More

  ದೇವಸ್ಥಾನದ ರಥದ ಮುಕ್ತಿಬಾವುಟಕ್ಕೆ ಭಾರಿ ಬೇಡಿಕೆ; ಊಹೆಗೂ ಮೀರಿದ ಭರ್ಜರಿ ಮೊತ್ತಕ್ಕೆ ಹರಾಜು

  ಚಿತ್ರದುರ್ಗ: ದೇವರಿಗೆ ಕಾಣಿಕೆ-ಹರಕೆಯಾಗಿ ಬಂದ ವಸ್ತುಗಳನ್ನು ನಂತರ ಹರಾಜಿನ ಮೂಲಕ ಭಕ್ತರಿಗೆ ನೀಡುವುದು ಹಲವೆಡೆ ಇರುವ ಸಂಪ್ರದಾಯ. ಚಿತ್ರದುರ್ಗ ಜಿಲ್ಲೆಯಲ್ಲೂ ದೇವಸ್ಥಾನದ ರಥದ ಮುಕ್ತಿ ಬಾವುಟ ಭರ್ಜರಿ ಮೊತ್ತಕ್ಕೆ ಹರಾಜಾಗಿದೆ.

  ಜಿಲ್ಲೆಯ ಚಳ್ಳಕೆರೆಯ ನಾಯಕನಹಟ್ಟಿ ಪವಾಡಪುರುಷ ಶ್ರೀಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ರಥೋತ್ಸವದ ಬಳಿಕ ರಥದ ಮುಕ್ತಿ ಬಾವುಟವನ್ನು ಭರ್ಜರಿ ಮೊತ್ತಕ್ಕೆ ಹರಾಜು ಹಾಕಲಾಗಿದೆ. ಈ ಬಾವುಟವನ್ನು ಮಾಜಿ ಶಾಸಕ ಡಿ. ಸುಧಾಕರ್ 55 ಲಕ್ಷ ರೂಪಾಯಿ ನೀಡಿ ತಮ್ಮದಾಗಿಸಿಕೊಂಡಿದ್ದಾರೆ.

  ಇದನ್ನೂ ಓದಿ: ಹೊರರಾಜ್ಯಗಳಿಗೆ ನಂದಿನಿ ಹಾಲಿನ ಪೂರೈಕೆ ಸ್ಥಗಿತಗೊಳಿಸಿ; ಹೋಟೆಲ್​ ಮಾಲೀಕರಿಂದ ಕೆಎಂಎಫ್​ಗೆ ಪತ್ರ

  ಹರಾಜಿನ ಆರಂಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಯಪಾಲಯ್ಯ, ನವೀನ್​ ಕುಮಾರ್ ಎಂಬವರು ಭಾರಿ ಪೈಪೋಟಿ ನೀಡಿದರು. ಅದಾಗ್ಯೂ ಅವರೊಂದಿಗೆ ಮೇಲಾಟ ನಡೆಸಿದ ಮಾಜಿ ಶಾಸಕ ಸುಧಾಕರ್ ಕೊನೆಗೆ 55 ಲಕ್ಷ ರೂ. ಮೊತ್ತಕ್ಕೆ ಬಾವುಟ ತಮ್ಮದಾಗಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts