More

  ಗರ್ಭಿಣಿ ಬಯಕೆ, ಬೆಕ್ಕಿನ ಮಾಂಸ ತಿಂದಿದ್ದಕ್ಕೆ ಮಗು ಹೀಗೆ ಹುಟ್ಟಿತೆಂದು ಕಣ್ಣೀರಿಟ್ಟ ತಾಯಿ! ಆದ್ರೆ ವೈದ್ಯರು ಹೇಳಿದ್ದೇ ಬೇರೆ

  ಮನಿಲಾ: ಪುಟ್ಟ ಮಗುವಿಗೆ ಮುಖ ಸೇರಿದಂತೆ ಮೈತುಂಬ ಕೂದಲು ಬೆಳೆದಿರುವುದು ತಾಯಿಯನ್ನು ಆತಂಕಕ್ಕೆ ದೂಡಿದೆ. ಸಾಮಾನ್ಯವಾಗಿ ದೇಹದ ಕೆಲವು ಭಾಗಗಳಲ್ಲಿ ಮಾತ್ರ ಕೂದಲು ಬೆಳೆಯುತ್ತದೆ. ವಯಸ್ಸಾದ ಬಳಿಕ ಪುರುಷರಲ್ಲಿ ಮುಖದ ಮೇಲೆಯೂ ಕೂದಲು ಬೆಳೆಯುತ್ತದೆ. ಆದರೆ, ಈ ಪುಟ್ಟ ಮಗುವಿಗೆ ದೇಹದ ಎಲ್ಲ ಕಡೆಯು ಕೂದಲು ಬೆಳೆದಿದೆ. ಅದರಲ್ಲೂ ಮುಖದಲ್ಲಿ ದಟ್ಟವಾಗಿ ಕೂದಲು ಬೆಳದಿದ್ದು, ನೋಡಲು ವಿಚಿತ್ರವಾಗಿ ಕಾಣುತ್ತಿದೆ. ತನ್ನ ಮಗನನ್ನು ಈ ಸ್ಥಿತಿಯಲ್ಲಿ ನೋಡಿದ ತಾಯಿ ತಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ಬೆಕ್ಕಿನ ಮಾಂಸವನ್ನು ತಿಂದಿದ್ದೆ ಇದಕ್ಕೆ ಕಾರಣವೆಂದು ನೊಂದುಕೊಂಡಿದ್ದಾರೆ. ಆದರೆ, ವಿಜ್ಞಾನ ಏನು ಹೇಳುತ್ತೆ ಎಂಬುದನ್ನು ನಾವೀಗ ನೋಡೋಣ.

  ಅಂದಹಾಗೆ ಈ ಘಟನೆ ನಡೆದಿರುವುದು ಫಿಲಿಪ್ಪೈನ್ಸ್​ ದೇಶದ ಅಪಯಾವೋ ನಗರದಲ್ಲಿ. ಈ ಮಗುವಿನ ಹೆಸರು ಜರೇನಾ ಗಮೊಂಗನ್​. ಮಗುವಿಗೆ ಈಗ ಎರಡು ವರ್ಷ. ತಾಯಿ ಅಲ್ಮಾ ಗಮೊಂಗನ್ ತನ್ನ ಮಗನ ಸ್ಥಿತಿಯನ್ನು ಕಂಡು ಕಣ್ಣೀರಿಡುತ್ತಿದ್ದಾಳೆ. ಅಷ್ಟಕ್ಕೂ ಮಗುವಿಗೆ ಇರುವ ಆರೋಗ್ಯ ಸಮಸ್ಯೆ ಏನು ಎಂದು ನೋಡುವುದಾರೆ, ಈ ಮಗು ಅತ್ಯಂತ ಅಪರೂಪದ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದೆ. ಇದನ್ನು “ವೆರ್ವುಲ್ಫ್ ಸಿಂಡ್ರೋಮ್” ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಕೋಟ್ಯಂತರ ಮಂದಿಯಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಆದರೆ, ತಾಯಿಯ ನಂಬಿಕೆಯಂತೆ ಬೆಕ್ಕಿನ ಮಾಂಸ ತಿನ್ನುವುದಿಂದ ಇದು ಸಂಭವಿಸುವುದಿಲ್ಲ.

  Rare condition 1

  ಜರೇನಾ ತಲೆಯಿಂದ ಮುಖದ ತುಂಬಾ ಕೂದಲು ಹರಡಿದೆ. ನೋಡಲು ತೋಳದ ರೂಪದಲ್ಲಿದೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಬಯಕೆಯಿಂದ ಬೆಕ್ಕಿನ ಮಾಂಸವನ್ನು ತಿಂದಿದ್ದರಿಂದ ಈ ರೀತಿ ಆಗಿದೆ ಎಂದು ತಾಯಿ ನಂಬಿದ್ದಾಳೆ. ತನ್ನ ಗರ್ಭಾವಸ್ಥೆಯಲ್ಲಿ ಅಲ್ಮಾ, ಸ್ಥಳೀಯ ಪರ್ವತ ಪ್ರದೇಶದಲ್ಲಿ ಕಂಡುಬರುವ ಕಾಡು ಬೆಕ್ಕಿನ ಮಾಂಸದ ಕಡುಬಯಕೆಯನ್ನು ಹೊಂದಿದ್ದಳು. ಸ್ಥಳೀಯವಾಗಿ ಈ ಖಾದ್ಯ ತುಂಬಾ ಫೇಮಸ್​. ಕೊನೆಗೆ ಸ್ನೇಹಿತರು ಆಕೆಗಾಗಿ ಕಾಡು ಬೆಕ್ಕನ್ನು ಹುಡುಕಿಕೊಟ್ಟ ಬಳಿಕ, ಅಡುಗೆ ಮಾಡಿ ತಿಂದು ತನ್ನ ಬಯಕೆಯನ್ನು ಅಲ್ಮಾ ತೀರಿಸಿಕೊಂಡಳು. ಆದರೆ, ಮಗು ಜನಿಸಿದ ಬಳಿಕ ಅದರ ಸ್ಥಿತಿಯನ್ನು ಕಂಡು ಅಲ್ಮಾ ಆಘಾತಕ್ಕೀಡಾದಳು. ಅಲ್ಲದೆ, ಮಗುವಿನ ಸ್ಥಿತಿಯನ್ನು ನೋಡಿದ ಊರಿನ ಮಂದಿ ಇದು ಕಾಡು ಬೆಕ್ಕು ತಿಂದಿದ್ದರ ಶಾಪ ಎಂದು ಜರಿದರು. ಅಲ್ಮಾ ಕೂಡ ಅದನ್ನೇ ನಂಬಿದ್ದಳು.

  ವೈದ್ಯರು ಹೇಳುವುದೇನು?
  ಆದರೆ, ವೈದ್ಯರ ಪ್ರಕಾರ ಪುಟ್ಟ ಮಗು ಹೈಪರ್ಟ್ರಿಕೋಸಿಸ್ ಎಂಬ ಅಪರೂಪದ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದೆ ಎಂದು ಹೇಳಿದ್ದಾರೆ. ಮಧ್ಯಯುಗದಿಂದ ಪ್ರಪಂಚದಾದ್ಯಂತ ಇಲ್ಲಿಯವರೆಗೆ ಕೇವಲ 50 ಪ್ರಕರಣಗಳು ಮಾತ್ರ ವರದಿಯಾಗಿವೆ. ಇದಕ್ಕೂ ಬೆಕ್ಕಿನ ಮಾಂಸಕ್ಕೂ ಸಂಬಂಧವಿಲ್ಲ ಎಂದು ಹೇಳಿ ವೈದ್ಯರು ಅಲ್ಮಾಗೆ ಧೈರ್ಯ ತುಂಬಿದ್ದಾರೆ.

  ಅಂದಹಾಗೆ ಅಲ್ಮಾಗೆ ಮೂವರು ಮಕ್ಕಳು. ಅದರಲ್ಲಿ ಜರೇನಾ ಮಧ್ಯದವನು. ಆತನ ಅಕ್ಕನಿಗಾಗಲಿ ಅಥವಾ ತಮ್ಮನಿಗಾಗಲಿ ಈ ಕಾಯಿಲೆ ಇಲ್ಲ. ಜರೇನಾ ಶಾಲೆಗೆ ಹೋಗುವ ಸಮಯ ಬಂದಾಗ ಏನು ಮಾಡುವುದು ಎಂಬುದರ ಬಗ್ಗೆ ನಾನು ತುಂಬಾ ಚಿಂತೆ ಮಾಡುತ್ತೇನೆ. ಅವನು ವಿಭಿನ್ನವಾಗಿರುವುದಕ್ಕಾಗಿ ಸಹಪಾಠಿಗಳಿಂದ ಹಿಂಸೆಗೆ ಒಳಗಾಗಬಹುದು ಎಂಬ ಆತಂಕವಿದೆ ಎಂದು ತಾಯಿ ಅಲ್ಮಾ ನೋವು ತೋಡಿಕೊಂಡಿದ್ದಾರೆ.

  Rare condition 2

  ಆಗಾಗ ಸ್ನಾನ ಮಾಡಿಸಬೇಕು
  ನನಗಿದ್ದ ಕಡುಬಯಕೆಗಳಿಂದ ಜರೇನಾ ಹುಟ್ಟಿದಾಗ ನನ್ನನ್ನು ನಾನೇ ದೂಷಿಸಿಕೊಂಡೆ. ನಾನು ತಪ್ಪಿತಸ್ಥಳೆಂದು ಭಾವಿಸಿದೆ. ಪಶ್ಚಾತಾಪ ಪಡುತ್ತಿದ್ದೆ. ಆದರೆ, ಇತ್ತೀಚೆಗೆ ವೈದ್ಯರು ಬಯಕೆಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು. ಜರೇನಾ ಎಲ್ಲರಂತೆಯೂ ಚಟುವಟಿಕೆಯಿಂದಿದ್ದಾನೆ. ಆದರೆ, ಬಿಸಿಲಿನ ಸಂದರ್ಭದಲ್ಲಿ ತುರಿಕೆಗಳು ಹೆಚ್ಚು. ಹೀಗಾಗಿ ಬಿಸಿಲಿನ ಸಂದರ್ಭದಲ್ಲಿ ಆಗಾಗ ಸ್ನಾನ ಮಾಡಿಸುತ್ತೇನೆ. ನಾವು ಕೂದಲನ್ನು ಕತ್ತರಿಸಲು ಸಹ ಪ್ರಯತ್ನಿಸಿದ್ದೇವೆ, ಆದರೆ ಕತ್ತರಿಸಿದಷ್ಟು ಮತ್ತೆ ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯುತ್ತದೆ, ಆದ್ದರಿಂದ ನಾವು ಕತ್ತರಿಸುವುದನ್ನು ನಿಲ್ಲಿಸಿದ್ದೇವೆ ಎಂದು ಅಲ್ಮಾ ಹೇಳಿದ್ದಾರೆ.

  ಜರೇನ್ ಅವರ ಸ್ಥಿತಿಯು ಅತಿ-ಅಪರೂಪದ ಹೈಪರ್ಟ್ರಿಕೋಸಿಸ್ ಎಂದು ಚರ್ಮರೋಗ ತಜ್ಞರು ದೃಢಪಡಿಸಿದ್ದಾರೆ. ಇದನ್ನು “ವೂಲ್ಫ್ ಸಿಂಡ್ರೋಮ್” ಎಂದೂ ಕರೆಯುತ್ತಾರೆ. ಪ್ರತಿ ಒಂದು ಶತಕೋಟಿ ಜನರಲ್ಲಿ ಒಬ್ಬರಿಗೆ ಮಾತ್ರ ಪರಿಣಾಮ ಬೀರುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಲೇಸರ್​ ಟ್ರೀಟ್ಮೆಂಟ್​ ಮೂಲಕ ಮುಖದ ಮೇಲಿನ ಕೂದಲನ್ನು ತೆಗೆಯಬಹುದು ಎಂದು ಹೇಳಲಾಗಿದೆ. (ಏಜೆನ್ಸೀಸ್​)

  ಬಾಲರಾಮನಿಗೆ 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ ಉಡುಗೊರೆ ಕೊಟ್ಟ ಮಾಜಿ ಐಎಎಸ್​ ಅಧಿಕಾರಿ!

  ನಿಮಗೆಲ್ಲ ಮಸಾಲಾ ಮುಗಿಯಿತು ಫ್ರೆಂಡ್ಸ್​! ಗಂಭೀರ್​ ಅಪ್ಪುಗೆ ಕುರಿತು ಕೊನೆಗೂ ಮೌನ ಮುರಿದ ಕೊಹ್ಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts