More

    ಒಂದು ದೇಶ ಒಂದು ಚುನಾವಣೆ: ರಾಷ್ಟ್ರಪತಿಗೆ ವ್ಯಾಪಕ ವರದಿ ಸಲ್ಲಿಕೆ, ಜಾರಿ ಮಾಡಲು ಸಮಿತಿ ಶಿಫಾರಸು

    ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಪ್ರಸ್ತಾವನೆಗಳಲ್ಲಿ ಒಂದಾದ “ಒಂದು ದೇಶ ಒಂದು ಚುನಾವಣೆ” ಕುರಿತಾದ ವ್ಯಾಪಕ ವರದಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನೇತೃತ್ವದ ಸಮಿತಿ ಇಂದು (ಮಾರ್ಚ್​ 14) ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಸಲ್ಲಿಸಿದೆ.

    ಏಕಕಾಲಿಕ ಚುನಾವಣೆಯನ್ನು ದೇಶದಲ್ಲಿ ಮರುಸ್ಥಾಪನೆ ಮಾಡಲು ಕೇಂದ್ರ ಸರ್ಕಾರವು ಕಾನೂನುಬದ್ಧವಾಗಿ ಸಮರ್ಥನೀಯ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕೆಂದು ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ. ವ್ಯಾಪಕ ವರದಿಯು 18,626 ಪುಟಗಳನ್ನು ಒಳಗೊಂಡಿದೆ. 2023ರ ಸೆಪ್ಟೆಂಬರ್​ 2ರಿಂದ ಆರಂಭವಾಗಿ ತಜ್ಞರು, ಮಧ್ಯಸ್ಥಗಾರರು ಮತ್ತು 191 ದಿನಗಳ ಸಂಶೋಧನಾ ಕಾರ್ಯ ಸೇರಿದಂತೆ ವ್ಯಾಪಕ ಸಮಾಲೋಚನೆಯೊಂದಿಗೆ ಈ ವರದಿಯು ಸಿದ್ಧವಾಗಿದೆ.

    ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ನಿಯೋಗ ವರದಿಯನ್ನು ಸಲ್ಲಿಕೆ ಮಾಡಿದೆ. ಪಕ್ಷಗಳು, ತಜ್ಞರು ಮತ್ತು ಇತರೆ ಮಧ್ಯಸ್ಥಗಾರರ ಸಲಹೆಗಳ ಆಧಾರದ ಮೇಲೆ, ಏಕಕಾಲಿಕ ಚುನಾವಣಾ ಪ್ರಕ್ರಿಯೆಯು ದೇಶದ ಒಟ್ಟಾರೆ ಆಡಳಿತದಲ್ಲಿ ಮೂಲಭೂತ ಪರಿವರ್ತನೆಯನ್ನು ತರುತ್ತವೆ ಎಂದು ಸಮಿತಿಯು ಸರ್ವಾನುಮತದ ಅಭಿಪ್ರಾಯವನ್ನು ಹೊಂದಿದೆ ಎಂದು ವರದಿ ಹೇಳಿದೆ.

    ಸಾರ್ವತ್ರಿಕ ಚುನಾವಣೆಗಳ ಜತೆಗೆ ಪಂಚಾಯತ್ ಮತ್ತು ಪುರಸಭೆಗಳಲ್ಲಿ ಏಕಕಾಲಿಕ ಚುನಾವಣೆಗಳನ್ನು ಸಕ್ರಿಯಗೊಳಿಸಲು 324ಎ ಪರಿಚ್ಛೇದವನ್ನು ಪರಿಚಯಿಸಲು ಸಮಿತಿಯು ಶಿಫಾರಸು ಮಾಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕು ಮತ್ತು ಅದು ಪೂರ್ಣಗೊಂಡ 100 ದಿನಗಳಲ್ಲಿ ಪುರಸಭೆ ಮತ್ತು ಪಂಚಾಯತ್ ಚುನಾವಣೆಗಳನ್ನು ನಡೆಸಬೇಕು ಎಂದು ವರದಿ ಸೂಚಿಸಿದೆ.

    ಅಂದಹಾಗೆ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನೇತೃತ್ವದ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ, ರಾಜ್ಯಸಭೆಯ ಮಾಜಿ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್​, ಹಣಕಾಸು ಆಯೋಗದ ಮಾಜಿ ಮುಖ್ಯಸ್ಥ ಎನ್​.ಕೆ. ಸಿಂಗ್​, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಶ್​ ಕಶ್ಯಪ್​ ಮತ್ತು ಹಿರಿಯ ವಕೀಲ ಹರೀಶ್​ ಸಾಳ್ವೆ ಕೂಡ ಇದ್ದರು. (ಏಜೆನ್ಸೀಸ್​)

    ನಿಮ್ಮಿಂದ ಆಗಲ್ಲ ಅಂದ್ರೆ ಸುಮ್ಮನಿರಿ… ಬಿಜೆಪಿ ನಾಯಕಿ ಖುಷ್ಬೂ ವಿರುದ್ಧ ಹಿರಿಯ ನಟಿ ಅಂಬಿಕಾ ಆಕ್ರೋಶ

    ತುಕಾಲಿ ಸಂತೋಷ್​ ಕಾರು ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಆಟೋ ಚಾಲಕ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts