More

    ತಾಪಮಾನ ಹೆಚ್ಚಳ ಬಗ್ಗೆ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

    ಬೆಂಗಳೂರು: ರಾಜ್ಯದಲ್ಲಿ ಬಿಸಿಲು ಹೆಚ್ಚಳ ಬಗ್ಗೆ ಹಿಂದೆಯೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ಕೊಟ್ಟಿತ್ತು. 1960ರಿಂದ 1990ರವರೆಗೆ ಹಾಗೂ 1997ರಿಂದ 2017ರವರೆಗೆ ಹವಾಮಾನದಲ್ಲಿ ಏನಲ್ಲಾ ಬದಲಾವಣೆಗಳಾಗಿವೆ ಎಂಬುದರ ಬಗ್ಗೆ 2 ಭಾಗಗಳಾಗಿ ವಿಗಂಡಿಸಿ ಅಧ್ಯಯನ ನಡೆಸಿತ್ತು. ಮೊದಲ 30 ವರ್ಷಗಳಲ್ಲಿ ಹವಾಮಾನ ಹೇಗಿತ್ತು. ನಂತರ, 30 ವರ್ಷ ಹವಾಮಾನಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಅಧ್ಯಯನದಲ್ಲಿ ವಾಡಿಕೆಗಿಂತ ಬಿಸಿಲು, ಮಳೆ, ಚಳಿ, ಗರಿಷ್ಠ,ಕನಿಷ್ಠ ತಾಪಮಾನದ ಉಷ್ಣಾಂಶ ಹೆಚ್ಚಳವಾಗಿರುವುದು ತಿಳಿದುಬಂದಿತ್ತು.

    ಮುಂದಿನ ಕೆಲ ವರ್ಷದಲ್ಲಿ ವಾಡಿಕೆಗಿಂತ 2 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹವಾಮಾನದ ಮೇಲೆ ಮಾನವ ಚಟುವಟಿಕೆ ಪ್ರಭಾವ, ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಳವಾಗುತ್ತಿದೆ.ಈಗಿನ ಹವಾಮಾನ ಬದಲಾವಣೆ ಜಾಗತಿಕ ತಾಪಮಾನ ಏರಿಕೆ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದೆ. ಜಾಗತಿಕ ತಾಪಮಾನ ಹೈಡ್ರಾಲಿಕ್​ ಚಕ್ರಗಳಲ್ಲಿನ ಬದಲಾವಣೆಗಳು, ಐಸ್​ ಮತ್ತು ಹಿಮನದಿಗಳ ಕರಗುವಿಕೆ, ಸಮುದ್ರ ಮಟ್ಟ ಹೆಚ್ಚಳ, ಬರ, ಉಷ್ಣತೆ, ಬಿಸಿಗಾಳಿ, ಮಳೆಗಾಲ ಅವಧಿ ಸೇರಿ ಇತರೆ ಅಂಶ ಬದಲಾವಣೆಯಾಗುತ್ತಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಈ ವರದಿಯನ್ನು ಸರ್ಕಾರಗಳು ಕಡೆಗಣಿಸಿವೆ.

    ರಾಜ್ಯದಲ್ಲಿ 500 ಹೀಟ್​ವೇವ್​ ಕೇಸ್​: ಇಬ್ಬರು ಮೃತ

    ಕೋಟ್​:
    ಬರಗಾಲದಿಂದ ಮಣ್ಣಿನಲ್ಲಿ ತೇವಾಂಶ ಕೊರತೆ, ಕೆರೆ-ಗುಂಟೆಗಳಲ್ಲಿ ನೀರು ಬರಿದಾಗಿರುವುದು, ತೇವಾಂಶ ಭರಿತ ಮೋಡ ಇಲ್ಲದಿರುವುದು, “ಎಲ್​ ನಿನೋ’ ಪ್ರಬಾವ ಸೇರಿ ಇತರ ಕಾರಣಗಳಿಂದ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಳವಾಗುತ್ತಿದೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ.ಈ ಬಾರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆ.
    ಡಾ.ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts