ಬೆಂಗಳೂರು: ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬ್ಲೂ ಟಿಕ್ ವೆರಿಫಿಕೇಷನ್ದೇ ಮಾತುಕತೆ. ಬ್ಲೂ ಟಿಕ್ಗೆ ವಿಧಿಸಲಾಗುತ್ತಿರುವ ಮೊತ್ತ ಪಾವತಿಸದ ಸೆಲೆಬ್ರಿಟಿಗಳ ಖಾತೆಯಲ್ಲಿನ ವೆರಿಫಿಕೇಷನ್ ಮಾರ್ಕ್ಗಳನ್ನು ಎಲನ್ ಮಸ್ಕ್ ತೆಗೆದು ಹಾಕಿರುವುದು ಇಂದು ಸಂಚಲನ ಸೃಷ್ಟಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ನಟ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರ ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ ಇಂದು ಕಾಣೆಯಾಗಿದೆ. ‘ನಾನು ಚಂದಾದಾರಿಕೆ ಸೇವೆಗಾಗಿ ಪಾವತಿಸಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಹಿಂದಿರುಗಿಸಿ, ಇದರಿಂದ ಜನರಿಗೆ ನಾನೇ ಅಮಿತಾಭ್ ಬಚ್ಚನ್ ಎಂದು ತಿಳಿಯುತ್ತದೆ’ ಎಂಬುದಾಗಿ ಟ್ವೀಟ್ ಮಾಡಿ ಅಮಿತಾಭ್ ಕೋರಿಕೊಂಡಿದ್ದೂ ಕಂಡುಬಂದಿದೆ.
ಇದನ್ನೂ ಓದಿ: ಶ್ರೀರಾಮುಲು ಮಾತ್ರವಲ್ಲ, ಅವರ ಪತ್ನಿ ಮತ್ತು ಮಕ್ಕಳಿಬ್ಬರೂ ಕೋಟ್ಯಧಿಪತಿಗಳು!
ಈ ಮಧ್ಯೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ‘ಏನಾದರೂ ಆಸಕ್ತಿಕರ ಪ್ರಶ್ನೆಗಳನ್ನು ಕೇಳಿ’ ಎಂದು ಇಂದು #AskSachin ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿ ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ‘ಈಗ ಬ್ಲೂ ಟಿಕ್ ಇರದ್ದರಿಂದ ನೀವೇ ನಿಜವಾದ ಸಚಿನ್ ತೆಂಡುಲ್ಕರ್ ಎಂದು ನಮಗೆ ಖಚಿತವಾಗುವುದು ಹೇಗೆ?’ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿ ಕಮೆಂಟ್ ಮಾಡಿದ್ದರು.
ಆ ಕಮೆಂಟ್ ಕೋಟ್-ಟ್ವೀಟ್ ಮಾಡಿರುವ ಸಚಿನ್ ತೆಂಡುಲ್ಕರ್, ಅದರ ಜತೆಗೆ ಬ್ಲೂ ಶರ್ಟ್ ತೊಟ್ಟಿರುವ ತಮ್ಮದೊಂದು ಸೆಲ್ಫಿ ಸೇರಿಸಿ, ಸದ್ಯಕ್ಕೆ ಇದೇ ನನ್ನ ಬ್ಲೂ ಟಿಕ್ ವೆರಿಫಿಕೇಷನ್ ಎಂದು ಪೋಸ್ಟ್ ಮಾಡಿದ್ದರು. ಈ ಟ್ವೀಟ್ಗೆ ಭರ್ಜರಿ ಲೈಕ್-ಕಮೆಂಟ್-ರಿಟ್ವೀಟ್ಗಳು ಬಂದಿವೆ.
As of now, this is my blue tick verification! 😬 https://t.co/BSk5U0zKkp pic.twitter.com/OEqBTM1YL2
— Sachin Tendulkar (@sachin_rt) April 21, 2023
ಗೂಂಡಾ ಕಾಯ್ದೆಯಡಿ ಬಂಧಿತ ಆಪ್ತನ ಮನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ!