭದಲ್ಲಿಯೂ ಜನರಲ್ಲಿ ಮತೀಯ ಭಾವನೆ ಕೆರಳಿಸಿ ಉದ್ರೇಕಗೊಳ್ಳುವಂತೆ ಮಾಡಿ, ಕೋಮು ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮತಗಳಿಕೆ ಮತ್ತು ಅಧಿಕಾರದ ಆಸೆಯ ಮೂಲ ಉದ್ದೇಶದಿಂದ ಹಿಂದು ಸಮಾಜವನ್ನು ಬಲಿಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು, ಬಹುಸಂಖ್ಯಾತರ ಭಾವನೆಯನ್ನು ಧಿಕ್ಕರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಣ, ಗ್ಯಾರಂಟಿ, ಜಾತಿ ಧರ್ಮವನ್ನು ಒಡೆದು ಆಳುವ ಸ್ವಾರ್ಥದ ರಾಜಕಾರಣ ಕಾಂಗ್ರೆಸ್ ಮಾಡುತ್ತಿದ್ದು, ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದರು.

    ಪ್ರಲ್ಹಾದ ಜೋಶಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸಿ, ಮತ್ತೊಮ್ಮೆ ಅವರನ್ನು ಆರಿಸಿ ತರುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಸಂಕಲ್ಪಿಸೋಣ ಎಂದು ಮನವಿ ಮಾಡಿದರು.

    ಜಿಪಂ ಮಾಜಿ ಸದಸ್ಯ ಐ. ಸಿ. ಗೋಕುಲ, ಜ್ಯೋತಿ ನಾಗರಾಜ ಛಬ್ಬಿ, ಮಂಜುಳಾ ನಾಯ್ಕ, ಮಾಲಾ ಗೋಕುಲ, ಭಾಗ್ಯಲಕ್ಷ್ಮೀ ಕಮ್ಮಾರ, ಕಮಲಾ ಜೋಶಿ, ಸುಧಾ ಶಿರಾಳಕರ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts