More

    ಪಂಚದ ಲಿಪಿಗಳ ರಾಣಿ ಕನ್ನಡ : ಮಲ್ಲೇಶಗೌಡ

    ಹಾಸನ: ಪ್ರಪಂಚದ ಲಿಪಿಗಳ ರಾಣಿಯಾಗಿರುವ ಕನ್ನಡ, ಶ್ರೇಷ್ಠ ಸಾಹಿತ್ಯದ ತತ್ವ ಹಾಗು ಮಧುರವಾದ ಭಾಷೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅವರು ತಿಳಿಸಿದರು.
    ನಗರದ ಡೈಮಂಡ್ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರೆದ ಹಾಗೆಯೇ ಉಚ್ಚರಿಸುವ ಹಾಗು ಉಚ್ಚರಿಸಿದ್ದೆಲ್ಲವನ್ನು ಬರೆಯ ಬಲ್ಲ ಕನ್ನಡ ಭಾಷೆ ತನ್ನದೆಯಾದ ವಿಶೇಷತೆ, ಸುದೀರ್ಘ ಇತಿಹಾಸನವನ್ನು ಹೊಂದಿದೆ. ಇದಕ್ಕೆ ಜಿಲ್ಲೆಯಲ್ಲಿ ದೊರೆತಿರುವ ಹಲ್ಮಿಡಿ ಶಾಸನವೇ ಸಾಕ್ಷಿ. ಹಲ್ಮಿಡಿಯ ಮೂಲ ಹೆಸರು ಪಲ್ಮಿಡಿ ಅದು ಹಿಂದೆ ಸೈನಿಕನೊಬ್ಬನಿಗೆ ನೀಡಿದ್ದ ದತ್ತಿ ಗ್ರಾಮ ಎಂದು ಹೇಳಿದರು.
    ಮೈಸೂರು ಅರಸರು ಇಡೀ ನಾಡಿಗೆ ಮಾದರಿ ಆಡಳಿತ ನೀಡುವ ಮೂಲಕ ಹಲವು ಕ್ರಾಂತಿಕಾರಕ ನಿರ್ಣಯಗಳನ್ನು ಕೈಗೊಂಡಿದ್ದಾರೆ. ವಿವಿಧ ಪ್ರಾಂತ್ಯಗಳ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡಿಗರಿಗೆ ಒಂದು ವೇದಿಕೆ ಸೃಷ್ಟಿಸುವ ಹಿನ್ನಲೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಆಲೋಚನೆ, ಮಿರ್ಜಾ ಇಸ್ಮಾಯಿಲ್ ಅವರ ಹೊಣೆಗಾರಿಕೆ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
    ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖಾ ವ್ಯವಸ್ಥಾಪಕ ದಯಾನಂದ್ ಮಾತನಾಡಿ, ಭಾಷೆ ಹೆಚ್ಚೆಚ್ಚು ಬಳಸಿದಾಗ ಉಳಿಯುತ್ತದೆ. ಆಂಗ್ಲ ಭಾಷೆಯ ವ್ಯಾಮೋಹ ಏನೇ ಇರಲಿ ಮಾತೃ ಭಾಷೆ ಮರೆಯುವುದು ಬೇಡ ಎಂದರು.
    ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತು ನಾಡು,ನುಡಿ ಧಕ್ಕೆಯಾಗುವ ಸಂದರ್ಭಗಳು ಎದುರಾದಾಗ ಹೋರಾಟ ನಡೆಸಿದೆಯಲ್ಲದೇ ಸಾಹಿತ್ಯ ಹಾಗೂ ಸಂಸ್ಕತಿಯ ಉಳಿವಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದರು.
    ಡೈಮಂಡ್ ಪಿಯು ಕಾಲೇಜಿನ ಕಾರ್ಯದರ್ಶಿ ಹೇಮಂತ್ ಕುಮಾರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಮುಖ್ಯವಾದರೂ ಅದರೊಟ್ಟಿಗೆ ನಮ್ಮ ಮಾತೃ ಭಾಷೆಯ ಮೇಲಿನ ಅಭಿಮಾನ ಕಡಿಮೆಯಾಗದಿರಲಿ ಎಂದರು.
    ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್, ಆರ್.ಬಿ ಶಂಕರ್, ಮಾರ್ಗದರ್ಶಿ ಸಮಿತಿ ಸದಸ್ಯ ಪ್ರಕಾಶ್ ಮೇಗಲಕೇರಿ,ಕಾಲೇಜಿನ ಪ್ರಾಂಶುಪಾಲ ಮಮತ ಹೇಮಂತ್ ಕುಮಾರ್ , ಉಪನ್ಯಾಸಕ ಲಕ್ಷ್ಮಣ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts