More

    ಚಿನ್ನದ ಬೆಲೆ 2 ದಿನಗಳಲ್ಲಿ 10 ಗ್ರಾಂಗೆ 1736 ರೂ. ಕುಸಿತ: ಬಂಗಾರ ಬೆಲೆ ಇಳಿಯಲು ಕಾರಣಗಳೇನು?

    ಮುಂಬೈ: ಈಗ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವವರಿಗೆ ಒಳ್ಳೆಯ ಸುದ್ದಿ ಇದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1736 ರೂ. ಕಡಿಮೆಯಾಗಿದೆ. ಬೆಳ್ಳಿ ಕೂಡ ಕೆಜಿಗೆ 80000 ರೂ.ಗಿಂತ ಕಡಿಮೆಯಾಗಿದೆ. ಎರಡು ದಿನಗಳಲ್ಲಿ ಬೆಳ್ಳಿ ಬೆಲೆ 3440 ರೂಪಾಯಿ ಇಳಿಕೆಯಾಗಿದೆ.

    ಮಂಗಳವಾರ ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 1134 ರೂಪಾಯಿಗಳಷ್ಟು ಕಡಿಮೆಯಾಗಿ 71741 ರೂಪಾಯಿಗಳಲ್ಲಿ ಪ್ರಾರಂಭವಾಯಿತು. ಬೆಳ್ಳಿ ಕೂಡ ಪ್ರತಿ ಕೆಜಿಗೆ 1667 ರೂಪಾಯಿಗಳಷ್ಟು ಕುಸಿದು 79887 ರೂಪಾಯಿಗಳ ದರದಲ್ಲಿ ಪ್ರಾರಂಭವಾಯಿತು.

    IBJA (ಇಂಡಿಯನ್​ ಬುಲಿಯನ್​ ಜ್ಯುವೆಲ್ಲರ್ಸ್​ ಅಸೋಸಿಷೆಯನ್​)ಯ ಇತ್ತೀಚಿನ ದರದ ಪ್ರಕಾರ, ಮಂಗಳವಾರ, ಏಪ್ರಿಲ್ 23 ರಂದು, 23 ಕ್ಯಾರೆಟ್ ಚಿನ್ನವು ರೂ 1129 ರಷ್ಟು ಕಡಿಮೆಯಾಗಿ, 10 ಗ್ರಾಂಗೆ ರೂ 71454 ಕ್ಕೆ ಬಂದಿತು. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1039 ರೂಪಾಯಿ ಇಳಿಕೆಯಾಗಿ 65715 ರೂಪಾಯಿಗಳಿಗೆ ತಲುಪಿದೆ. 18 ಕ್ಯಾರೆಟ್ ಚಿನ್ನದ ದರ ಕೂಡ 850 ರೂಪಾಯಿ ಇಳಿಕೆಯಾಗಿ 53806 ರೂಪಾಯಿಗಳಿಗೆ ತಲುಪಿದೆ. 25 ಕ್ಯಾರೆಟ್​ ಚಿನ್ನದ ದರ 71740 ರೂಪಾಯಿ ತಲುಪಿದೆ.


    ಚಿನ್ನ, ಬೆಳ್ಳಿ ಬೆಲೆ ಕುಸಿಯಲು ಕಾರಣಗಳು ಹೀಗಿವೆ.
    1. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕಡಿಮೆಯಾಗುತ್ತಿವೆ. ಇರಾನ್​- ಇಸ್ರೇಲ್​ ಯುದ್ಧ ಭೀತಿ ಕಡಿಮೆಯಾಗಿದೆ.
    2. ಅಮೆರಿಕ ಬಡ್ಡಿದರ ಕಡಿತವು ಜೂನ್‌ನಲ್ಲಿ ಇತ್ಯರ್ಥವಾಗಬಹುದು.
    3. ಅಪಾಯದ ಪ್ರತಿಫಲ ಅನುಪಾತವು ಅನುಕೂಲಕರವಾಗಿಲ್ಲ.
    4. ಡಾಲರ್ ಸೂಚ್ಯಂಕ 106 ಕ್ಕಿಂತ ಹೆಚ್ಚಿದೆ.
    5. ಭೌತಿಕ ಬೇಡಿಕೆಗಳಲ್ಲಿ ತಡೆಗೋಡೆ.
    6. ಮಾರುಕಟ್ಟೆಯಲ್ಲಿ ಹಳೆಯ ಚಿನ್ನ ಅಥವಾ ಚಿನ್ನದ ಮರುಬಳಕೆ.
    7. ಗಣಿ ಉತ್ಪಾದನೆಯು ಹದಗೆಡುತ್ತಿದೆ.
    8. ತಾಂತ್ರಿಕ ಲಾಭ ಬುಕಿಂಗ್

    ರಿಲಯನ್ಸ್ ಇಂಡಸ್ಟ್ರೀಸ್​ಗೆ ಮಾರ್ಚ್​ ತ್ರೈಮಾಸಿಕದಲ್ಲಿ ರೂ 18,951 ಕೋಟಿ ಲಾಭ: ಪ್ರತಿ ಷೇರಿಗೆ 10 ರೂಪಾಯಿ ಡಿವಿಡೆಂಡ್​ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts