More

    ರೂ. 3ರಿಂದ 123ಕ್ಕೆ ಏರಿದ ಷೇರು ಬೆಲೆ: ಇವಿಗೆ ಸಾಲ ನೀಡುವ ಸ್ಟಾಕ್​ ಈಗ ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಸೋಮವಾರ ಮಾರುಕಟ್ಟೆಯಲ್ಲಿ ಕೋಲ್ಕತ್ತಾ ಮೂಲದ ಇವಿ (ಎಲೆಕ್ಟ್ರಿಕ್​ ವೆಹಿಕಲ್​) ಹಣಕಾಸು ಕಂಪನಿ ಮುಫಿನ್ ಗ್ರೀನ್ ಫೈನಾನ್ಸ್‌ನ ಷೇರುಗಳ ಖರೀದಿಗೆ ಹೂಡಿಕೆದಾರರಿಂದ ಹೆಚ್ಚಿನ ಆಸಕ್ತಿ ಕಂಡುಬಂದಿದೆ. ಸೋಮವಾರ ಈ ಷೇರುಗಳ ಬೆಲೆ ಶೇ. 5ರಷ್ಟು ಏರಿಕೆ ಕಾಣುವುದರೊಂದಿಗೆ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಯಿತು. ಈ ಮೂಲಕ ಪ್ರಸ್ತುತ ಷೇರುಗಳ ಬೆಲೆ ರೂ. 123.05 ತಲುಪಿತು.

    ಮುಫಿನ್ ಗ್ರೀನ್ ಫೈನಾನ್ಸ್ ಷೇರುಗಳ 52 ವಾರದ ಗರಿಷ್ಠ ಬೆಲೆ ರೂ. 273 ಆಗಿದ್ದರೆ, ಕನಿಷ್ಠ ಬೆಲೆ ರೂ. 35 ಆಗಿದೆ. ಕಳೆದ ಒಂದು ವರ್ಷದಲ್ಲಿ, ಮುಫಿನ್ ಗ್ರೀನ್ ಫೈನಾನ್ಸ್ ಷೇರುಗಳ ಬೆಲೆ 196 ಪ್ರತಿಶತದಷ್ಟು ಏರಿಕೆ ಕಂಡು ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡುವ ಮೂಲಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ.

    ಇತ್ತೀಚೆಗೆ, ಮುಫಿನ್ ಗ್ರೀನ್ ಫೈನಾನ್ಸ್‌ನ ಪ್ರವರ್ತಕ ಗುಂಪಿಗೆ 9.3 ಲಕ್ಷ ಈಕ್ವಿಟಿ ಷೇರುಗಳನ್ನು ಹಂಚಲಾಗಿದೆ. ಮಫಿನ್ ಗ್ರೀನ್ ಫೈನಾನ್ಸ್‌ನ ಷೇರುಗಳು ಹೂಡಿಕೆದಾರರಿಗೆ 3 ವರ್ಷಗಳ ಅವಧಿಯಲ್ಲಿ ಪ್ರತಿ ಷೇರಿನ ಬೆಲೆ 3.33 ರೂ.ನಿಂದ 123 ರೂ.ವರೆಗೆ ಶೇಕಡಾ 3600 ರಷ್ಟು ಬಂಪರ್ ರಿಟರ್ನ್ ನೀಡುವ ಮೂಲಕ ಶ್ರೀಮಂತರನ್ನಾಗಿ ಮಾಡಿವೆ. ಈ ಷೇರುಗಳಲ್ಲಿ 3 ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ, ಈಗ ಆ ಷೇರುಗಳ ಒಟ್ಟು ಮೊತ್ತವು 36 ಲಕ್ಷ ರೂಪಾಯಿ ಆಗುತ್ತದೆ.

    ಕಳೆದ ವರ್ಷ ಜುಲೈ 2 ರಂದು, ಮುಫಿನ್ ಗ್ರೀನ್ ಫೈನಾನ್ಸ್ ಹೂಡಿಕೆದಾರರಿಗೆ ಎರಡರಿಂದ ಒಂದರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿದೆ, ಅಲ್ಲದೆ, ಏಪ್ರಿಲ್ 13, 2023 ರಂದು ಮುಫಿನ್ ಗ್ರೀನ್ ಫೈನಾನ್ಸ್‌ನ ಷೇರುಗಳನ್ನು ವಿಭಜನೆ ಮಾಡಲಾಗಿದೆ.

    ಕಂಪನಿಯು ಎಲೆಕ್ಟ್ರಿಕ್ ವಾಹನ ವ್ಯವಹಾರದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಇದರ ಷೇರುಗಳು ಮುಂಬರುವ ದಿನಗಳಲ್ಲಿ ಅತ್ಯುತ್ತಮ ಆದಾಯವನ್ನು ನೀಡುವ ನಿರೀಕ್ಷೆಯಿದೆ ಎಂದು ಮಫಿನ್ ಗ್ರೀನ್ ಫೈನಾನ್ಸ್ ಷೇರುಗಳ ಕುರಿತಂತೆ ತಜ್ಞರು ಹೇಳುತ್ತಾರೆ.

    ನೀವು ಸಹ ಈ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಗಳಿಸಲು ಬಯಸಿದರೆ, ದುರ್ಬಲತೆಯ ಸಂದರ್ಭದಲ್ಲಿ, ಅಂದರೆ, ಷೇರುಗಳ ಬೆಲೆ ಕುಸಿತ ಕಂಡಾಗ, ನೀವು ಮಫಿನ್ ಗ್ರೀನ್ ಫೈನಾನ್ಸ್ ಲಿಮಿಟೆಡ್‌ನ ಷೇರುಗಳನ್ನು ಖರೀದಿಸಬಹುದು.

    ಮುಫಿನ್ ಗ್ರೀನ್ ಫೈನಾನ್ಸ್ ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಿಕ್ ಚಾರ್ಜಿಂಗ್ ಮೂಲಸೌಕರ್ಯ ಮತ್ತು ವಿನಿಮಯ ಮಾಡಿಕೊಳ್ಳಬಹುದಾದ ಬ್ಯಾಟರಿಗಳ ಮೂಲಕ ಆದಾಯ ಉತ್ಪಾದನೆಗೆ ಸಾಲವನ್ನು ಒದಗಿಸುವ ಮೂಲಕ ದೇಶದ EV ಪರಿಸರ ವ್ಯವಸ್ಥೆಗೆ ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಇದುವರೆಗೆ 350 ಕೋಟಿ ರೂ.ಗೂ ಹೆಚ್ಚು ಸಾಲವನ್ನು ವಿತರಿಸಿದೆ.

    ಒಂದು ವರ್ಷದ ಗರಿಷ್ಠ ಬೆಲೆಯಿಂದ 15% ಕುಸಿದ ವಿಪ್ರೋ ಷೇರು: ಇದು ಹೂಡಿಕೆಗೆ ಸೂಕ್ತ ಸಮಯವೇ?

    ರೂ. 17ರಿಂದ 1400ಕ್ಕೆ ಏರಿಕೆ; ಈಗ ಮತ್ತೆ 15 ದಿನದಲ್ಲಿ 83% ಹೆಚ್ಚಳ: ಹೂಡಿಕೆದಾರರನ್ನು ಶ್ರೀಮಂತಗೊಳಿಸಿದ 27 ವರ್ಷದ ಐಟಿ ಕಂಪನಿ ಷೇರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts