ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

blank

ರಾಜಸ್ಥಾನ: “ನಾವಿಬ್ಬರು-ನಮಗಿಬ್ಬರು” ಎಂಬ ಒಂದು ಕಾಲವಿತ್ತು. ಆಮೇಲೆ “ನಾವಿಬ್ಬರು ನಮಗೊಬ್ಬರೇ” ಎಂಬಂತೆಯೂ ಆಯಿತು. ಕುಟುಂಬ ಯೋಜನೆ ಹೆಸರಿನಲ್ಲಿ ಆದಷ್ಟೂ ಕಡಿಮೆ ಮಕ್ಕಳಿಗೆ ಜನ್ಮ ನೀಡಬೇಕು ಎಂಬ ಗುರಿ ಇತ್ತು. ಆದರೆ ಈಗ ಇದಕ್ಕೆ ವಿರುದ್ಧವಾದ ಬೆಳವಣಿಗೆ ನಡೆಯಲಾರಂಭಿಸಿದೆ. ಅದರಲ್ಲೂ ಭಾರತದಲ್ಲೇ ಇಂಥದ್ದೊಂದು ಬೆಳವಣಿಗೆ ಆರಂಭಗೊಂಡಿದೆ.

ಚೀನಾ ಹಾಗೂ ಜಪಾನ್​ನನಲ್ಲಿ ಜನಸಂಖ್ಯೆ ಕುಸಿತ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿ ಮಕ್ಕಳ ಸಂಖ್ಯೆಯನ್ನು ಅಂದರೆ ಜನ್ಮಪ್ರಮಾಣವನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಜನಸಂಖ್ಯೆ ಸಮಸ್ಯೆ ಎಂದು ಹೇಳಲಾಗುತ್ತಿರುವ ಭಾರತದಲ್ಲೂ ಕೆಲವೊಂದು ಕಡೆ ಜನ್ಮಪ್ರಮಾಣ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: ದೇವಸ್ಥಾನದ ರಥದ ಮುಕ್ತಿಬಾವುಟಕ್ಕೆ ಭಾರಿ ಬೇಡಿಕೆ; ಊಹೆಗೂ ಮೀರಿದ ಭರ್ಜರಿ ಮೊತ್ತಕ್ಕೆ ಹರಾಜು

ರಾಜಸ್ಥಾನದಲ್ಲಿ ಇಂಥದ್ದೊಂದು ಸಂಗತಿ ಬೆಳಕಿಗೆ ಬಂದಿದೆ. ಇಲ್ಲಿನ ಮಹೇಶ್ವರಿ ಸಮುದಾಯದ ಮಂದಿ ತಮ್ಮ ಜನಾಂಗದವರ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಜನ್ಮಪ್ರಮಾಣ ಹೆಚ್ಚಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಫಿಕ್ಸೆಡ್​ ಡೆಪಾಸಿಟ್​ ಕೊಡುಗೆ ಘೋಷಿಸಿದ್ದಾರೆ. ಅಂದರೆ ಮೂರನೇ ಮಗುವಿಗೆ ಜನ್ಮನೀಡುವ ಮಹೇಶ್ವರಿ ಸಮುದಾಯದ ದಂಪತಿಗೆ 50 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್ ಕೊಡುವುದಾಗಿ ಘೋಷಿಸಲಾಗಿದೆ. ರಾಜಸ್ಥಾನದ ಪುಷ್ಕರ್​ನಲ್ಲಿನ ಮಹೇಶ್ವರಿ ಸಮುದಾಯದ ಸೇವಾಸದನ ಈ ಕೊಡುಗೆಯನ್ನು ಘೋಷಣೆ ಮಾಡಿದೆ.

ಸಮುದಾಯದಲ್ಲಿ ಮದುವೆ ವಯಸ್ಸಿಗೆ ಬಂದಿರುವ ಹುಡುಗ-ಹುಡುಗಿಯರು ಇಲ್ಲದಿರುವುದು ಆತಂಕಕಾರಿ ಸಂಗತಿ. ಇದು ಮುಂದುವರಿದಲ್ಲಿ ಸಮುದಾಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಇರುವ ದಂಪತಿಗೆ ಮೂರನೇ ಮಕ್ಕಳನ್ನು ಹೊಂದುವಂತೆ ಪ್ರೇರೇಪಿಸುವುದು ಅನಿವಾರ್ಯ. ಹಾಗೆ ಮೂರನೇ ಮಗುವಿಗೆ ಜನ್ಮನೀಡಿದವರಿಗೆ 50 ಸಾವಿರ ರೂ. ಫಿಕ್ಸೆಡ್ ಡೆಪಾಸಿಟ್ ಕೊಡುವ ಬಗ್ಗೆ ಜನರಲ್ ಬಾಡಿ ಮೀಟಿಂಗ್​ನಲ್ಲಿ ನಿರ್ಧರಿಸಲಾಗಿದೆ. ಜತೆಗೆ ಭವಿಷ್ಯದಲ್ಲಿ ನಾಸಿಕ್​, ಜಗನ್ನಾಥಪುರಿ ಮತ್ತು ಅಯೋಧ್ಯೆಯಲ್ಲಿ ಸಮುದಾಯದವರಿಗಾಗಿ ಕಟ್ಟಡಗಳನ್ನು ನಿರ್ಮಿಸಲಿಕ್ಕೂ ಈ ಸಭೆಯಲ್ಲಿ ನಿರ್ಧರಿಸಲಾಗಿದೆ.

Share This Article

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…

ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…

ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್​ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits

Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…