More

  ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!

  ನವದೆಹಲಿ: ಇಲ್ಲೊಬ್ಬ ವಯಾಗ್ರ ಮಾತ್ರೆ ತೆಗೆದುಕೊಂಡು ಸಂಗಾತಿಯೊಂದಿಗೆ ಕಾಲ ಕಳೆದರೂ ಕೊನೆಗೆ ಅವಳ ಮಾತನ್ನು ನಿರ್ಲಕ್ಷಿಸಿ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ. 41 ವರ್ಷದ ವ್ಯಕ್ತಿ 50 ಎಂಜಿಯ ಎರಡು ವಯಾಗ್ರ ಮಾತೆಗಳನ್ನು ಮದ್ಯದ ಜತೆಗೆ ಸೇವಿಸಿದ್ದ. ಆದರೆ ಅದಾದ ಒಂದು ದಿನದಲ್ಲೇ ಸಾವಿಗೀಡಾಗಿದ್ದಾನೆ.

  ಇಂಥದ್ದೊಂದು ವಿಚಿತ್ರ ಪ್ರಕರಣದ ಅಧ್ಯಯನ ವರದಿ ಫೊರೆನ್ಸಿಕ್​ ಆ್ಯಂಡ್ ಲೀಗಲ್ ಮೆಡಿಸಿನ್ ಜರ್ನಲ್​ನಲ್ಲಿ ಪ್ರಕಟಗೊಂಡಿದೆ. 41 ವರ್ಷದ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಹೋಟೆಲ್​ನಲ್ಲಿ ತಂಗಿದ್ದು, ಆ ಸಂದರ್ಭದಲ್ಲಿ ಮದ್ಯದೊಂದಿಗೆ ಎರಡು ವಯಾಗ್ರ ಮಾತ್ರೆಗಳನ್ನು ಸೇವಿಸಿದ್ದ.

  ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

  ಮಾರನೇ ದಿನ ಆತನಿಗೆ ಸ್ವಲ್ಪ ಅಸ್ವಸ್ಥತೆ ಉಂಟಾಗಿದ್ದು, ವಾಂತಿ ಕೂಡ ಆಗಿತ್ತು. ಆಗ ಕೂಡಲೇ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಜೊತೆಗಿದ್ದ ಮಹಿಳೆ ಸಲಹೆ ನೀಡಿದ್ದಳು. ಆದರೆ ಆತ ಈ ಹಿಂದೆಯೂ ಇಂಥ ಸಂದರ್ಭದಲ್ಲಿ ಇದೇ ರೀತಿಯಾಗಿತ್ತು ಎಂದು ಹೇಳಿ ಅವಳ ಸಲಹೆಯನ್ನು ನಿರ್ಲಕ್ಷಿಸಿದ್ದ. ಬಳಿಕ ಆತನ ದೈಹಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ಆಸ್ಪತ್ರೆಯವರು ದೃಢಪಡಿಸಿದ್ದರು.

  ಇದನ್ನೂ ಓದಿ: ಸಲಿಂಗಕಾಮಕ್ಕಾಗಿ ಚೆನ್ನೈನಿಂದ ಬೆಂಗ್ಳೂರಿಗೆ ಬಂದಿದ್ದವನು ಲಾಡ್ಜ್​ನಲ್ಲಿ ಶವವಾಗಿ ಪತ್ತೆ: ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು

  ಆತ ಸೆರೆಬ್ರೊವ್ಯಾಸ್ಕುಲಾರ್ ಹ್ಯಾಮರೇಜ್​ನಿಂದ ಅಂದರೆ ಮಿದುಳಿಗೆ ಆಮ್ಲಜನಕದ ಕೊರತೆಯಾಗಿ ಸಾವಿಗೀಡಾಗಿದ್ದ ಎಂಬುದು ಅಧ್ಯಯನದಲ್ಲಿ ಉಲ್ಲೇಖಗೊಂಡಿದೆ. ಅಲ್ಲದೆ ರಕ್ತ ಹೆಪ್ಪುಗಟ್ಟಿದ್ದು ಕೂಡ ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿತ್ತು. ವಯಾಗ್ರ ಹಾಗೂ ಮದ್ಯದ ಮಿಶ್ರಣ ಜೊತೆಗೆ ಮೊದಲೇ ಇದ್ದ ಅಧಿಕ ರಕ್ತದೊತ್ತಡದ ಸಮಸ್ಯೆಗಳಿಂದಾಗಿ ಆತ ಸಾವಿಗೀಡಾಗಿದ್ದ ಎಂಬುದನ್ನು ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಅಧ್ಯಯನದ ವರದಿಯನ್ನು ಜರ್ನಲ್​ನಲ್ಲಿ ಪ್ರಕಟಿಸಲಾಗಿದ್ದು, ಸೂಕ್ತ ವೈದ್ಯಕೀಯ ಸಲಹೆ ಪಡೆಯದೆ ಕಾಮೋತ್ತೇಜಕ ಔಷಧ ಸೇವಿಸಬಾರದು ಎಂದೂ ಹೇಳಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts