More

    ಬಾಲರಾಮನಿಗೆ 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ ಉಡುಗೊರೆ ಕೊಟ್ಟ ಮಾಜಿ ಐಎಎಸ್​ ಅಧಿಕಾರಿ!

    ಅಯೋಧ್ಯೆ: ಲಕ್ಷಾಂತರ ಹಿಂದುಗಳು ಹಲವು ವರ್ಷಗಳಿಂದ ಕಾಯುತ್ತಿದ್ದ ಅಯೋಧ್ಯೆಯ ಭವ್ಯವಾದ ರಾಮಮಂದಿರದ ಕನಸು ಈ ವರ್ಷ ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ವೈಭವದಿಂದ ತೆರೆಯಲಾಯಿತು ಮತ್ತು ಬಾಲರಾಮನ ವಿಗ್ರಹವನ್ನು ಸ್ಥಾಪಿಸಲಾಯಿತು. ದೇಗುಲ ಉದ್ಘಾಟನೆಯಾದ ಬಳಿಕ ಇದೇ ಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆ ನಡೆಯುತ್ತಿದೆ. ಹೀಗಾಗಿ ಬಾಲರಾಮನಿಗೆ ಅನೇಕ ಭಕ್ತರು ಅಪಾರ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಬಾಲರಾಮನಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

    ಮಧ್ಯಪ್ರದೇಶದ ಭಕ್ತರೊಬ್ಬರು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಏಳು ಕೆಜಿ ಚಿನ್ನವನ್ನೂ ಒಳಗೊಂಡಿರುವ 151 ಕೆಜಿಯ ರಾಮಾಯಣ ಪುಸ್ತಕವನ್ನು ಬಾಲರಾಮನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮಧ್ಯಪ್ರದೇಶದ ಮಾಜಿ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ಲಕ್ಷ್ಮೀನಾರಾಯಣ ಅವರು ಈ ರಾಮಾಯಣ ಪುಸ್ತಕವನ್ನು ಬಾಲರಾಮನಿಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಜೀವನದಲ್ಲಿ ಗಳಿಸಿದ ಮೊತ್ತವನ್ನು ಬಾಲರಾಮನಿಗೆ ಅರ್ಪಿಸುವುದಾಗಿ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಲಕ್ಷ್ಮೀನಾರಾಯಣ ಅವರು ಪ್ರತಿಜ್ಞೆ ಮಾಡಿದ್ದರು.

    ಈ ಪುಸ್ತಕವನ್ನು ತಯಾರಿಸುವಲ್ಲಿ ಅವರ ಲಕ್ಷ್ಮೀನಾರಾಯಣ ಅವರ ಪತ್ನಿ ಸರಸ್ವತಿ ಕೂಡ ಪ್ರಮುಖ ಪಾತ್ರವಹಿಸಿದರು. ಈ ಪುಸ್ತಕವನ್ನು 24-ಕ್ಯಾರೆಟ್ ಚಿನ್ನ, ಬೆಳ್ಳಿ ಮತ್ತು ತಾಮ್ರದಿಂದ ಮಾಡಲಾಗಿದೆ. ಗೋಸ್ವಾಮಿ ತುಳಸಿದಾಸ್ ಎಂಬುವನ್ನು ತಯಾರಿಸಿದ್ದು, 151 ಕೆಜಿ ತೂಕದ ಪುಸ್ತಕವನ್ನು ವಿವಿಧ ಬಂಡಲ್‌ಗಳಲ್ಲಿ ಪಾರ್ಸೆಲ್ ಮಾಡಲಾಗಿತ್ತು. ಬಳಿಕ ಅದನ್ನು ಜೋಡಿಸಿ ದೇವಸ್ಥಾನಕ್ಕೆ ಕೊಂಡೊಯ್ದು ಹಸ್ತಾಂತರಿಸಲಾಗಿದೆ. ಈ ಪುಸ್ತಕವನ್ನು ಅಯೋಧ್ಯೆಯ ಮುಖ್ಯ ದೇವಾಲಯದಲ್ಲಿ ಇರಿಸಲಾಗಿದೆ.

    ಚಿನ್ನದ ರಾಮಾಯಣ ಪುಸ್ತಕದ ಪ್ರತಿ ಪುಟವು 14 ರಿಂದ 12 ಇಂಚುಗಳಷ್ಟು ಗಾತ್ರದಲ್ಲಿದೆ. 10,902 ಪದ್ಯಗಳ ಈ ಮಹಾಕಾವ್ಯದ ಪ್ರತಿ ಪುಟವು 24 ಕ್ಯಾರೆಟ್ ಚಿನ್ನದಿಂದ ಲೇಪಿತವಾಗಿದೆ. 151 ಕೆಜಿ ತಾಮ್ರ ಮತ್ತು 7 ಕೆಜಿ ಚಿನ್ನದಿಂದ ರಾಮಾಯಣ ಪುಸ್ತಕವನ್ನು ಮಾಡಲಾಗಿದೆ. ಇದರೊಂದಿಗೆ ಮುಖ ಪುಟವು ಕೂಡ ಚಿನ್ನ ಲೇಪನದಿಂದಲೇ ಆಗಿದೆ.

    ಮತ್ತೊಂದೆಡೆ ಈ ವರ್ಷ ಆರಂಭವಾದ ಅಯೋಧ್ಯೆ ರಾಮಮಂದಿರಲ್ಲಿ ಮಂಗಳವಾರದಿಂದಲೇ ಶ್ರೀರಾಮ ನವಮಿ ಆಚರಣೆ ಆರಂಭವಾಗಿದೆ. ಅಂದರೆ ಯುಗಾದಿ ದಿನದಂದು ಕಲಶ ಪ್ರತಿಷ್ಠಾಪನೆಯೊಂದಿಗೆ 9 ದಿನಗಳ ಶ್ರೀರಾಮನವಮಿ ಆಚರಣೆ ಆರಂಭ ಮಾಡಲಾಗಿದೆ. ಬಾಲರಾಮನನ್ನು ಪೀತಾಂಬರ ಮತ್ತು ರೇಷ್ಮೆಗಳಿಂದ ಅಲಂಕರಿಸಲಾಗಿತ್ತು. (ಏಜೆನ್ಸೀಸ್​)

    13 ವರ್ಷದ ಹಿಂದೆ ಮೃತಪಟ್ಟ ಪುತ್ರನ ಹೆಸರಲ್ಲಿ ಬಂತು ಫೋನ್​ ಕರೆ! ವಂಚಕರ ಹೊಸ ರೀತಿಯ ವಂಚನೆ ಬಯಲು

    ನಿಮಗೆಲ್ಲ ಮಸಾಲಾ ಮುಗಿಯಿತು ಫ್ರೆಂಡ್ಸ್​! ಗಂಭೀರ್​ ಅಪ್ಪುಗೆ ಕುರಿತು ಕೊನೆಗೂ ಮೌನ ಮುರಿದ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts