ಸಿನಿಮಾ

ವಾಟ್ಸ್ಆ್ಯಪ್ ಮೂಲಕ ವಂಚನೆ; ಸುರಕ್ಷತೆಗಾಗಿ ನೀವು ಮಾಡಬೇಕಾದ್ದೇನು?

ಬೆಂಗಳೂರು: ವಾಟ್ಸ್​ಆ್ಯಪ್ ಮೂಲಕ ಆರ್ಥಿಕ ವಂಚನೆ ಎಸಗುತ್ತಿರುವ ಪ್ರಕರಣಗಳು ಅಧಿಕವಾಗುತ್ತಿದ್ದು, ಇತ್ತೀಚೆಗೆ ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವ ಮುಖೇನವೂ ಮೋಸ ಮಾಡಲಾಗುತ್ತಿದೆ. ಅಲ್ಲದೆ ವಾಟ್ಸ್​ಆ್ಯಪ್​ಗೆ ಅಂತಾರಾಷ್ಟ್ರೀಯ ಕರೆಗಳು ಬರುತ್ತಿರುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಕೆಳಗಿನ ಅಂಶಗಳನ್ನು ಪಾಲಿಸುವುದು ಒಳಿತು.

  • ಮೊದಲನೆಯದಾಗಿ ಅಪರಿಚಿತ ನಂಬರ್​ಗಳಿಂದ ಬರುವ ಅಂತಾರಾಷ್ಟ್ರೀಯ ಕರೆಗಳನ್ನು ಸ್ವೀಕರಿಸಲೇಬೇಡಿ. ಅಂಥ ಕರೆಗಳನ್ನು ಸ್ವೀಕರಿಸುವುದೇ ಅಪಾಯಕ್ಕೆ ಬಾಗಿಲು ತೆರೆದಂತೆ. ಹೀಗಾಗಿ ಅಂಥ ಕರೆಗಳನ್ನು ಬಂದಾಗ ನಿರ್ಲಕ್ಷಿಸಿ.
  • ಅಂತಾರಾಷ್ಟ್ರೀಯ ಕರೆಗಳು ಪದೇಪದೆ ಬರಲಾರಂಭಿಸಿದರೆ ಅಂಥ ನಂಬರ್​ಗಳನ್ನು ಬ್ಲಾಕ್ ಮಾಡಿ.

ಇದನ್ನೂ ಓದಿ: ಮತ ಚಲಾಯಿಸಿದ ಬೆನ್ನಿಗೇ ‘ಕರೆಂಟ್ ಶಾಕ್​’: ಏ. 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ!

  • ನಿಮಗೆ ಬಂಪರ್ ಬಹುಮಾನ ಬಂದಿದೆ, ನೀವು ಲಕ್ಕಿ ಡ್ರಾನಲ್ಲಿ ಗೆದ್ದಿದ್ದೀರಿ, ನಗದು ಪಡೆಯಲು ಅಥವಾ ಬಹುಮಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ ಎಂದೆಲ್ಲ ಬರುವ ಮೆಸೇಜ್​​ಗಳಿಗೆ ಪ್ರತಿಕ್ರಿಯಿಸಬೇಡಿ. ಅಪ್ಪಿತಪ್ಪಿಯೂ ಅಂಥ ಲಿಂಕ್​ಗಳನ್ನು ಕ್ಲಿಕ್ ಮಾಡಬೇಡಿ.
  • ಸ್ಪ್ಯಾಮ್​, ಫ್ರಾಡ್​ ಅಥವಾ ವಂಚನೆಯ ಜಾಲದ ನಂಬರ್ ಎಂದು ನಿಮಗೆ ಅನಿಸಿದಲ್ಲಿ ಹಾಗೂ ಅಂತಾರಾಷ್ಟ್ರೀಯ ಇಲ್ಲವೇ ಆರ್ಥಿಕ ಆಮಿಷದ ಕರೆಗಳು ಪದೇಪದೆ ಬರುತ್ತಿದ್ದರೆ ಅಂಥ ನಂಬರ್​ಗಳನ್ನು ರಿಪೋರ್ಟ್ ಮಾಡಿ.
  • ಎಲ್ಲಕ್ಕಿಂತ ಮುಖ್ಯವಾಗಿ ನೀವು ವಾಟ್ಸ್​ಆ್ಯಪ್​ನಲ್ಲಿ ಟು-ಫ್ಯಾಕ್ಟರ್​ ವೆರಿಫಿಕೇಷನ್ ಆ್ಯಕ್ಟಿವೇಟ್ ಮಾಡಿಕೊಂಡಿರಿ. ಇದು ನಿಮ್ಮ ವಾಟ್ಸ್​ಆ್ಯಪ್ ಖಾತೆಗೆ ಸುಲಭದ ಪ್ರವೇಶವನ್ನು ತಡೆದು, ಹೆಚ್ಚಿನ ಸುರಕ್ಷತೆ ನೀಡುತ್ತದೆ.

ಇನ್ನು ಕಾರ್ಪೋರೇಟ್ ಕಚೇರಿಗಳಲ್ಲೂ ಬಾರ್!; ಅಬಕಾರಿ ನೀತಿಯಲ್ಲೇ ಅವಕಾಶ: ಎಲ್ಲಿ, ಷರತ್ತುಗಳೇನು?

ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

Latest Posts

ಲೈಫ್‌ಸ್ಟೈಲ್