More

  ಸ್ಮಾರ್ಟ್​ ಟ್ರ್ಯಾಪ್​: ಪ್ರಶಾಂತ್ ಮಾಡಾಳ್​ಗೆ ದೂರುದಾರ ಬಲೆ ಹೆಣೆದಿದ್ದು ಹೇಗೆ?

  ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್​​ಡಿಎಲ್) ಟೆಂಡರ್​ಗೆ ಸಂಬಂಧಿಸಿದ ಲಂಚದ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದು ಸ್ಮಾರ್ಟ್ ಟ್ರ್ಯಾಪ್​ನಲ್ಲಿ. ಅರ್ಥಾತ್, ಅವರ ವಿರುದ್ಧ ದೂರುದಾರರು ತಮ್ಮ ಸ್ಮಾರ್ಟ್​​ವಾಚ್​ನಲ್ಲೇ ಬಲೆ ಹೆಣೆದಿದ್ದರು.

  ತಾವು ಯಾವ ರೀತಿ ದಾಖಲೆ ಸೃಷ್ಟಿಸಿಕೊಂಡಿದ್ದು ಎಂಬುದರ ಜತೆಗೆ ಅವುಗಳನ್ನು ಯಾವ ರೀತಿ ನೀಡಲಾಗಿದೆ ಎಂಬ ಕುರಿತು ದೂರುದಾರ ಶ್ರೇಯಸ್​ ಕಶ್ಯಪ್​ ಲೋಕಾಯುಕ್ತಕ್ಕೆ ತಿಳಿಸಿರುವ ಸಂಗತಿ ವಿವರವಾಗಿ ಎಫ್​ಐಆರ್​​ನಲ್ಲಿ ದಾಖಲಾಗಿದೆ. ದೂರುದಾರ ಶ್ರೇಯಸ್ ಕಶ್ಯಪ್ ಲೋಕಾಯುಕ್ತಕ್ಕೆ ದೂರು ನೀಡುವ ವೇಳೆ ತಮ್ಮ ಸ್ಮಾಟ್ ವಾಚ್‌ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಸಂಭಾಷಣೆಯ ಡಿವಿಡಿಯನ್ನು ನೀಡಿದ್ದಾರೆ.

  ಇದನ್ನೂ ಓದಿ: ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ!

  ಪ್ರಶಾಂತ್ ಮಾಡಾಳ್ ಲಂಚದ ಕುರಿತು ದೂರುದಾರ ಶ್ರೇಯಸ್ ಅವರೊಂದಿಗೆ ಮಾತನಾಡುವಾಗ ಅದನ್ನು ತಮ್ಮ ಬಳಿ ಇದ್ದ ಖಾಸಗಿ ಕಂಪನಿಯ ಸ್ಮಾರ್ಟ್​​​ವಾಚ್‌ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡಿದ್ದು, ಆ ವಿಡಿಯೋವನ್ನು ತಮ್ಮ ಲ್ಯಾಪ್‌ಟಾಪ್ ಸಹಾಯದಿಂದ ಒಂದು ಡಿವಿಡಿಗೆ ವರ್ಗಾಯಿಸಿ. ಆ ಡಿವಿಡಿ ಜತೆಗೆ ಅವರು ಬೇಡಿಕೆ ಇಟ್ಟಿದ್ದ ಲಂಚದ ಹಣದ ಸಂಬಂಧ 40 ಲಕ್ಷ ರೂ. ಶ್ರೀವಾರು ಎಕ್ಸ್‌ಕ್ಲೂಸಿವ್ಸ್ ಎಂಬ ಹೆಸರು ನಮೂದಿಸಿ ಬಿಳಿ ಬಣ್ಣದ ಹೂ ಚಿತ್ರವುಳ್ಳ ಬ್ಯಾಗ್‌ನಲ್ಲಿ ಹಾಕಿ, ನಂತರ ಅದನ್ನು ನೀಲಿ ಬಣ್ಣದ ಸ್ಟ್ರಾಬೆರಿ ಹಣ್ಣುಗಳ ಚಿತ್ರವಿರುವ ಬ್ಯಾಗ್​ನಲ್ಲಿ ಇರಿಸಿ ದೂರಿನೊಂದಿಗೆ ಲಗತ್ತಿಸಿದ್ದರು. ಅಲ್ಲದೆ ದೂರಿನಲ್ಲಿ ಉಲ್ಲೇಖಿಸಿರುವ ಕಂಪನಿಗಳಿಗೆ ಟೆಂಡರ್​ ಮಂಜೂರಾಗಿರುವ ಮತ್ತು ಖರೀದಿ ಆದೇಶ ಮಾಡಿರುವ ಕುರಿತು ಮಾಡಾಳ್ ಜತೆಗೆ ನಡೆಸಿದ್ದ ವಾಟ್ಸ್‌ಆ್ಯಪ್ ಚಾಟ್‌ಗಳ ದಾಖಲಾತಿಗಳನ್ನು ದೂರಿನೊಂದಿಗೆ ಲೋಕಾಯುಕ್ತಕ್ಕೆ ನೀಡಿದ್ದಾರೆ. ಜತೆಗೆ ದೂರನ್ನು ವಕೀಲರಿಂದ ಟೈಪ್ ಮಾಡಿಸಿ ತಂದು ನೀಡಿರುವುದು ಬೆಳಕಿಗೆ ಬಂದಿದೆ.

  ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?

  ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts