More

    ಕಾಡಿನಿಂದ ನಾಡಿಗೆ ಬಂದ ಜಿಂಕೆ ರಕ್ಷಣೆ

    ಚನ್ನಪಟ್ಟಣ: ತಾಲೂಕಿನ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಶನಿವಾರ ಸಂಜೆ ದಾರಿ ತಪ್ಪಿ ಬಂದ್ದಿದ್ದ ಗಂಡು ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
    ಚನ್ನಪ್ಪಾಜಿ ಬೆಟ್ಟದ ಕಡೆಯಿಂದ ದಾರಿ ತಪ್ಪಿ ಗ್ರಾಮಕ್ಕೆ ಬಂದ ಕೊಂಬುವುಳ್ಳ 7 ವರ್ಷದ ಚುಕ್ಕಿ ಜಿಂಕೆಯನ್ನು ಗ್ರಾಮದ ನಾಯಿಗಳು ಓಡಿಸಿಕೊಂಡು ಬಂದಿವೆ. ಜಿಂಕೆಯು ಹೆದರಿ ಗ್ರಾಮದ ವಸಂತಮ್ಮ ಅವರ ಮನೆಗೆ ನುಗ್ಗಿದೆ. ಈ ವೇಳೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದೆ.

    ಜಿಂಕೆ ನೋಡಿ ಮನೆಯವರು ಗಾಬರಿಗೊಂಡಿದ್ದಾರೆ. ಇದನ್ನು ಕಂಡ ಗ್ರಾಮದವರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ಆ ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಾತನೂರು ವಿಭಾಗದ ಸಿಬ್ಬಂದಿ ಜಿಂಕೆಯನ್ನು ವಶಕ್ಕೆ ಪಡೆದುಕೊಂಡರು. ಕುಡಿಯುವ ನೀರು ಅರಸಿಕೊಂಡು ಜಿಂಕೆ ಕಾಡಿನಿಂದ ನಾಡಿಗೆ ಬಂದಿದೆ.

    ಇದಕ್ಕೆ ಆರೋಗ್ಯ ತಪಾಸಣೆ ನಡೆಸಿ, ಆ ನಂತರ ಮೇಲಧಿಕಾರಿಗಳ ಸೂಚನೆ ಮೇರೆಗೆ ಅರಣ್ಯಕ್ಕೆ ಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts