More

    ತಾಯಿ-ಮಗಳು ಇಬ್ಬರೂ ಒಟ್ಟಿಗೇ ಪಿಯುಸಿ ಪಾಸ್; 45ನೇ ವಯಸ್ಸಲ್ಲಿ ಮಹಿಳೆಯ ಸಾಧನೆ

    ಮಂಗಳೂರು: ಎಸ್​ಎಸ್​ಎಲ್​​ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶದ ಸಂದರ್ಭದಲ್ಲಿ ಇಂಥ ಒಂದೊಂದು ಪ್ರಸಂಗಗಳು ಆಗಾಗ ವರದಿ ಆಗುತ್ತಿರುತ್ತವೆ. ಈ ಸಲವೂ ಒಂದು ವಿಶೇಷ ಪ್ರಕರಣ ವರದಿಯಾಗಿದ್ದು, ಇಲ್ಲಿ ತಾಯಿ-ಮಗಳು ಇಬ್ಬರೂ ಒಟ್ಟಿಗೇ ಪಿಯುಸಿ ಪಾಸ್ ಆಗಿದ್ದಾರೆ.

    ಇದನ್ನೂ ಓದಿ: 1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!

    ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ಇಂಥದ್ದೊಂದು ಪ್ರಕರಣ ಕಂಡುಬಂದಿದೆ. ಸುಳ್ಯದ ಜಯನಗರ ಎಂಬಲ್ಲಿನ ನಿವಾಸಿ ರಮೇಶ್ ಅವರ ಪತ್ನಿ ಗೀತಾ ಮತ್ತು ಪುತ್ರಿ ತ್ರಿಷಾ ಇಬ್ಬರೂ ಒಂದೇ ವರ್ಷದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗೀತಾ ತನ್ನ 45ನೇ ವಯಸ್ಸಿನಲ್ಲಿ ಓದಿ ಪರೀಕ್ಷೆ ಪಾಸಾಗಿರುವ ಕುರಿತು ಸ್ಥಳೀಯರು ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. ಪುತ್ರಿ ತ್ರಿಷಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಪರೀಕ್ಷೆ ಬರೆದಿದ್ದು, ತಾಯಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾರೆ.

    ಇದನ್ನೂ ಓದಿ: ದ್ವಿತೀಯ ಪಿಯುಸಿ ದಾಖಲೆಯ ಫಲಿತಾಂಶ; ದಾಖಲೆಗೆ ಕಾರಣವೇನು? ಈ ಸಲದ ರಿಸಲ್ಟ್​ ವಿಶೇಷಗಳೇನು?

    ಗೀತಾ ಸುಳ್ಯ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿದ್ದು, 25 ವರ್ಷಗಳ ಹಿಂದೆ ಹೈಸ್ಕೂಲ್​ನಲ್ಲೇ ಅವರ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಆದರೆ ಎರಡು ವರ್ಷಗಳ ಹಿಂದೆ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆದು ಪಾಸಾಗಿರುವ ಗೀತಾ ಈ ಸಲ ಪಿಯುಸಿ ತೇರ್ಗಡೆ ಹೊಂದಿದ್ದಾರೆ. ತಾಯಿ-ಮಗಳು ಇಬ್ಬರೂ ಒಂದೇ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು.

    ‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!

    ಆರ್‌ಟಿಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಪಾಲಕರ ಒತ್ತಾಯಕ್ಕೆ ಸ್ಪಂದಿಸಿದ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts