More

    ಸಂಸತ್ತಿನಿಂದ ಮೊದ್ಲು ನನ್ನ ಭಾಷಣ, ಬಳಿಕ ನನ್ನನ್ನೇ ತೆಗೆದ್ರು; ಸತ್ಯ ಲೋಕಸಭೆಯಲ್ಲಷ್ಟೇ ಅಲ್ಲ, ಎಲ್ಲಿಯೂ ಹೇಳಬಹುದು: ರಾಹುಲ್ ಗಾಂಧಿ

    ವಿಜಯಪುರ: ಸಂಸತ್ತಿನಿಂದ ಮೊದಲು ನನ್ನ ಭಾಷಣವನ್ನು ತೆಗೆದರು, ನಂತರ ನನ್ನನ್ನೇ ಸಂಸತ್ತಿನಿಂದ ತೆಗೆದು ಹಾಕಿದರು. ಆದರೆ ಸತ್ಯವನ್ನು ಲೋಕಸಭೆಯಲ್ಲಿ ಮಾತ್ರವಲ್ಲ, ಎಲ್ಲಿ ಬೇಕಿದ್ದರೂ ಹೇಳಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

    ವಿಜಯಪುರದಲ್ಲಿ ಇಂದು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಬಸವಣ್ಣನ ಐಕ್ಯಸ್ಥಳಕ್ಕೆ ಭೇಟಿ ನೀಡಿದೆ. ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ನಾವೆಲ್ಲರೂ ಬಸವಣ್ಣನ ಪ್ರಜಾಪ್ರಭುತ್ವದ ನೆನಪು ಮಾಡಬೇಕು ಎಂದು ಹೇಳಿದರು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಲೋಕಸಭೆ, ರಾಜ್ಯಸಭೆ, ಲೋಕತಂತ್ರದ ವ್ಯವಸ್ಥೆ ಬಸವಣ್ಣನವರ ಆಶಯದಂತೆ ಹುಟ್ಟುಹಾಕಲಾಗಿದೆ. ಅವರ ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ ಇರಬೇಕು ಎಂಬುದಾಗಿತ್ತು. ಶ್ರೀಮಂತರು, ಬಡವರು ಯಾವುದೇ ಧರ್ಮದ ಜನರು ಸಮಾನರಾಗಬೇಕು ಎಂಬ ಆಸೆ ಇತ್ತು. ಬಸವಣ್ಣನವರು ಸತ್ಯವನ್ನು ಎದುರಿಸಿ ನಡೆಯಿರಿ ಹೆದರಬೇಡಿ ಎಂದಿದ್ದರು ಎಂದು ರಾಹುಲ್ ತಿಳಿಸಿದರು.

    ಇದನ್ನೂ ಓದಿ: ವಿಷ್ಣುವರ್ಧನ್ ಗುಂಗು: ಸೆಟ್ಟೇರಿತು ಮತ್ತೊಂದು ಚಿತ್ರ ‘ಮಾರ್ಗರೇಟ್-ಲವರ್ ಆಫ್ ರಾಮಾಚಾರಿ’

    ಬಿಜೆಪಿ-ಆರ್​ಎಸ್​ಎಸ್​​ನವರು ದೇಶದ ಪರಸ್ಥಿತಿಯನ್ನು ಅಯೋಮಯ ಮಾಡಿದ್ದಾರೆ. ಬಿಜೆಪಿಯವರು ಪ್ರಧಾನಿಯವರು ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಆಶಯದ ವಿರುದ್ದ ನಡೆದುಕೊಳ್ಳುತ್ತಾರೆ. ದೊಡ್ಡ ದೊಡ್ಡವರಿಗೆ ಸಹಾಯ ಮಾಡಿ ಎಂದು ಬಸವಣ್ಣನವರು ಹೇಳಿಲ್ಲ. ಏರ್​ಪೋರ್ಟ್ ಎಲ್ಲವನ್ನೂ ಅದಾನಿಗೆ ಕೊಡುತ್ತೀರಿ, ಎಲ್​ಐಸಿಯ ಹಣವನ್ನೂ ಅದಾನಿಗೆ ಕೊಡುತ್ತೀರಿ, ಯಾಕೆ? ಅದಾನಿಗೆ ನಿಮಗೆ ಏನು ಸಂಬಂಧ ಎಂದು ನಾನು ಪ್ರಧಾನಿಯನ್ನು ಕೇಳಿದ್ದೆ. ಹೀಗಾಗಿ ಸಂಸತ್ತಿನಲ್ಲಿ ನಾನು ಮಾತನಾಡದಂತೆ ಮಾಡಿದರು. ಮೊದಲು ನನ್ನ ಭಾಷಣವನ್ನು ಸಂಸತ್ತಿನಿಂದ ತೆಗೆದು ಹಾಕಿದರು, ಕೊನೆಗೆ ನನ್ನನ್ನೇ ಅಲ್ಲಿಂದ ತೆಗೆದುಹಾಕಿದರು. ಆದರೆ ಸತ್ಯವನ್ನು ಕೇವಲ ಲೋಕಸಭೆಯಲ್ಲಿ ಮಾತ್ರವಲ್ಲ, ಎಲ್ಲಿಯೂ ಮಾತನಾಡಬಹುದು ಎಂದು ರಾಹುಲ್ ಗಾಂಧಿ ಹೇಳಿದರು.

    ಇದನ್ನೂ ಓದಿ: 1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!

    ಬಿಜೆಪಿ ಸರ್ಕಾರ ಭಾರತದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ. ಶೇ. 40 ಕಮಿಷನ್ ಪಡೆಯುತ್ತಾರೆ, ಯಾವುದೇ ಕೆಲಸಕ್ಕೂ ಕಮಿಷನ್ ಕೇಳುತ್ತಾರೆ. ಪೊಲೀಸ್ ಸಬ್ ಇನ್​​ಸ್ಪೆಕ್ಟರ್​ಗೆ 80 ಲಕ್ಷ ರೂ. ಪಡೆಯುತ್ತಾರೆ. ಹೀಗಾಗಿ ಕರ್ನಾಟಕದಲ್ಲಿ ಶೇ. 40 ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರೇ ಪ್ರಧಾನಿಗೆ ಪತ್ರ ಬರೆದರು. ಇದು ಕಳ್ಳರ ಹಾಗೂ 40% ಕಮಿಷನ್ ಸರ್ಕಾರ. ಕರ್ನಾಟಕ, ಮಧ್ಯಪ್ರದೇಶ ಸೇರಿ ಎಲ್ಲೆಡೆ ಶಾಸಕರ ಖರೀದಿ ಮಾಡಿದ್ದರೀರಿ, ಅದಕ್ಕೆ ಹಣ ಎಲ್ಲಿಂದ ಬಂತು? ಕಮಿಷನ್ ಹಣದಿಂದಲೇ ಇವೆಲ್ಲವನ್ನೂ ಮಾಡಲಾಗುತ್ತಿದೆ ಎಂದ ರಾಹುಲ್, ಈ ಸಲ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ 150 ಸೀಟ್ ಕೊಡಿ ಎಂದು ಜನರನ್ನು ಕೇಳಿಕೊಂಡರು.

    ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!

    ತಾಯಿ-ಮಗಳು ಇಬ್ಬರೂ ಒಟ್ಟಿಗೇ ಪಿಯುಸಿ ಪಾಸ್; 45ನೇ ವಯಸ್ಸಲ್ಲಿ ಮಹಿಳೆಯ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts