ಸಿನಿಮಾ

ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

ನವದೆಹಲಿ: ಅಲ್ಬರ್ಟ್​ ಐನ್​ಸ್ಟೀನ್, ಸ್ಟೀಫನ್ ಹಾಕಿಂಗ್​ ಎಂದರೆ ಮಹಾನ್ ಪ್ರತಿಭಾವಂತರು, ಬುದ್ಧಿವಂತರು. ಆದರೆ ಹನ್ನೊಂದು ವರ್ಷದ ಹುಡುಗಿಯೊಬ್ಬಳು ಇವರಿಬ್ಬರಿಗಿಂತಲೂ ಬುದ್ಧಿವಂತೆ ಎನಿಸಿಕೊಂಡಿದ್ದಾಳೆ. ಅರ್ಥಾತ್ ಇವರಿಬ್ಬರು ಹೊಂದಿದ್ದ ಐಕ್ಯೂಗಿಂತಲೂ ಹೆಚ್ಚಿನ ಐಕ್ಯೂ ಈ ಹುಡುಗಿ ಹೊಂದಿದ್ದಾಳೆ.

ಇದನ್ನೂ ಓದಿ: ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

ಮೆಕ್ಸಿಕೊದಲ್ಲಿನ ಆಟಿಸಂ ಪೀಡಿತ ಈ ಹುಡುಗಿಯ ಹೆಸರು ಅಧರ ಪೆರೆಜ್ ಸ್ಯಾಂಸೆಜ್ (Adhara Pérez Sánchez). ಬರೀ ಹನ್ನೊಂದು ವರ್ಷದ ಈಕೆ ಐನ್​ಸ್ಟೀನ್, ಸ್ಟೀಫನ್ ಹಾಕಿಂಗ್​ಗಿಂತಲೂ ಅಧಿಕ ಬುದ್ಧಿಮತ್ತೆಯ ಪ್ರಮಾಣ (ಇಂಟೆಲಿಜೆನ್ಸ್ ಕೋಷಂಟ್-ಐಕ್ಯೂ) ಹೊಂದಿದ್ದಾಳೆ. ಐನ್​ಸ್ಟೀನ್-ಹಾಕಿಂಗ್ 160 ಐಕ್ಯೂ ಹೊಂದಿದ್ದರು, ಆದರೆ ಈಕೆಯ ಐಕ್ಯೂ 162.

ಇದನ್ನೂ ಓದಿ: ಗೆಲುವಿಗಾಗಿ ಗ್ಯಾಸ್ ಸಿಲಿಂಡರ್​ ಮೊರೆಹೋದ ಡಿ.ಕೆ.ಶಿವಕುಮಾರ್​; ಮೋದಿ ತಂತ್ರವನ್ನೇ ಅನುಸರಿಸಿದ ಕೆಪಿಸಿಸಿ!

ಈಕೆ ಮುಂದೆ ನಾಸಾ ಗಗನಯಾತ್ರಿ ಆಗುವ ಕನಸು ಹೊಂದಿದ್ದಾಳೆ. ಮೂರನೇ ವಯಸ್ಸಿನಲ್ಲೇ ಆಟಿಸಂಗೆ ಒಳಗಾದ ಈಕೆ ಸಾಕಷ್ಟು ಅವಮಾನ, ಸಮಸ್ಯೆಗಳನ್ನು ಎದುರಿಸಿದ್ದಳು. ಸಹಪಾಠಿಗಳು ಹಾಗೂ ಶಿಕ್ಷಕರ ಅವಹೇಳನದಿಂದಾಗಿ ಈಕೆ ಮೂರು ಸಲ ಶಾಲೆ ಬಿಡುವಂತಾಗಿತ್ತು. ನಂತರ ತಾಯಿಯೇ ಈಕೆಗೆ ಕೆಲವು ಪಾಠ ಹೇಳಿಕೊಟ್ಟಿದ್ದು, ಬಳಿಕ ಸೆಂಟರ್ ಫಾರ್ ಅಟೆನ್ಷನ್ ಟು ಟ್ಯಾಲೆಂಟ್ (CEDAT) ಕೇಂದ್ರಕ್ಕೆ ಸೇರಿಸಿದ್ದು, ಈಕೆ 162 ಐಕ್ಯೂ ಹೊಂದಿದ್ದು ಅಲ್ಲಿ ಖಚಿತಗೊಂಡಿತ್ತು. –ಏಜೆನ್ಸೀಸ್

ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?

ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

Latest Posts

ಲೈಫ್‌ಸ್ಟೈಲ್